ಓಗರ ಆಹಾರೋತ್ಪನ್ನಗಳಿಗೆ ರಾಯಭಾರಿಯಾದ ಅನಂತ್ ನಾಗ್!

ಬುಧವಾರ ತಮ್ಮ 71ನೇ ಜನ್ಮದಿನ ಆಚರಿಸಿಕೊಂಡಿರುವ ಹಿರಿಯ ನಟ ಅಟ ಅನಂತ್ ನಾಗ್ ತಾವು ಹೊಸ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಶ್ರೀಚಕ್ರ ಫುಡ್ಸ್ ಆಂಡ್ ಬ್ರಿವರಿಸ್ (ಪ್ರೈ) ಲಿ. ಅಡಿಯಲ್ಲಿನ ಓಗರದ ಆಹಾರೋತ್ಪನ್ನಗಳಿಗೆ ನಟ ಅನಂತ್ ನಾಗ್ ರಾಯಭಾರಿಯಾಗಿದ್ದಾರೆ.
 

Published: 07th September 2019 09:32 AM  |   Last Updated: 07th September 2019 09:32 AM   |  A+A-


ಅನಂತ್ ನಾಗ್

Posted By : Raghavendra Adiga
Source : The New Indian Express

ಬುಧವಾರ ತಮ್ಮ 71ನೇ ಜನ್ಮದಿನ ಆಚರಿಸಿಕೊಂಡಿರುವ ಹಿರಿಯ ನಟ ಅಟ ಅನಂತ್ ನಾಗ್ ತಾವು ಹೊಸ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಶ್ರೀಚಕ್ರ ಫುಡ್ಸ್ ಆಂಡ್ ಬ್ರಿವರಿಸ್ (ಪ್ರೈ) ಲಿ. ಅಡಿಯಲ್ಲಿನ ಓಗರದ ಆಹಾರೋತ್ಪನ್ನಗಳಿಗೆ ನಟ ಅನಂತ್ ನಾಗ್ ರಾಯಭಾರಿಯಾಗಿದ್ದಾರೆ.

ರಾಜ್ಯದಲ್ಲಿ ಜನಪ್ರಿಯವಾಗಿರುವ ಓಗರ ತಿಂಡಿ ತಿನಿಸುಗಳ ಉತ್ಪನ್ನಕ್ಕೆ ನಟ ರಾಯಭಾರಿಯಾಗಿದ್ದು ತಮ್ಮ ವೃತ್ತಿ ಬದುಕಿನಲ್ಲಿ ಮೊದಲ ಬಾರಿಗೆ ಒಂದು ಸಂಸ್ಥೆಯ ರಾಯಭಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಬ್ರಾಂಡ್ ಪ್ರಸ್ತುತ 14 ಉತ್ಪನ್ನಗಳನ್ನು ಹೊಂದಿದೆ, ಇದರಲ್ಲಿ ಪುಳಿಯೋಗರ,  ಮಿಕ್ಸ್, ರವಾ ಇಡ್ಲಿ ಮಿಕ್ಸ್, ಬಟರ್ ಚಕ್ಕುಲಿ ಮತ್ತು ಶಂಕರಪೋಳೆ ಸೇರಿದೆ.. ಸಂಸ್ಥಾಪಕ ರಘುನಾಥ್ ಅವರು ತಮ್ಮ ನೆಚ್ಚಿನ ಸಿಹಿ ಕೂಡ ಸೇರಿಸಲು ಮನವೊಲಿಸಬಹುದು ಎಂದು ನಾಗ್ ತಮಾಷೆಯಾಗಿ ಹೇಳಿದರು. "ನಾನು ಜಿಲೇಬಿ ಮಿಶ್ರಣವನ್ನು ಉತ್ಪಾದಿಸಲು ಅವರನ್ನು ಒತ್ತಾಯಿಸಲಿದ್ದೇನೆ!" ಎಂದು ಅವರು ಹೇಳಿದರು.

ಓಗರ ಸಧ್ಯದಲ್ಲೇ ತಾನು 30 ವಿವಿಧ ಉತ್ಪನ್ನಗಳ ಬಿಡುಗಡೆಗೆ ಯೋಜನೆ ಃಆಕಿಕೊಂಡಿದೆ. ಮತ್ತು ಆ ಎಲ್ಲಾ ಉತ್ಪನ್ನಗಳನ್ನು ಕರ್ನಾಟಕದಲ್ಲೇ ತಯಾರಿಸಲಾಗುತ್ತದೆ.ಈ ಬ್ರಾಂಡ್ ಅನ್ನು ಪ್ರಸ್ತುತ ರಾಜ್ಯಾದ್ಯಂತ 8,000 ಮಳಿಗೆಗಳಲ್ಲಿ ಮಾರಾಟ ಮಾಡುತ್ತಿದ್ದು ವರ್ಷಾಂತ್ಯದಲ್ಲಿ ಅದನ್ನು 50,000 ಕ್ಕೆ ಕೊಂಡೊಯ್ಯಲು ಸಂಸ್ಥೆ ಯೋಜಿಸಿದೆ. ಇದು ಮೈಸೂರು ರಸ್ತೆಯಲ್ಲಿ ಸಿಗ್ನೇಚರ್ ಹೋಟೆಲ್ ನಿರ್ಮಾಣವನ್ನು ಪ್ರಾರಂಭಿಸಿದೆ ಮತ್ತು ಯುನೈಟೆಡ್ ಸ್ಟೇಟ್ಸ್, ಯುರೋಪ್ ಮತ್ತು ಸಿಂಗಾಪುರದಲ್ಲಿಯೂ ಶಾಖೆ ತೆರೆಯಲು ಸಿದ್ದತೆ ನಡೆಸಿದೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp