ಒಡಿಯನ್ ಸಿನಿಮಾ ನಿರ್ದೇಶಕರ ವಿರುದ್ಧ ದೂರು ದಾಖಲಿಸಿದ  ನಟಿ ಮಂಜು ವಾರಿಯರ್

ಒಡಿಯನ್ ಸಿನಿಮಾ ನಿರ್ದೇಶಕ  ವಿ.ಎ ಶ್ರೀಕುಮಾರ್ ವಿರುದ್ಧ ನಟಿ ಮಂಜು ವಾರಿಯರ್  ಕೇರಳ ಡಿಜಿಪಿ ಅವರಿಗೆ ದೂರು ನೀಡಿದ್ದಾರೆ.

Published: 22nd October 2019 12:33 PM  |   Last Updated: 22nd October 2019 12:33 PM   |  A+A-


Manju Warrier

ಮಂಜು ವಾರಿಯರ್

Posted By : Shilpa D
Source : The New Indian Express

ಒಡಿಯನ್ ಸಿನಿಮಾ ನಿರ್ದೇಶಕ  ವಿ.ಎ ಶ್ರೀಕುಮಾರ್ ವಿರುದ್ಧ ನಟಿ ಮಂಜು ವಾರಿಯರ್  ಕೇರಳ ಡಿಜಿಪಿ ಅವರಿಗೆ ದೂರು ನೀಡಿದ್ದಾರೆ.

2018ರ ಡಿಸೆಂಬರ್ ನಲ್ಲಿ  ಒಡಿಯನ್ ಚಿತ್ರ ರಿಲೀಸ್ ಆಗಿತ್ತು,  ಅದಾದ ನಂತರ ಶ್ರೀ ಕುಮಾರ್  ಮೆನನ್ ಸಾಮಾಜಿಕ ಮಾಧ್ಯಮದಲ್ಲಿ ಆಕೆಯ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಗಳನ್ನು ಹಾಕಿ ಅವರ ಸ್ನೇಹಿತರ ಮೂಲಕ ಬೆದರಿಕೆ ಹಾಕಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ,

ಸೋಮವಾರ ಕೇರಳ ಡಿಜಿಪಿ ಅವರ ಮನೆಗೆ ತೆರಳಿದ್ದ ನಟಿ ಮಂಜು ವಾರಿಯರ್ ದೂರು ದಾಖಲಿಸಿದ್ದಾರೆ. ಜೊತೆಗೆ ಕಲವು ಸಾಕ್ಷ್ಯಾಧಾರಗಳನ್ನು ಕೂಡ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ,

ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಘನತೆಗೆ ಧಕ್ಕೆ ಬರುವಂತ ಪೋಸ್ಟ್ ಗಳನ್ನು ಹಾಕಿದ್ದಾರೆ,ಅದಕ್ಕೆ ಅವರ ಸ್ನೇಹಿತ ಮಾಥ್ಯೂ ಸ್ಯಾಮ್ಯುಯೆಲ್ ಸಹಾಯ ಮಾಡಿದ್ದಾರೆ ಎಂದುದೂರಿದ್ದಾರೆ.,

ಇನ್ನು ತಮ್ಮ ಒಡೆತನದ ಮಂಜು ವಾರಿಯರ್ ಫೌಂಡೇಶನ್ ನ  ಲೆಟರ್ ಹೆಡ್ ಮತ್ತು ಬ್ಲಾಂಕ್ ಚೆಕ್ಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇನ್ನೂ ದೂರಿನ ಬಗ್ಗೆ ಸ್ಪಷ್ಟನೆ ನೀಡಿರುವ ಪೊಲೀಸರು, ಮಂಜುವಾರಿಯರ್ ದೂರು ನೀಡಿದ್ದು, ಐಜಿ ರ್ಯಾಂಕ್ ಅಧಿಕಾರಿಗಳು ತನಿಖೆ ನಡೆಸಲು ಸೂಚಿಸಿರುವುದಾಗಿ ತಿಳಿಸಿದ್ದಾರೆ

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp