ಶಿವಣ್ಣನ ಮುಂದಿನ ಚಿತ್ರಕ್ಕೆ ನಾಯಕಿ ಬೇಕಾಗಿದ್ದಾರೆ!

ನಟ ಶಿವರಾಜ್ ಕುಮಾರ್ ಅವರ ಮುಂದಿನ ಬಹು ನಿರೀಕ್ಷಿತ ಚಿತ್ರಕ್ಕೆ ನಾಯಕ ನಟಿ ಇನ್ನೂ ಅಂತಿಮವಾಗಿಲ್ಲ ಎಂದು ಚಿತ್ರತಂಡ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಟ ಶಿವರಾಜ್ ಕುಮಾರ್ ಅವರ ಮುಂದಿನ ಬಹು ನಿರೀಕ್ಷಿತ ಚಿತ್ರಕ್ಕೆ ನಾಯಕ ನಟಿ ಇನ್ನೂ ಅಂತಿಮವಾಗಿಲ್ಲ ಎಂದು ಚಿತ್ರತಂಡ ಹೇಳಿದೆ.

ಹೌದು.. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನಟನೆಯ ರವಿ ಅರಸು ನಿರ್ದೇಶನದ ಚಿತ್ರಕ್ಕೆ ಇನ್ನೂ ನಾಯಕ ನಟಿಯ ಆಯ್ಕೆ ಅಂತಿಮವಾಗಿಲ್ಲ. ಈ ಹಿಂದೆ ನಟಿ ಪ್ರಣಿತಾ ಸುಭಾಷ್ ಅವರ ಆಯ್ಕೆ ಅಂತಿಮವಾಗಿತ್ತು ಎಂದು ಹೇಳಲಾಗಿತ್ತು. ಆದರೆ ಈ ಕುರಿತಂತೆ ಸ್ಪಷ್ಟನೆ ನೀಡಿರುವ ಚಿತ್ರತಂಡ ಚಿತ್ರಕ್ಕೆ ಪ್ರಣೀತಾ ಸುಭಾಷ್ ರನ್ನು ಸಂಪರ್ಕಿಸಲಾಗಿತ್ತು. ಆದರೆ ಅವರ ಆಯ್ಕೆ ಅಂತಿಮವಾಗಿಲ್ಲ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.

ಪ್ರಸ್ತುತ ಶಿವಣ್ಣನ ಆಯುಷ್ಮಾನ್ ಭವ ಚಿತ್ರ ತೆರೆ ಕಾಣಲು ಸಿದ್ಧವಾಗಿದ್ದು, ತಾಂತ್ರಿಕ ಕಾರಣದಿಂದಾಗಿ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲಾಗಿದೆ. ಆ ಚಿತ್ರ ತೆರೆಕಂಡ  ಬಳಿಕ ಹೊಸ ಚಿತ್ರದ ಚಿತ್ರತಂಡದ ಆಯ್ಕೆ ನಡೆಯಲಿದೆ. ಇನ್ನೂ ಹೆಸರಿಡದ ಈಚಿತ್ರದಲ್ಲಿ ಶಿವಣ್ಣ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದು, ಸೇಡಿನ ಸುತ್ತ ಚಿತ್ರಕಥೆ ತಿರುಗುತ್ತದೆ ಎಂದು ಹೇಳಲಾಗಿದೆ. ಫೆಬ್ರವರಿಯಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com