'ಮಮ್ಮಿ'ಯಾಗ್ತಿದ್ದಾರೆ ಚಿರಂಜೀವಿ ಸರ್ಜಾ ಮನದನ್ನೆ ಮೇಘನಾ ರಾಜ್!

ಕಳೆದ ವರ್ಷವಷ್ಟೇ ಅದ್ದೂರಿಯಾಗಿ ಮದುವೆಯಾಗಿ ವೈವಾಹಿಕ ಬದುಕಿಗೆ ಕಾಲಿರಿಸಿರುವ ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಇದೀಗ  ಮಮ್ಮಿಯಾಗಿ ಪ್ರಮೋಶನ್ ಪಡೆದುಕೊಳ್ತಿದ್ದಾರಂತೆ.
ಮೇಘನಾ ರಾಜ್
ಮೇಘನಾ ರಾಜ್

ಬೆಂಗಳೂರು: ಕಳೆದ ವರ್ಷವಷ್ಟೇ ಅದ್ದೂರಿಯಾಗಿ ಮದುವೆಯಾಗಿ ವೈವಾಹಿಕ ಬದುಕಿಗೆ ಕಾಲಿರಿಸಿರುವ ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಇದೀಗ  ಮಮ್ಮಿಯಾಗಿ ಪ್ರಮೋಶನ್ ಪಡೆದುಕೊಳ್ತಿದ್ದಾರಂತೆ.

ಓಹ್ ಚಿರಂಜೀವಿ ಸರ್ಜಾ ದಂಪತಿ ಸಿಹಿಸುದ್ದಿ ಕೊಡ್ತಿದ್ದಾರಾ ಅಂತ ಕೇಳ್ತೀದ್ದೀರಾ?. ಇಲ್ಲ. ಮೇಘನಾ ರಾಜ್ ಮತ್ತು ಸೃಜನ್ ಲೋಕೇಶ್ ಅಭಿನಯದ ಚಿತ್ರಕ್ಕೆ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಎಂದು ಹೆಸರಿಡಲಾಗಿದೆ. 

ಈ ಚಿತ್ರಕ್ಕೆ ಮಧುಚಂದ್ರ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಪೋಸ್ಟರ್ ನಲ್ಲಿ ಫೇಸ್ ಬುಕ್, ಟ್ವೀಟರ್, ಗೂಗಲ್ ಮತ್ತಿತರ ಸಾಮಾಜಿಕ ಜಾಲತಾಣಗಳ ಲೋಗೋಗಳನ್ನು ಬಳಸಲಾಗಿದೆ. 

ಒಟ್ಟಿನಲ್ಲಿ ಶೀರ್ಷಿಕೆಯ ಜೊತೆಗೆ ಚಿತ್ರದ ಪೋಸ್ಟರ್ ಸಹ ಕುತೂಹಲ ಕೆರಳಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com