ತಮಿಳು ಚಿತ್ರ ವೀಕ್ಷಣೆ ವೇಳೆ ಕನ್ನಡ ನಟನ ಮುಂದೆ ರಾಷ್ಟ್ರಗೀತೆಗೆ ಎದ್ದು ನಿಲ್ಲದ ವಿದ್ಯಾರ್ಥಿಗಳಿಗೆ ಚೀಮಾರಿ, ವಿಡಿಯೋ!

ಒರಾಯನ್ ಮಾಲ್ ನಲ್ಲಿ ಚಿತ್ರ ವೀಕ್ಷಣೆ ವೇಳೆ ರಾಷ್ಟ್ರಗೀತೆಗೆ ಎದ್ದು ನಿಲ್ಲದ ಯುವಕ ಮತ್ತು ಯುವತಿಯರನ್ನು ನಿಂದಿಸಿ ಅವರನ್ನು ಚಿತ್ರಮಂದಿರದಿಂದ ಹೊರಗೆ ಕಳುಹಿಸುವ ಘಟನೆ ವರದಿಯಾಗಿದೆ.
ಘಟನಾ ದೃಶ್ಯ
ಘಟನಾ ದೃಶ್ಯ

ಬೆಂಗಳೂರು: ಒರಾಯನ್ ಮಾಲ್ ನಲ್ಲಿ ಚಿತ್ರ ವೀಕ್ಷಣೆ ವೇಳೆ ರಾಷ್ಟ್ರಗೀತೆಗೆ ಎದ್ದು ನಿಲ್ಲದ ಯುವಕ ಮತ್ತು ಯುವತಿಯರನ್ನು ನಿಂದಿಸಿ ಅವರನ್ನು ಚಿತ್ರಮಂದಿರದಿಂದ ಹೊರಗೆ ಕಳುಹಿಸುವ ಘಟನೆ ವರದಿಯಾಗಿದೆ. 

ತಮಿಳು ನಟ ಧನುಷ್ ಅಭಿನಯದ ಅಸುರಂ ಚಿತ್ರ ಒರೆಯಾನ್ ಮಾಲ್ ನಲ್ಲಿ ಪ್ರದರ್ಶನಗೊಳ್ಳುತ್ತಿತ್ತು. ಈ ಚಿತ್ರವನ್ನು ವೀಕ್ಷಿಸಲು ಕನ್ನಡದ ನಟ ಅರುಣ್ ಗೌಡ ಸಹ ತಮ್ಮ ಸ್ನೇಹಿತರೊಂದಿಗೆ ತೆರಳಿದ್ದರು. ಈ ವೇಳೆ ಚಿತ್ರ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಕಲಾಗಿತ್ತು. ಈ ವೇಳೆ ಇಬ್ಬರು ಯುವಕರು ಮತ್ತು ಯುವತಿಯರಿಬ್ಬರು ಎದ್ದು ನಿಂತಿಲ್ಲ. ಇದನ್ನು ಮೊದಲಿಗೆ ಅರುಣ್ ಗೌಡ ಅವರು ಪ್ರಶ್ನಿಸಿದ್ದಾರೆ. 

ನಂತರ ಇತರ ಪ್ರೇಕ್ಷಕರು ಸಹ ಬಂದ ಅವರನ್ನು ಯಾಕೆ ರಾಷ್ಟ್ರಗೀತೆಗೆ ಎದ್ದು ನಿಂತು ಗೌರವ ತೋರಿಲ್ಲ. ನೀವೆಲ್ಲಾ ಪಾಕಿಸ್ತಾನ ಉಗ್ರರೆಂದು ನಿಂದಿಸಿ ಅವರನ್ನು ಮಾಲ್ ನಿಂದ ಹೊರಗೆ ಕಳುಹಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. 

ಕೆಲವರು ಇದನ್ನು ವಿರೋಧಿಸಿದ್ದರೆ ಇನ್ನು ಕೆಲವರು ಇದನ್ನು ಸಮರ್ಥಿಸಿಕೊಂಡಿದ್ದಾರೆ. ಪ್ರಸಾದ್ ಎಂಬಾಂತ ರಾಷ್ಟ್ರಗೀತೆ ವೇಳೆ ಎದ್ದು ನಿಲ್ಲಲೇಬೇಕೆಂದು ಸಂವಿಧಾನದಲ್ಲಿ ಎಲ್ಲಿಯೂ ಹೇಳಿಲ್ಲ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾನೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com