'ಜುಗಾರಿ ಕ್ರಾಸ್' ನಿಂದ ಹಿಂದೆ ಸರಿದ ನಿರ್ದೇಶಕ ನಾಗಾಭರಣ!

ಚಿರಂಜೀವಿ ಸರ್ಜಾ ಮುಂದಿನ ಸಿನಿಮಾ ಜುಗಾರಿ ಕ್ರಾಸ್ ಚಿತ್ರವನ್ನು ನಾಗಾಭರಣ ನಿರ್ದೇಶಿಸಬೇಕಿತ್ತು. ಕಡ್ಡಿಪುಡಿ ಚಂದ್ರು ನಿರ್ಮಿಸುತ್ತಿರುವ ಜುಗಾರಿ ಕ್ರಾಸ್ ಸಿನಿಮಾಗೆ ಫೆಬ್ರವರಿ 10 ರಂದು ಸರಳ ಪೂಜೆ ಕೂಡ ನಡೆಸಲಾಗಿತ್ತು.

Published: 05th September 2019 12:05 PM  |   Last Updated: 05th September 2019 12:37 PM   |  A+A-


Nagabharana will not direct 'Jugari Cross', says producer

ನಾಗಾಭರಣ ಮತ್ತು ಚಿರಂಜೀವಿ ಸರ್ಜಾ

Posted By : Shilpa D
Source : The New Indian Express

ಚಿರಂಜೀವಿ ಸರ್ಜಾ ಮುಂದಿನ ಸಿನಿಮಾ ಜುಗಾರಿ ಕ್ರಾಸ್ ಚಿತ್ರವನ್ನು ನಾಗಾಭರಣ ನಿರ್ದೇಶಿಸಬೇಕಿತ್ತು. ಕಡ್ಡಿಪುಡಿ ಚಂದ್ರು ನಿರ್ಮಿಸುತ್ತಿರುವ ಜುಗಾರಿ ಕ್ರಾಸ್ ಸಿನಿಮಾಗೆ ಫೆಬ್ರವರಿ 10 ರಂದು ಸರಳ ಪೂಜೆ ಕೂಡ ನಡೆಸಲಾಗಿತ್ತು.

ನಿರ್ಮಾಪಕರು ಲೋಕೇಶನ್ ಗೊತ್ತು ಮಾಡಿದ್ದರು, ಆದರೆ ಇದ್ದಕ್ಕಿದ್ದಂತೆ ನಡೆದ ಬೆಳವಣಿಗೆಯಲ್ಲಿ ಸಿನಿಮಾ ಹೊಸ ಟ್ವಿಸ್ಟ್ ಪಡೆದುಕೊಂಡಿದೆ, ಸಿನಿಮಾ ನಿರ್ದೇಶಿಸುವುದಿಲ್ಲ ಎಂದು ನಾಗಾಭರಣ ಹೇಳಿದ್ದಾರೆ,  ಹಾಗಾಗಿ ನಿರ್ಮಾಪಕ ಕಡ್ಜಿಪುಡಿ ಚಂದ್ರು ಹೊಸ ನಿರ್ದೇಶಕರ ಹುಡುಕಾಟದಲ್ಲಿದ್ದಾರೆ.

ಹಿರಿಯ ನಿರ್ದೇಶಕ ನಾಗಾಭರಣ ಈ ಸಿನಿಮಾ ನಿರ್ದೇಶನ ಮಾಡಬೇಕೆಂಬುದು ನನ್ನ ಬಯಕೆಯಾಗಿತ್ತು. ಆದರೆ ಅವರು ಹೇಳಿದ ಬಜೆಟ್ ಒದಗಿಸುವುದು ನನ್ನಿಂದ ಸಾಧ್ಯವಾಗುವುದಿಲ್ಲ, ಈ ಬಗ್ಗೆ ನಾನು ನಾಗಾಭರಣ ಮತ್ತು ಅವರ ಪುತ್ರ ಪನ್ನಗಾಭರಣ ಇಬ್ಬರ ಜೊತೆ ಚರ್ಚಿಸಿದ್ದೇನೆ ಎಂದು ಕಡ್ಡಿಪುಡಿ ಚಂದ್ರು ತಿಳಿಸಿದ್ದಾರೆ.

ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಜುಗಾರಿ ಕ್ರಾಸ್ ಪುಸ್ತಕಕ ಹಕ್ಕನ್ನು ತಾವು ಖರೀದಿಸಿದ್ದು,ಬೇರೊಬ್ಬ ನಿರ್ದೇಶಕರಿಂದ ಈ ಸಿನಿಮಾ ಮಾಡಿಸುವುದಾಗಿ ಹೇಳಿದ್ದಾರೆ, 

ಜುಗಾರಿ ಕ್ರಾ,ಸ್ ಸಿನಿಮಾದಲ್ಲಿ ರಂಗಾಯಣ ರಘು, ಕರಿಸುಬ್ಬು, ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ವಸುಕಿ ವೈಭವ್ ಸಂಗೀತ ನಿರ್ದೇಶನವಿದ್ದು, ಎಚ್ ಸಿ ವೇಣು ಛಾಯಾಗ್ರಹಣವಿದೆ,

ನಿರ್ದೇಶಕ ಕೂಡ್ಲು ರಾಮಕೃಷ್ಣ ಮೊದಲು  ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದರು. ಶಿವರಾಜ್ ಕುಮಾರ್ ನಾಯಕನಾಗಿ ನಟಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ಸೆಟ್ಟೇರಲೇ ಇಲ್ಲ.

Stay up to date on all the latest ಸಿನಿಮಾ ಸುದ್ದಿ news
Poll
Defence minister Rajanath Singh

101 ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ನಿರ್ಬಂಧ ಹೇರುವ ಭಾರತದ ಕ್ರಮವು, ದೇಶೀಯ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಯೆ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp