ಸುದೀಪ್ ನಟನೆಯ ಪೈಲ್ವಾನ್ ಸಿನಿಮಾಗೆ ರಮೇಶ್ ಅರವಿಂದ್ ಹಿನ್ನೆಲೆ ಧ್ವನಿ!

ಅಭಿನಯ ಚಕ್ರವರ್ತಿ  ಸುದೀಪ್ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ, ಸೆಪ್ಟಂಬರ್ 12 ರಂದು ರಿಲೀಸ್ ಆಗಲಿರುವ ಪೈಲ್ವಾನ್ ಸಿನಿಮಾಗಾಗಿ ಅಂತಿಮ ಹಂತದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ,  

Published: 03rd September 2019 01:35 PM  |   Last Updated: 03rd September 2019 01:35 PM   |  A+A-


Ramesh Arvind

ರಮೇಶ್ ಅರವಿಂದ್

Posted By : Shilpa D
Source : UNI

ಬೆಂಗಳೂರು: ಸೋಮವಾರ  ಗಣೇಶ ಚತುರ್ಥಿಯ ಸಂಭ್ರದಲ್ಲಿದ್ದ ಹಲವು ಪ್ರೇಕ್ಷಕರು ಕಿಚ್ಚ ಸುದೀಪ್ ಹುಟ್ಟಹಬ್ಬ ಸಮಾರಂಭದಲ್ಲಿಯೂ ಪಾಲ್ಗೊಂಡಿದ್ದರು. 

ಅಭಿನಯ ಚಕ್ರವರ್ತಿ  ಸುದೀಪ್ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ, ಸೆಪ್ಟಂಬರ್ 12 ರಂದು ರಿಲೀಸ್ ಆಗಲಿರುವ ಪೈಲ್ವಾನ್ ಸಿನಿಮಾಗಾಗಿ ಅಂತಿಮ ಹಂತದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ,  ಪೈಲ್ವಾನ್  ಸಿನಿಮಾ ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗಲಿದೆ.

ಎಸ್ ಕೃಷ್ಣ ನಿರ್ದೇಶನದ ಪೈಲ್ವಾನ್  ಸಿನಿಮಾಗೆ ವಿವಿಧ ಸೆಲೆಬ್ರಿಟಿಗಳು ಬೆಂಬಲ ನೀಡಿದ್ದಾರೆ,  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪೈಲ್ವಾನ್ ಆಡಿಯೋ ರಿಲೀಸ್ ಮಾಡಿದ್ದರೇ, ರಮೇಶ್ ಅರವಿಂದ್ ಸಿನಿಮಾದ ಆರಂಭದಲ್ಲಿ ಹಿನ್ನಲೆ ಧ್ವನಿ ನೀಡಿದ್ದಾರೆ, 

ಪೈಲ್ವಾನ್  ಸಿನಿಮಾದಲ್ಲಿ ಬರುವ ಕುಸ್ತಿ ಬಗ್ಗೆ ರಮೇಶ್ ಅರವಿಂದ್ ಸಿನಿಮಾ ಪ್ರಾರಂಭದಲ್ಲಿ ವಿವರಣೆ ನೀಡಿದ್ದಾರೆ, ಕನ್ನಡ ವರ್ಸನ್ ಗೆ ಮಾತ್ರ ರಮೇಶ್ ಅರವಿಂದ್ ಹಿನ್ನಲೆ ಧ್ವನಿ ನೀಡಿದ್ದಾರೆ, ಶನಿವಾರ ರೆಕಾರ್ಡಿಂಗ್ ನಲ್ಲಿ ರಮೇಶ್ ಭಾಗವಹಿಸಿದ್ದರು.

Stay up to date on all the latest ಸಿನಿಮಾ ಸುದ್ದಿ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp