ಡಿ'ಬಾಸ್ ' ಟ್ವಿಟರ್ ನಲ್ಲಿ ಡಿಚ್ಚಿ ಕೊಟ್ಟಿದ್ದು ಯಾರಿಗೆ..?

ಕುರುಕ್ಷೇತ್ರ ಯಶಸ್ಸಿನ  ಅಲೆಯಲ್ಲಿ ತೇಲುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡಿರುವ ಟ್ವೀಟ್  ಸ್ಯಾಂಡಲ್ ವುಡ್ ನಲ್ಲಿ ಸಖತ್ ಸೌಂಡ್ ಮಾಡ್ತಿದೆ. ಹಾಗೆಯೇ ತೀವ್ರ ಚರ್ಚೆಗೂ ಗ್ರಾಸವಾಗಿದೆ.

Published: 01st September 2019 12:40 AM  |   Last Updated: 01st September 2019 12:43 AM   |  A+A-


Dharshan

ದರ್ಶನ್

Posted By : Nagaraja AB
Source : Online Desk

ಬೆಂಗಳೂರು: ಕುರುಕ್ಷೇತ್ರ ಯಶಸ್ಸಿನ  ಅಲೆಯಲ್ಲಿ ತೇಲುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡಿರುವ ಟ್ವೀಟ್  ಸ್ಯಾಂಡಲ್ ವುಡ್ ನಲ್ಲಿ ಸಖತ್ ಸೌಂಡ್ ಮಾಡ್ತಿದೆ. ಹಾಗೆಯೇ ತೀವ್ರ ಚರ್ಚೆಗೂ ಗ್ರಾಸವಾಗಿದೆ.

ನಾನು ಕ್ಯಾಂಡಿಯಷ್ಟು ಸಿಹಿಯಾಗಿರಬಲ್ಲೆ. ನೀರಿನಂತೆ ತಣ್ಣಗಿರಬಲ್ಲೇ, ನರಕದಂತೆ ದುಷ್ಟನಾಗಬಲ್ಲೇ, ಯೋಧನಂತೆ ನಿಷ್ಠೆಯಿಂದರಬಲ್ಲೇ, ಆದರೆ. ಅದೆಲ್ಲವೂ ನೀವು ನನ್ನೊಂದಿಗೆ ಹೇಗೆ ಇರುತ್ತೀರಾ ಎಂಬುದನ್ನು ಅವಲಂಬಿಸಿರುತ್ತದೆ ಎಂದು ಚಾಲೆಂಜಿಂಗ್ ಸ್ಟಾರ್ ಪೋಸ್ಟ್ ಹಾಕುವ ಮೂಲಕ ತಲೆಗೆ ಹುಳ್ಳ ಬಿಟ್ಟಿದ್ದಾರೆ. ದರ್ಶನ್ ಯಾರನ್ನು ಟಾರ್ಗೆಟ್ ಮಾಡಿಕೊಂಡು ಈ ರೀತಿಯ ಪೋಸ್ಟ್ ಮಾಡಿದ್ದಾರೆ ಎಂದು ಅವರ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. 

 

ಇತ್ತೀಚಿಗೆ ಕಿಚ್ಚ ಸುದೀಪ್ ಕೂಡಾ ಇಂತಹದೊಂದು ಪೋಸ್ಟ್ ಹಾಕಿದ್ದರು. ಗಂಡಸರು ಎಂದೆನಿಸಿಕೊಳ್ಳಲು ಮದ್ಯಪಾನ ಮಾಡಬೇಕಾಗಿಲ್ಲ. ಕತ್ತಲು ಆಗಲು ಕಾಯಬೇಕಾಗಿಲ್ಲ ಎಂದು ಪೋಸ್ಟ್ ಮಾಡಿದ್ದರು. ಇದು ವೈರಲ್ ಆಗಿತ್ತಲ್ಲದೇ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು.

ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಟ್ವೀಟರ್ ನಲ್ಲಿ ಪಂಚಿಂಗ್ ಪೋಸ್ಟ್ ಹಾಕಿದ್ದು, ಡಿಬಾಸ್ ಅಭಿಮಾನಿಗಳು ಪುಲ್ ಖುಷಿ ಆಗಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp