ಕನ್ನಡ ರಾಜ್ಯೋತ್ಸವಕ್ಕೆ ಪ್ರೇಕ್ಷಕರ ಮುಂದೆ ಶಿವಣ್ಣನ 'ಆಯುಷ್ಮಾನ್ ಭವ'

ಪಿ ವಾಸು ನಿರ್ದೇಶನದ ಶಿವರಾಜ್‌ಕುಮಾರ್ ಅಭಿನಯದ "ಆಯುಷ್ಮಾನ್ ಭವ" ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ದಿನದಂದು ತೆರೆಗೆ ಬರಲು ಸಿದ್ದವಾಗಿದೆ. ದ್ವಾರಕೀಶ್ ಚಿತ್ರದ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಚಿತ್ರವನ್ನು ಯೋಗೀಶ್ ದ್ವಾರಕೀಶ್ ನಿರ್ಮಿಸಿದ್ದಾರೆ.  ಚಿತ್ರದ ಕೆಲ ಸ್ಟಿಲ್ ಗಳನ್ನು ಬಿಡುಗಡೆ ಮಾಡಿರುವ ಚಿತ್ರತಂಡ ಚಿತ್ರ ಬಿಡುಗಡೆ ದಿನಾಂಕವನ್ನು ಖಚಿತಪಡಿಸಿದೆ.  
ಆಯುಷ್ಮಾನ್ ಭವ

ದ್ವಾರಕೀಶ್ ಚಿತ್ರ  ಬ್ಯಾನರ್ ನ ಐವತ್ತೆರಡನೇ ಚಿತ್ರ ಇದಾಗಿದ್ದು ಡಾ. ರಾಜ್‌ಕುಮಾರ್ ಕುಟುಂಬದೊಂದಿಗಿನ ತಮ್ಮ ಸಂಬಂಧವನ್ನು 42 ವರ್ಷಗಳ ನಂತರ ಮತ್ತೊಮ್ಮೆಒಂದಾಗಿಸುತ್ತಿದೆ. ಎಚ್‌.ಆರ್. ಭಾರ್ಗವ ನಿರ್ದೇಶನದ ಚೊಚ್ಚಲ ಚಿತ್ರವಾದ ರಾಜ್‌ಕುಮಾರ್‌ ಅಭಿನಯದ "ಭಾಗ್ಯವಂತರು " ಈ ಹಿಂದೆ ದ್ವಾರಕೀಶ್ ಚಿತ್ರ ಜಿರ್ಮಾಣ ಸಂಸ್ಥೆಯಡಿಯಲ್ಲಿ ತಯಾರಾದ ರಾಜ್ ಕುಟುಂಬದ ಕಡೆಯ ಚಿತ್ರವಾಗಿತ್ತು. ಆ ಚಿತ್ರ 1977ರಲ್ಲಿ ತೆರೆಕಂಡಿತ್ತು.

ಇನ್ನು "ಆಯುಷ್ಮಾನ್ ಭವ" ಚಿತ್ರದಲ್ಲಿ ಶಿವಣ್ಣಗೆ ನಾಯಕಿಯಾಗಿ ರಚಿತಾ ರಾಮ್ ನಟಿಸುತ್ತಿದ್ದು ಚಿತ್ರವೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.ಗುರುಕಿರಣ್ ಸಂಗೀತ ನೀಡುತ್ತಿದ್ದು ಇದೇ ದಸರಾ ಹಬ್ಬದ ಸಮಯದಲ್ಲಿ ಚಿತ್ರದ ಆಡಿಯೋ ಹಾಗೂ ಟ್ರೇಲರ್ ಲಾಂಚ್ ಗೆ ಚಿತ್ರತಂಡ ಯೋಜನೆ ರೂಪಿಸಿದೆ.

"ಶಿವಲಿಂಗ " ನಂತರ ನಿರ್ದೇಶಕ ಪಿ. ವಾಸು ಹಾಗೂ ಶಿವಣ್ಣ ಮತ್ತೊಮ್ಮೆ ಒಟ್ತಾಗಿದ್ದಾರೆ. ಈ ಚಿತ್ರ ಫ್ಯಾಮಿಲಿ ಎಂಟರ್ಟೈನರ್ ಜತೆಗೆ ಕಮರ್ಷಿಯಲ್ ಹಿನ್ನೆಲೆಯುಳ್ಳ ಚಿತ್ರ ಎಂದು ತಂಡದ ಸದಸ್ಯರು ಹೇಳಿಕೊಂಡಿದ್ದಾರೆ.

ಚಿತ್ರದಲಿ ಹಿರಿಯ ನಟ ಅನಂತ್ ನಾಗ್, , ಶಿವಾಜಿ ಪ್ರಭು, ಸುಹಾಸಿನಿ ಮಣಿರತ್ನಂ, ನಿಧಿ ಸುಬ್ಬಯ್ಯ, ರವಿಶಂಕರ್ ಮತ್ತು ರಂಗಾಯಣ ರಘು ಸೇರಿದಂತೆ ಬಹುತಾರಾಬಳಗವಿದೆ. ಚಿತ್ರಕ್ಕೆ ಪಿಕೆಹೆಚ್ ದಾಸ್  ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com