ವಾಹನ ಸವಾರರಿಗೆ ದಂಡ ಹಾಕೋ ಮುನ್ನ ರಸ್ತೆಗಳ ಗುಣಮಟ್ಟ ಖಾತ್ರಿಪಡಿಸಿಕೊಳ್ಳಿ: ಸಿಎಂ ಬಿಎಸ್‌ವೈ ಗೆ ಸ್ಯಾಂಡಲ್ ವುಡ್ ನಟಿ ಸವಾಲು

ದೇಶಾದ್ಯಂತ ನೂತನ ಮೋಟಾರ್ ವಾಹನ ತಿದ್ದುಪಡಿ ಕಾಯ್ದೆ ಜಾರಿಯಾಗಿದ್ದು ಕರ್ನಾಟಕ ಸಹ ಇದಕ್ಕೆ ಹೊರತಾಗಿಲ್ಲ. ಕಾಯ್ದೆ ಅನುಸಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಭಾರೀ ಮೊತ್ತದ ದಂಡ ವಿಧಿಸಲಾಗಿದ್ದು ಬೆಂಗಳೂರಿನಲ್ಲಿ ಗುರುವಾರ ಮಧ್ಯಾಹ್ನದ ವೇಳೆ ಒಂದೇ ದಿನಕ್ಕೆ 2,978 ಟ್ರಾಫಿಕ್ ಉಲ್ಲಂಘನೆ ಕೇಸುಗಳು ದಾಖಲಾಗಿದೆ. ಈ ನಡುವೆ ಸ್ಯಾಂಡಲ್ ವುಡ್ ನಟಿ ಸೋನು ಗೌಡ....
ಸೋನು ಗೌಡ ಹಾಗೂ ಯಡಿಯೂರಪ್ಪ
ಸೋನು ಗೌಡ ಹಾಗೂ ಯಡಿಯೂರಪ್ಪ

ದೇಶಾದ್ಯಂತ ನೂತನ ಮೋಟಾರ್ ವಾಹನ ತಿದ್ದುಪಡಿ ಕಾಯ್ದೆ ಜಾರಿಯಾಗಿದ್ದು ಕರ್ನಾಟಕ ಸಹ ಇದಕ್ಕೆ ಹೊರತಾಗಿಲ್ಲ. ಕಾಯ್ದೆ ಅನುಸಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಭಾರೀ ಮೊತ್ತದ ದಂಡ ವಿಧಿಸಲಾಗಿದ್ದು ಬೆಂಗಳೂರಿನಲ್ಲಿ ಗುರುವಾರ ಮಧ್ಯಾಹ್ನದ ವೇಳೆ ಒಂದೇ ದಿನಕ್ಕೆ 2,978 ಟ್ರಾಫಿಕ್ ಉಲ್ಲಂಘನೆ ಕೇಸುಗಳು ದಾಖಲಾಗಿದೆ. ಈ ನಡುವೆ ಸ್ಯಾಂಡಲ್ ವುಡ್ ನಟಿ ಸೋನು ಗೌಡ ವಾಹನ ಚಾಲಕರಿಗೆ ಭಾರೀ ದಂಡ ವಿಧಿಸುತ್ತಿರುವ ಸರ್ಕಾರದ ಕ್ರಮ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೇ ಸವಾಲು ಹಾಕಿದ್ದಾರೆ.

ಸೋನು ಗೌಡ ಟ್ವೀಟ್ ಮೂಲಕ ಯಡಿಯೂರಪ್ಪ ಅವರಿಗೆ ಸವಾಲು ಎಸೆದಿದ್ದು ವಾಹನ ಸವಾರರಿಗೆ ದಂಡ ವಿಧಿಸುವ ಮುನ್ನ ರಸ್ತೆಗಳನ್ನು ಸರಿಪಡಿಸಿ ಎಂದು ಕೇಳಿದ್ದಾರೆ.

ನಟಿ ಟ್ವಿಟ್ಟರ್ ನಲ್ಲಿ ಬೈಕ್ ಸವಾರನೊಬ್ಬ ಬೀಳುತ್ತಿರುವ ಚಿತ್ರ ಹಾಕಿ ಕುಡಿದು ಚಾಲನೆ – 10,000 ರೂ., ಜಂಪಿಂಗ್ ಟ್ರಾಫಿಕ್ ಲೈಟ್- 5,000 ರೂ., ಮೊಬೈಲ್ ಫೋನ್ ಬಳಕೆ – 5,000 ರೂ., ಅತಿವೇಗ – 5,000ರೂ ಹಾಗೂ ಸೀಟ್‍ಬೆಲ್ಟ್ ಧರಿಸದಿದ್ದರೆ – 1,000 ರೂ ಹೀಗೆ ದಂಡದ ಪಟ್ಟಿಯನ್ನೂ ಕೊಟ್ಟಿದ್ದಾರೆ.

ಇದರೊಡನೆ ತಾವೇ ನೋಡಿದ ರಸ್ತೆ ಗುಂಡಿಗಳಿಗಾಗಿ ಸರ್ಕಾರಕ್ಕೆ ನಾವೆಷ್ಟು ದಂಡ ಕಟ್ಟಬೇಕು ಎಂದು ಪ್ರಶ್ನಿಸಿದ್ದಾರೆ.

"ಎಕ್ಸ್ಯಾಕ್ಟ್ಲಿ ಸಿಎಂ ಯಡಿಯೂರಪ್ಪನವರೇ! ಬಹುದೊಡ್ಡ ಪ್ರಮಾಣದ ದಂಡ ಹಾಕುವ ಮುನ್ನ ನೀವು ರಾಜ್ಯದ ರಸ್ತೆಗಳೆಲ್ಲಾ ಉತ್ತಮ ದರ್ಜೆಯಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. .ಇದು ಸಾಮಾನ್ಯ ಜನ ಕಷ್ಟಪಟ್ಟು ಸಂಪಾದಿಸಿರುವ ಹಣ ಯವಿಟ್ಟು ಅವರ ಜೀವನವನ್ನು ಹಾಳು ಮಾಡಬೇಡಿ .." ಎಂದು ನಟಿ ಟ್ವೀಟ್ ಮೂಲಕ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com