ಪೊಗರು ಶೂಟಿಂಗ್ ಸೆಟ್ ಗೆ ಬೆಂಕಿ: ಕೂದಲೆಳೆ ಅಂತರದಲ್ಲಿ ಧ್ರುವ ಸರ್ಜಾ  ಪಾರು

ಪೊಗರು ಶೂಟಿಂಗ್ ಸೆಟ್‍ನಲ್ಲಿ ಅಗ್ನಿ ಅನಾಹುತವಾಗಿದ್ದು ಕೂದಲೆಳೆ ಅಂತರದಲ್ಲಿ ನಟ ಧ್ರುವ ಸರ್ಜಾ ಪಾರಾಗಿದ್ದಾರೆ.
ಧ್ರುವ ಸರ್ಜಾ
ಧ್ರುವ ಸರ್ಜಾ

ಬೆಂಗಳೂರು: ಪೊಗರು ಶೂಟಿಂಗ್ ಸೆಟ್‍ನಲ್ಲಿ ಅಗ್ನಿ ಅನಾಹುತವಾಗಿದ್ದು ಕೂದಲೆಳೆ ಅಂತರದಲ್ಲಿ ನಟ ಧ್ರುವ ಸರ್ಜಾ ಪಾರಾಗಿದ್ದಾರೆ.

ಹೈದರಾಬಾದಿನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯುತಿದ್ದು ಬೃಹತ್ ಸೆಟ್ ಹಾಕಲಾಗಿತ್ತು. ಫೈಟಿಂಗ್ ಶೂಟ್ ನಡೆಯುತ್ತಿದ್ದಾಗ ಅಗ್ನಿ ಅನಾಹುತ ಸಂಭವಿಸಿದ್ದು, ಸೆಟ್ ಬಹುತೇಕ ಸುಟ್ಟು ಕರಕಲಾಗಿದೆ.

ರಗಡ್ ಸೀನ್‍ಗಾಗಿ ವಿದೇಶಿ ದೈತ್ಯ ಬಾಡಿಬಿಲ್ಡರ್ಸ್ ಕರೆತರಲಾಗಿತ್ತು. ನಂದಕಿಶೋರ್ ನಿರ್ಮಾಣದ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದು, ಶಾನ್ವಿ ಶ್ರೀವಾತ್ಸವ್ ಅಭಿನಯಿಸುತ್ತಿದ್ದಾರೆ. 

ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲೂ ಪೊಗರು ರಿಲೀಸ್ ಆಗಲಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com