ಪೈಲ್ವಾನ್: 'ಕೃಷ್ಣ'ನ ಪ್ರಯೋಗಕ್ಕೆ 'ಕಿಚ್ಚ' ’ಆಧಾರ ಸ್ತಂಭ"! 

ಮುಂಗಾರು ಮಳೆ ಮೂಲಕ ಖ್ಯಾತರಾಗಿದ್ದ ಸಿನಿಮಾ ಛಾಯಾಗ್ರಾಹಕ ಎಸ್ ಕೃಷ್ಣ ಹೆಬ್ಬುಲಿ ನಂತರ ಪೈಲ್ವಾನ್ ಚಿತ್ರಕ್ಕಾಗಿ ಎರಡನೇ ಬಾರಿಗೆ ಸುದೀಪ್ ಜೊತೆಗೂಡಿದ್ದಾರೆ. 

Published: 07th September 2019 08:17 PM  |   Last Updated: 07th September 2019 08:49 PM   |  A+A-


INTERVIEW | Sudeep became pillar of strength for 'Pailwaan', says director S Krishna

ಪೈಲ್ವಾನ್: ’ಕೃಷ್”ನ ಪ್ರಯೋಗಕ್ಕೆ ’ಕಿಚ್ಚ’ನೇ ’ಆಧಾರ ಸ್ತಂಭ'! 

Posted By : Srinivas Rao BV
Source : Online Desk

ಮುಂಗಾರು ಮಳೆ ಮೂಲಕ ಖ್ಯಾತರಾಗಿದ್ದ ಸಿನಿಮಾ ಛಾಯಾಗ್ರಾಹಕ ಎಸ್ ಕೃಷ್ಣ ಹೆಬ್ಬುಲಿ ನಂತರ ಪೈಲ್ವಾನ್ ಚಿತ್ರಕ್ಕಾಗಿ ಎರಡನೇ ಬಾರಿಗೆ ಸುದೀಪ್ ಜೊತೆಗೂಡಿದ್ದಾರೆ. 

ತೀವ್ರ ನಿರೀಕ್ಷೆ ಹುಟ್ಟಿಸಿರುವ ಪೈಲ್ವಾನ್ ಚಿತ್ರ ಎಸ್ ಕೃಷ್ಣ ಅವರ ಆರ್ ಆರ್ ಆರ್ ಮೋಷನ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿದ್ದು, ಗಜಕೇಸರಿ ಚಿತ್ರದ ಮೂಲಕ ನಿರ್ದೇಶಕರಾಗಿದ್ದ ಕೃಷ್ಣ, ಪೈಲ್ವಾನ್ ಚಿತ್ರದಲ್ಲಿ ನಿರ್ದೇಶನದ ಜೊತೆಗೆ ನಿರ್ಮಾಪಕನ ಹೊಣೆಯನ್ನೂ ಹೊತ್ತಿದ್ದಾರೆ. 

ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಸೆ.12 ಕ್ಕೆ ಪೈಲ್ವಾನ್ ಸಿನಿಮಾ ಬಿಡುಗಡೆಯಾಗುವುದನ್ನು ಎದುರುನೋಡುತ್ತಿರುವ ನಿರ್ದೇಶಕ ಕೃಷ್ಣ ಸಿಟಿ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ್ದು, ಪೈಲ್ವಾನ್ ಊಹೆಗೂ ಮೀರಿದ ಚಿತ್ರವಾಗಲು ಸಾಧ್ಯವಾಗಿದ್ದು ಸುದೀಪ್ ಬೆಂಬಲದಿಂದ ಎಂದಿದ್ದಾರೆ. 

"ಸಿನಿಮಾ ತಂತ್ರಜ್ಞನಾಗಿರುವ ನನಗೆ ನಟ ಸುದೀಪ್ ಆಧಾರ ಸ್ತಂಭವಾದರು. ಸುದೀಪ್ ಸಹಕಾರದಿಂದಲೇ ಈ ಸಿನಿಮಾವನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಮಾಡಿ, 5 ಭಾಷೆಗಳಿಗೆ ತೆಗೆದುಕೊಂಡು ಹೋಗಲು ಸಾಧ್ಯವಾಯಿತು. ನಿರ್ಮಾಪಕನಾಗಿ ಟೆಲಿ-ಧಾರಾವಾಹಿಗಳನ್ನು ಮಾಡಿ ಅನುಭವವಿದ್ದ ನಮಗೆ, ಸಿನಿಮಾ ನಿರ್ಮಾಣದಲ್ಲಿ ವಿಭಿನ್ನ ಅನುಭವ ದೊರೆತಿದೆ" ಎನ್ನುತ್ತಾರೆ ನಿರ್ದೇಶಕ, ನಿರ್ಮಾಪಕ ಕೃಷ್ಣ.

ಸುದೀಪ್ ತಯಾರಿ ಬಗ್ಗೆ ಮಾತನಾಡಿರುವ ಕೃಷ್ಣ, "ಪೈಲ್ವಾನ್ ಚಿತ್ರದಲ್ಲಿ ಕುಸ್ತಿ ಪಟು, ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುದೀಪ್ ಇದೇ ಮೊದಲ ಬಾರಿಗೆ ಚಿತ್ರಕ್ಕಾಗಿ ಜಿಮ್ ಗೆ ಹೋಗಿದ್ದಾರೆ.  

ಈ ರೀತಿಯ ಸಬ್ಜೆಕ್ಟ್ ಅಥವಾ ಪಾತ್ರವನ್ನು ನಿರ್ವಹಣೆ ಮಾಡದ ನಟನ ಜೊತೆ ಕೆಲಸ ಮಾಡುವುದು ಅದ್ಭುತವಾಗಿತ್ತು. ಪ್ರಾರಂಭದ ಹಂತದಲ್ಲಿ ಸುದೀಪ್ ಕಡೆಯಿಂದ ಹಿಂಜರಿಕೆ ಇತ್ತಾದರೂ ಕಥಾವಸ್ತು ಅವರನ್ನು ಆಕರ್ಷಿಸಿತ್ತು. ಪೈಲ್ವಾನ್ ನನ್ನ ಕಲ್ಪನೆ, ಸುದೀಪ್ ಆ ಪಾತ್ರವನ್ನು ಜೀವಂತವಾಗಿ ತಂದಿದ್ದಾರೆ. ನನ್ನ ಮೇಲೆ ಸುದೀಪ್ ಅವರಿಟ್ಟಿದ್ದ ನಂಬಿಕೆ, ನನಗೆ ಮತ್ತಷ್ಟು ವಿಶ್ವಾಸ ತುಂಬಿತ್ತು" ಎಂದಿದ್ದಾರೆ. 

ಪ್ರತಿಯೊಬ್ಬ ಪ್ರತಿಭಾವಂತನಿಗೂ ಅವಕಾಶ ನೀಡಬೇಕೆಂಬ ಸಂದೇಶವನ್ನು ಈ ಚಿತ್ರ ಪ್ರೇಕ್ಷಕರಿಗೆ ರವಾನೆ ಮಾಡುತ್ತದೆ. ಪೈಲ್ವಾನ್ ಚಿತ್ರದ ಬಗ್ಗೆ ಅಮೀರ್ ಖಾನ್ ಅವರ ದಂಗಲ್, ಸಲ್ಮಾನ್ ಖಾನ್ ಅವರ ಸುಲ್ತಾನ್ ಚಿತ್ರಗಳನ್ನು ಉಲ್ಲೇಖಿಸಿ ಮಾತನಾಡಲಾಗುತ್ತದೆ. ಆದರೆ ನಮ್ಮ ಸಿನಿಮಾ ಕಂಟೆಂಟ್ ವಿಭಿನ್ನವಾಗಿರುವುದು ಬಿಡುಗಡೆಯ ದಿನ ಪ್ರೇಕ್ಷಕರಿಗೆ ತಿಳಿಯಲಿದೆ ಎನ್ನುತ್ತಾರೆ ಕೃಷ್ಣ. 

ಇನ್ನು ಸುದೀಪ್ ಅವರಿಂದ ದೊರೆತ ಅತ್ಯುತ್ತಮ ಅಭಿನಂದನೆ (ಬೆಸ್ಟ್ ಕಾಂಪ್ಲಿಮೆಂಟ್) ಏನು ಎಂಬ ಪ್ರಶ್ನೆಗೆ ಉತ್ತರಿಸಿರುವ ನಿರ್ದೇಶಕ, ಈ ವರೆಗೂ ಅಂತಹ ಯಾವುದೇ ಕಾಂಪ್ಲಿಮೆಂಟ್ಸ್ ಕೇಳಿಲ್ಲ. ಕೆಲಸದೆಡೆಗೆ ನನ್ನ ಉತ್ಸಾಹವನ್ನು ಗಮನಿಸಿ ಚಿತ್ರಕ್ಕೆ ಡೇಟ್ಸ್ ನೀಡಿದ್ದರು. ಇದೇ ಸುದೀಪ್ ನನಗೆ ನೀಡಿದ ಕಾಂಪ್ಲಿಮೆಂಟ್ಸ್  ಎಂದಿದ್ದಾರೆ. 

ಸುನಿಲ್ ಶೆಟ್ಟಿ ದಕ್ಷಿಣ ಭಾರತ ಸಿನಿಮಾ ಪ್ರವೇಶ

ಸುನಿಲ್ ಶೆಟ್ಟಿ ಪೈಲ್ವಾನ್ ಚಿತ್ರದಲ್ಲಿ ನಟಿಸಿ ಮೊದಲ ಬಾರಿಗೆ ದಕ್ಷಿಣ ಭಾರತ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಹೆಮ್ಮೆಯ ಸಂಗತಿ, ಇದು ಸಾಧ್ಯವಾಗಿದ್ದೂ ಸಹ ಸುದೀಪ್ ಅವರಿಂದಲೇ ಎಂಬುದನ್ನು ಸಿಟಿ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಗೊಳಿಸಿದ್ದಾರೆ ಎಸ್ ಕೃಷ್ಣ.

Stay up to date on all the latest ಸಿನಿಮಾ ಸುದ್ದಿ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp