ಪ್ರಭಾಸ್ 'ಸಾಹೋ' ಕದ್ದ ಮಾಲು, ಕೊನೇ ಪಕ್ಷ ಅದನ್ನಾದರೂ ಸರಿಯಾಗಿ ಮಾಡಿ; 'ಲಾರ್ಗೋ ವಿಂಚ್ ನಿರ್ದೇಶಕರ ಆಕ್ರೋಶ

ಪ್ರಭಾಸ್ ಅಭಿನಯದ ಸಾಹೋ ಚಿತ್ರ ಕದ್ದಮಾಲಾಗಿದ್ದು, ಕೊನೇ ಪಕ್ಷ ಚಿತ್ರವನ್ನು ಕದಿಯುವ ಕೆಲಸವನ್ನಾದರೂ ಸರಿಯಾಗಿ ಮಾಡಿ ಎಂದು ಫ್ರೆಂಚ್ ನ 'ಲಾರ್ಗೋ ವಿಂಚ್ ನಿರ್ದೇಶಕ ಜೆರೋಮ್ ಸಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಹೋ ಚಿತ್ರದ ಪೋಸ್ಟರ್ ಹಾಗೂ ಲಾರ್ಗೋ ವಿಂಚ್ ಚಿತ್ರದ ಪೋಸ್ಟರ್
ಸಾಹೋ ಚಿತ್ರದ ಪೋಸ್ಟರ್ ಹಾಗೂ ಲಾರ್ಗೋ ವಿಂಚ್ ಚಿತ್ರದ ಪೋಸ್ಟರ್

'ಸಾಹೋ ಫ್ರೀಮೇಕ್, ಮೊದಲಿಗಿಂತ ಕೆಟ್ಟದಾಗಿ ತೋರಿಸಿದ್ದೀರಾ'; ಫ್ರೆಂಚ್ ಚಿತ್ರ ನಿರ್ದೇಶಕ ಜೆರೋಮ್ ಸಲ್ಲೇ ಟ್ವೀಟ್

ಹೈದರಾಬಾದ್: ಪ್ರಭಾಸ್ ಅಭಿನಯದ ಸಾಹೋ ಚಿತ್ರ ಕದ್ದಮಾಲಾಗಿದ್ದು, ಕೊನೇ ಪಕ್ಷ ಚಿತ್ರವನ್ನು ಕದಿಯುವ ಕೆಲಸವನ್ನಾದರೂ ಸರಿಯಾಗಿ ಮಾಡಿ ಎಂದು ಫ್ರೆಂಚ್ ನ 'ಲಾರ್ಗೋ ವಿಂಚ್ ನಿರ್ದೇಶಕ ಜೆರೋಮ್ ಸಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಹುಬಲಿ ಚಿತ್ರದ ಬಳಿಕ ನಟ ಪ್ರಭಾಸ್ ತೆಲುಗು ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದು, ಅವರ ನಟನೆಯ ಬಹು ನಿರೀಕ್ಷಿತ ಚಿತ್ರ ಸಾಹೋ ಕಳೆದ ವಾರ ತೆರೆಕಂಡಿದೆ. ವಿಶ್ವದಾದ್ಯಂತ ಬಿಡುಗಡೆಯಾಗಿರುವ ಸಾಹೋ ಚಿತ್ರಕ್ಕೆ ಪ್ರೇಕ್ಷಕರು ಮುಗಿಬಿದ್ದಿದ್ದು, ಚಿತ್ರ ಬಾಕ್ಸ್‌ ಆಫೀಸ್‌ನ ಕೊಳ್ಳೆ ಹೊಡೆಯುತ್ತಿದೆ. ಈ ಹಿಂದೆ ಸಿನಿಮಾದ ಕಥೆಯ ಕುರಿತಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಈ ಮಿಶ್ರ ಪ್ರತಿಕ್ರಿಯೆ ಚಿತ್ರದ ಕಲೆಕ್ಷನ್ ಮೇಲೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರಿಲ್ಲ. ಪ್ರಭಾಸ್ ಅಭಿಮಾನಿಗಳು ಚಿತ್ರದ ಕುರಿತಂತೆ ಪರ-ವಿರೋಧ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.

ಏತನ್ಮಧ್ಯೆ ಫ್ರೆಂಚ್ ನಿರ್ದೇಶಕರೊಬ್ಬರು ಪ್ರಭಾಸ್ ಅಭಿನಯದ ಸಾಹೋ ಚಿತ್ರ ಕದ್ದ ಮಾಲು ಎಂಬ ಬಾಂಬ್ ಸಿಡಿಸಿದ್ದು, ಈ ಹಿಂದೆ ತಾವು ಫ್ರೆಂಚ್ ಭಾಷೆಯಲ್ಲಿ ನಿರ್ದೇಶಿಸಿದ್ದ ಲಾರ್ಗೋ ವಿಂಚ್ ಚಿತ್ರದಲ್ಲಿನ ಅಂಶಗಳನ್ನು ಕದ್ದು ಸಾಹೋ ಚಿತ್ರ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತಂತೆ ಲಾರ್ಗೋ ವಿಂಚ್‌ ಚಿತ್ರದ ನಿರ್ದೇಶಕ ಜೆರೋಮ್ ಸಲ್ಲೇ ಸರಣಿ ಟ್ವೀಟ್ ಮಾಡಿದ್ದು, 'ಲಾರ್ಗೋ ವಿಂಚ್ ಚಿತ್ರದ ಪೋಸ್ಟರ್‌ನ ಸಾಹೋ ಚಿತ್ರ ತಂಡ ಕಾಪಿ ಮಾಡಿದೆ ಎಂದಿದ್ದಾರೆ. ಅಲ್ಲದೇ ನನ್ನ ಕೆಲಸವನ್ನು ನೀವು ಕಾಪಿ ಮಾಡಿದ್ದೀರಿ. ಕಡೇ ಪಕ್ಷ ಕಾಪಿ ಮಾಡಿರೋದನ್ನಾದ್ರು ಸರಿಯಾಗಿ ಮಾಡಿದ್ದೀರಾ ಅಂತಾ ವ್ಯಂಗ್ಯವಾಡಿದ್ದಾರೆ. ಅಲ್ಲದೇ ಲಾರ್ಗೋ ವಿಂಚ್‌ನ ಫ್ರೀಮೇಕ್‌ ಅನ್ನು ಮೊದಲಿಗಿಂತ ಕೆಟ್ಟದಾಗಿ ತೋರಿಸಿದ್ದೀರಾ ಅಂತಾ ಕಿಡಿಕಾರಿದ್ದಾರೆ.

ಇನ್ನು ಲಾರ್ಗೋವಿಂಚ್ 2008ರಲ್ಲಿ ರಿಲೀಸ್ ಆದ ಫ್ರೆಂಚ್ ಭಾಷೆಯ ಸಿನಿಮಾವಾಗಿದ್ದು, ಜೆರೋಮ್ ಸಲ್ಲೇ ಅದರ ನಿರ್ದೇಶಕರಾಗಿದ್ದಾರೆ. ಇನ್ನು ಜೆರೋಮ್ ಸಲ್ಲೇ ಇದೇ ಮೊದಲ ಬಾರಿ ಈ ಆರೋಪ ಮಾಡಿಲ್ಲ. ಇದಕ್ಕೂ ಮುನ್ನ ತೆಲುಗು ನಿರ್ದೇಶಕರ ವಿರುದ್ಧ ತಮ್ಮ ಚಿತ್ರದ ಕಾಪಿ ಮಾಡಿರೋ ಆರೋಪವನ್ನು ಜೆರೋಮ್ ಮಾಡಿದ್ದರು. ಈ ಹಿಂದೆ ನಟ ಪವನ್ ಕಲ್ಯಾಣ್ ಅಭಿನಯದ ಅಜ್ಞಾತವಾಸಿ ಚಿತ್ರ ತೆರೆಕಂಡಾಗಲೂ ಜೆರೋಮ್ ಸಲ್ಲೇ ಇದೇ ರೀತಿಯ ಆರೋಪ ಮಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com