ನನಗೆ ಮಕ್ಕಳು ಬೇಡವೇ ಬೇಡ: ಶ್ರದ್ಧಾ ಶ್ರೀನಾಥ್ ನಿರ್ಧಾರಕ್ಕೆ ಕಾರಣವೇನು?

ತಮಿಳು, ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಬಹುಬೇಡಿಕೆ ನಟಿ ಶ್ರದ್ಧಾ ಶ್ರೀನಾಥ್ ತಮಗೆ ಮಕ್ಕಳು ಬೇಡವೇ ಬೇಡ ಎಂದು ನಿರ್ಧರಿಸಿದ್ದಾರೆ. 
ಶ್ರದ್ಧಾ ಶ್ರೀನಾಥ್
ಶ್ರದ್ಧಾ ಶ್ರೀನಾಥ್

ತಮಿಳು, ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಬಹುಬೇಡಿಕೆ ನಟಿ ಶ್ರದ್ಧಾ ಶ್ರೀನಾಥ್ ತಮಗೆ ಮಕ್ಕಳು ಬೇಡವೇ ಬೇಡ ಎಂದು ನಿರ್ಧರಿಸಿದ್ದಾರೆ. 

ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಮಾತನಾಡುತ್ತಾ ಈ ರೀತಿ ಹೇಳಿಕೆ ಕೊಟ್ಟಿರುವುದು ಕುತೂಹಲ ಮೂಡಿಸಿದೆ. 
ಮಹಿಳಾ ದೌರ್ಜನ್ಯದ ವಿರುದ್ಧ ಮಾತನಾಡಿದ್ದಾರೆ. 

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶ್ರದ್ಧಾ, ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಇನ್ನೂ ನಿಂತಿಲ್ಲ. ಸಮಾಜದ ದೃಷ್ಟಿಕೋನ ಬದಲಾಗಬೇಕಿದೆ ಎಂದು ಹೇಳಿದ್ದಾರೆ.  ನಮ್ಮ ಅಜ್ಜಂದಿರಿಗೆ 15 ಮಕ್ಕಳಿದ್ದರು. ನನ್ನ ತಂದೆ-ತಾಯಿಗೆ ಇಬ್ಬರು ಮಕ್ಕಳಿದ್ದೇವೆ. ನಾನು ಮಕ್ಕಳೇ ಬೇಡ’ ಎಂದು ನಿರ್ಧರಿಸಿದ್ದೇನೆ’ ಎಂದಿದ್ದಾರೆ.  ಇದು ನನ್ನ ವೈಯಕ್ತಿಕ ಅಭಿಪ್ರಾಯ. ಯಾರೊಬ್ಬರ ಲೈಫ್ ಸ್ಟೈಲ್ ನಿಂದಲೂ ಪ್ರಭಾವಕ್ಕೊಳಗಾಗಿ ಈ ನಿರ್ಧಾರಕ್ಕೆ ಬಂದಿಲ್ಲ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com