ದರ್ಶನ್
ದರ್ಶನ್

ನ.1ಕ್ಕೆ ಅಭಿಮಾನಿಗಳಿಗೆ ದರ್ಶನ್ ಭರ್ಜರಿ ಗಿಫ್ಟ್, ಒಡೆಯ ಟೀಸರ್ ಬಿಡುಗಡೆ!

ಕನ್ನಡ ರಾಜ್ಯೋತ್ಸವಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಲಿದ್ದು ಒಡೆಯ ಚಿತ್ರದ ಟೀಸರ್ ಮೂಲಕ ಕಿಕ್ ಕೊಡಲಿದ್ದಾರೆ.

ಕನ್ನಡ ರಾಜ್ಯೋತ್ಸವಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಲಿದ್ದು ಒಡೆಯ ಚಿತ್ರದ ಟೀಸರ್ ಮೂಲಕ ಕಿಕ್ ಕೊಡಲಿದ್ದಾರೆ.

ನವೆಂಬರ್ 1ರಂದು ಬೆಳಗ್ಗೆ 9.55ಕ್ಕೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಒಡೆಯ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ ಎಂದು ದರ್ಶನ್ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 

ಚಿತ್ರವನ್ನು ಎಂಡಿ ಶ್ರೀಧರ್ ನಿರ್ದೇಶಿಸುತ್ತಿದ್ದು ಸಂದೇಶ್ ನಾಗರಾಜ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಒಡೆಯ ಚಿತ್ರದಲ್ಲಿ ದೊಡ್ಡ ತಾರಾಗಣವಿದ್ದು ರಾಘವಿ ತಿಮ್ಮಯ್ಯ, ಯಶಸ್, ಪಂಕಜ್, ನಿರಂಜನ್, ಸಮರ್ಥ್, ರವಿ ಶಂಕರ್, ದೇವರಾಜ್, ಸಾಧುಕೋಕಿಲಾ, ಚಿಕ್ಕಣ್ಣ ಅಭಿನಯಿಸಿದ್ದಾರೆ. 

ಚಿತ್ರಕ್ಕೆ ಅರ್ಜುನ್ ಜನ್ಯ ಮತ್ತು ವಿ. ಹರಿಕೃಷ್ಣ ಇಬ್ಬರು ದಿಗ್ಗಜ ಸಂಗೀತ ನಿರ್ದೇಶಕರು ಸಂಗೀತ ಸಂಯೋಜಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com