ನರಕಾಧಿಪತಿ ಯಮ ಸಣ್ಣಗಿರ್ತಾನಾ: ನಟ ಚಿಕ್ಕಣ್ಣನ ಪ್ರಶ್ನೆಗೆ ಸಿಕ್ಕ ಉತ್ತರವೇನು?

ಸ್ಯಾಂಡಲ್ ವುಡ್ ನಲ್ಲಿ ಭಾರಿ ಕುತೂಹಲ ಹಾಗೂ ನಿರೀಕ್ಷೆ ಮೂಡಿಸಿರುವ ‘ಬಿಲ್ ಗೇಟ್ಸ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು,ಖ್ಯಾತ ಹಾಸ್ಯನಟ ಚಿಕ್ಕಣ್ಣ ಯಮನ ಗೆಟಪ್ ನಲ್ಲಿ ಮಿಂಚಿದ್ದಾರೆ

Published: 14th September 2019 07:10 PM  |   Last Updated: 14th September 2019 07:20 PM   |  A+A-


Filmposter

ಚಿತ್ರದ ಪೋಸ್ಟರ್

Posted By : Nagaraja AB
Source : UNI

ಬೆಂಗಳೂರು :ಸ್ಯಾಂಡಲ್ ವುಡ್ ನಲ್ಲಿ ಭಾರಿ ಕುತೂಹಲ ಹಾಗೂ ನಿರೀಕ್ಷೆ ಮೂಡಿಸಿರುವ ‘ಬಿಲ್ ಗೇಟ್ಸ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು,ಖ್ಯಾತ ಹಾಸ್ಯನಟ ಚಿಕ್ಕಣ್ಣ ಯಮನ ಗೆಟಪ್ ನಲ್ಲಿ ಮಿಂಚಿದ್ದಾರೆ  

 ಟ್ರೇಲರ್ ವೀಕ್ಷಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಚಿಕ್ಕಣ್ಣನ ಯಮನ ಗೆಟಪ್ ಸೂಪರ್ ಆಗಿದೆ ಅಂತ ಹೇಳಿ ಬೆನ್ನು ತಟ್ಟಿದ್ದಾರೆ  ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ್ದ ಲಹರಿ ವೇಲು, ನಟ ಧರ್ಮಕೀರ್ತಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ

 

ಇದೇನಪ್ಪಾ ಚಿಕ್ಕಣ್ಣ ಹೆಸರಿಗೆ ತಕ್ಕಹಾಗೆ ಸಣ್ಣಗಿದ್ದಾರೆ ಅವರು ಯಮನ ಗೆಟಪ್ ಗೆ ಹೊಂದುತ್ತಾರಾ ಅಂತ ಪ್ರಶ್ನೆ ಇದ್ಯಾ?  ಖಂಡಿತ, ಸ್ವತಃ ಚಿಕ್ಕಣ್ಣ ಅವರಿಗೂ ಈ ಪ್ರಶ್ನೆ ಕಾಡಿತ್ತಂತೆ “ನಾನು ಯಮನ ಗೆಟಪ್ ಗೆ ಸೂಟ್ ಆಗ್ತೀನಾ ಅಂದಾಗ,ನಿಜವಾಗಿಯೂ ಯಮನನ್ನು ನೋಡಿರೋರು ಯಾರು? ತಲೆ ಕೆಡಿಸಿಕೊಳ್ಳಬೇಡಿ, ಪ್ರವಾಹ ಬಂದು ಕೆಲಸ ಹೆಚ್ಚಾಗಿ ಯಮ ಡಯಟ್  ಮಾಡಿ ಸಣ್ಣಗಾಗಿದ್ದಾನೆ ಬಿಡಿ ಅಂತ ನಿರ್ದೇಶಕರು ಹೇಳಿದ್ರು”ಎಂದು ಚಿಕ್ಕಣ್ಣ ತಿಳಿಸಿದರು

 ಶ್ರೀ ಪಾಂಚಜನ್ಯ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ‘ಬಿಲ್ ಗೇಟ್ಸ್’ ನಿರ್ಮಾಣವಾಗಿದ್ದು ಸದ್ಯದಲ್ಲೇ ಬಿಡುಗಡೆಯಾಗಲಿದೆ  ವಸಂತಕುಮಾರ್, ಅರವಿಂದ್, ಯತೀಶ್, ಗಿರೀಶ್, ಸತ್ಯನಾರಾಯಣ, ರಾದೇಶ್, ಕುಮಾರಸ್ವಾಮಿ, ಮುನಿಕೃಷ್ಣ, ಶಿವಶಂಕರ್, ಕುಮಾರ್, ಆದಿನಾರಾಯಣ ಸೇರಿದಂತೆ 14 ನಿರ್ಮಾಪಕರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ 

 ನಿರ್ದೇಶಕ ಶ್ರೀನಿವಾಸ ಮಂಡ್ಯ ಅವರ ಕಥೆ ಆಧರಿಸಿ ರಾಜಶೇಖರ್ ಅವರು ಚಿತ್ರಕಥೆ ಹೆಣೆದಿದ್ದು, ಜಯ ಮಲ್ಲಿಕಾರ್ಜುನ  ಸಂಭಾಷಣೆಯಿದೆ “ದೇಶದ ಅತಿದೊಡ್ಡ ಸಿರಿವಂತ ಬಿಲ್ ಗೇಟ್ಸ್ ಗೂ ಈ ಚಿತ್ರಕ್ಕೂ ಸಂಬಂಧವಿಲ್ಲ  ಹಳ್ಳಿಯಿಂದ ಬರುವ ಇಬ್ಬರು ಯುವಕರು ಬಿಲ್ ಗೇಟ್ಸ್ ಆಗಲು ಯತ್ನಿಸುತ್ತಾರೆ  ಅವರು ತಮ್ಮ ಪ್ರಯತ್ನದಲ್ಲಿ ಗೆಲ್ತಾರಾ ಅನ್ನೋದೇ ಚಿತ್ರದ ಎಳೆ” ಎಂದು ನಿರ್ದೇಶಕ ಶ್ರೀನಿವಾಸ ಮಂಡ್ಯ ಹೇಳಿದ್ದಾರೆ
  
ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಅತಿಹೆಚ್ಚು ಜನರು ವೀಕ್ಷಿಸಿದ್ದಾರೆ  ಅಂದಹಾಗೆ ನಿರ್ದೇಶಕರಿಗೆ ಇರುವ ಸಿನಿಮಾ ಪ್ಯಾಷನ್ ಮತ್ತು ನಿರ್ಮಾಪಕರ ಸಹಕಾರದಿಂದ ಮೇಕಿಂಗ್ ವಿಚಾರದಲ್ಲಿ ರಾಜಿಯಾಗದೆ ಇಡೀ ಚಿತ್ರವನ್ನು ಹೆಸರಿಗೆ ತಕ್ಕ ಹಾಗೆ ಅದ್ದೂರಿಯಾಗಿ ರೂಪಿಸಲಾಗಿದೆ  ತಮ್ಮಕಲ್ಪನೆಯಂತೆ ದೊಡ್ಡ ಸೆಟ್ ಗಳನ್ನ ಹಾಕಿಸಿದ್ದಾರೆ ಯಮಲೋಕದ ಅರಮನೆ ಸೆಟ್ ಅಂತೂ ತುಂಬಾ ಅದ್ಬುತವಾಗಿ ಮೂಡಿಬಂದಿದೆ 

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp