ಗೀತಾ ಪಾತ್ರಕ್ಕೂ ನನಗೂ ಸಾಕಷ್ಟು ಹೋಲಿಕೆಗಳಿದೆ: ಪ್ರಯಾಗ ಮಾರ್ಟಿನ್

ವಿಜಯ್ ನಾಗೇಂದ್ರ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ "ಗೀತಾ" ಮೂಲಕ ಮಲಯಾಳಂ ಚಿತ್ರನಟಿ ಪ್ರಯಾಗ ಮಾರ್ಟಿನ್ ಸ್ಯಾಂಡಲ್ ವುಡ್ ಪ್ರವೇಶಿಸಲಿದ್ದಾರೆ. 
ಗೀತಾ ಪಾತ್ರಕ್ಕೂ ನನಗೂ ಸಾಕಷ್ಟು ಹೋಲಿಕೆಗಳಿದೆ: ಪ್ರಯಾಗ ಮಾರ್ಟಿನ್

ವಿಜಯ್ ನಾಗೇಂದ್ರ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ "ಗೀತಾ" ಮೂಲಕ ಮಲಯಾಳಂ ಚಿತ್ರನಟಿ ಪ್ರಯಾಗ ಮಾರ್ಟಿನ್ ಸ್ಯಾಂಡಲ್ ವುಡ್ ಪ್ರವೇಶಿಸಲಿದ್ದಾರೆ.  ಚಿತ್ರದ ಶೀರ್ಷಿಕೆ ಶಂಕರ್ ನಾಗ್ ನಟಿಸಿದ 1983 ರ ಕ್ಲಾಸಿಕ್ ಚಲನಚಿತ್ರದ್ದಾಗಿದ್ದು ಚಿತ್ರದಲ್ಲಿ ಗೀತಾ ಶೀರ್ಷಿಕೆಯ ಪಾತ್ರವನ್ನು ನಿರ್ವಹಿಸುವ ಅದೃಷ್ಟ ನನದಾಗಿದೆ ಎಂದು ನಟಿ ಖುಷಿಯಿಂದ ಹೇಳಿಕೊಳ್ಳುತ್ತಾರೆ.

"ನಾನು ಮಲಯಾಳಿ, ಇದೀಗಷ್ಟೇ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದೇನೆ. ಅದೂ "ಗೀತಾ" ಚಿತ್ರದ ಮೂಲಕ. ಅದಲ್ಲದೆ ಶೀರ್ಷಿಕೆ ಹೆಸರಿನ ಪಾತ್ರವೇ ನನ್ನದಾಗಿರುವುದು ನನ್ನ ಗೌರವವೆಂದು ನಾನು ಭಾವಿಸಿದ್ದೇನೆ. , ಈ ಪಾತ್ರಕ್ಕಾಗಿ ನಾನು ಸಾಕಷ್ಟು ಸಿದ್ಧತೆಗಳನ್ನು ಮಾಡಿದ್ದೇನೆ, ”ಎಂದು ಅವರು ಹೇಳುತ್ತಾರೆ. ಪತ್ರಿಕೆಯೊಂದಿಗಿನ ಸಂವಾದದಲ್ಲಿ, ನಟಿ  ಸ್ಯಾಂಡಲ್‌ವುಡ್‌ನ ಸಂಸ್ಕೃತಿ ಮತ್ತು ಇತಿಹಾಸವನ್ನು ಅರ್ಥಮಾಡಿಕೊಳ್ಳುವುದಕ್ಕೆ ಹೇಗೆ ಪ್ರಯತ್ನಿಸಿದ್ದಾರೆಎಂಬುದರ ಕುರಿತು ಮಾತನಾಡುತ್ತಾರೆ ಮತ್ತು ಹಿರ್ತಿಯ ಪಾರಂಪರಿಕ ನಟ ನಟಿಯರ, ನಿರ್ದೇಶಕರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಆಸಕ್ತಿ ಇದೆ ಎಂದಿದ್ದಾರೆ.

"ಶಂಕರ್ ನಾಗ್ ಅವರ ಕ್ಲಾಸಿಕ್ ಚಿತ್ರ "ಗೀತಾ" ವೀಕ್ಷಣೆ ನನ್ನ ಪಾತ್ರಕ್ಕಾಗಿನ ಮೊದಲ ತಯಾರಿಯಾಗಿತ್ತು.ಈ ಹಿಂದೆ ಮಾಲ್ಗುಡಿ ಡೇಸ್‌ ಚಿತ್ರೀಕರಣದ ವೇಳೆ ನನಗವರ ಪರಿಚಯವಾಗಿತ್ತು. ಗೀತಾ ತಂಡದಿಂದ ನನಗೆ ಕರೆ ಬಂದಾಗ, ಕ್ಲಾಸಿಕ್ ಚಿತ್ರದ ಶೀರ್ಷಿಕೆಯಾಗಿರುವುದು ನನಗೆ ಸಂತಸ ತಂದಿತ್ತು. ಹಾಗಾಗಿ ನಾನು "ಗೀತಾ" ಚಿತ್ರ ವೀಕ್ಷಣೆ ಜತೆಗೆ ಹಲವು ಹೋಂ ವರ್ಕ್ ಗಳನ್ನು ಮಾಡಿದ್ದೆ. ಹಾಗೆಯೇ ಇದು ಶಂಕರ್ ನಾಗ್ ಚಿತ್ರದ ಉತ್ತರಾರ್ಧವಲ್ಲ. ‘80 ರ ದಶಕದಲ್ಲಿ ಮಾಡಿದ ಆ ಚಿತ್ರದ ಯಾವುದೇ ರೀತಿಯ ದೃಶ್ಯವಿಲ್ಲಿಲ್ಲ. ಆದರೆ ನಾನು ಕನ್ನಡ ಚಿತ್ರೋದ್ಯಮಕ್ಕೆ ಹೊರಗಿನವಳಾದ ಕಾರಣ ಕನ್ನಡ ಚಲನಚಿತ್ರಗಳು, ಹಾಡುಗಳು ಮತ್ತು ಶಂಕರ್ ನಾಗ್ ಅವರ ಪರಂಪರೆ ಇತ್ಯಾದಿಗಳ ಬಗ್ಗೆ ನನಗೆ ಪರಿಚಯವಾಗಲು ನನಗಿದು ಸಹಾಯ ಮಾಡಿದೆ.

"ನಾನು ಗೀತಾ ಪಾತ್ರದ ಹಲವಾರು ಹೋಲಿಕೆಗಳನ್ನು ಹೊಂದಿದ್ದೇನೆ." ಎನ್ನುವ ನಟಿ ಪಿಸಾಸು ಎಂಬ ತಮಿಳು ಚಿತ್ರದೊಂದಿಗೆ 19 ವರ್ಷದವರಿದ್ದಾಗಲೇ ಚಿತ್ರರಂಗವನ್ನು ಪ್ರವೇಶಿದ್ದರು. ಈಗ ಮಲಯಾಳಂ ಚಿತ್ರರಂಗದಲ್ಲಿ ಹೆಸರಾಂತ ನಾಯಕಿಯಾಗಿ ಬೆಳೆದಿದ್ದಾರೆ.14 ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ತಾನು ಇಲ್ಲಿಯವರೆಗೆ ಭಾಗವಾಗಿದ್ದ ಎಲ್ಲ ಚಿತ್ರಗಳ ಪೈಕಿ, ಗೀತಾ ಪಾತ್ರದೊಂದಿಗೆ ಸಾಕಷ್ಟು ಹೋಲಿಕೆಗಳನ್ನು ಕಂಡುಕೊಂಡಿದ್ದಾರೆ. ಹಾಗಾಗಿ ಇದು ಅವರ ಹೃದಯಕ್ಕೆ ಹತ್ತಿರವಾಗಲು ಅವಕಾಶವಾಗಿದೆ ಎಂದಿದ್ದಾರೆ. "ಗೀತಾ ಇಂದಿನ ಯಾವುದೇ ಹುಡುಗಿಯೊಂದಿಗೆ ಸಂಬಂಧ ಹೊಂದಬಲ್ಲವಳು" ಎಂದು ಪ್ರಯಾಗ ಹೇಳುತ್ತಾರೆ. 

 ಗೀತಾ ಪಾತ್ರವು ತನ್ನದೇ ಆದ ನಿಯಮಗಳಿಗೆ ಅನುಗುಣವಾಗಿ ಬದುಕುವ ಮಹಿಳೆ, ಬೇರೆಯವರನ್ನು ಅವಲಂಬಿಸಲು ಇಷ್ಟಪಡುವುದಿಲ್ಲ ಮತ್ತು ಹಾಗೆ ಬದುಕಬೇಕೆಂದು ಬಯಸುವ ನೈಜ,ನೇರ ಮತ್ತು ಪ್ರಬುದ್ಧ ಆತ್ಮ. ಅವಳು. ಸದಾ ಸಂತಸದಿಂದ ಕೂಡಿರುತ್ತಾಳೆ.ಸಹಾಯ ಮಾಡುವ ಮನೋಧರ್ಮ,  ತನ್ನನ್ನು ಮತ್ತು ಇತರರನ್ನು ಗೌರವಿಸುತ್ತಾಳೆ - ಇಂದಿನ ಮಹಿಳೆಯರಿಗೆ ಈ ಪಾತ್ರ ಹೆಚ್ಚು ಸನಿಹವಾಗಲಿದೆ.ಗೀತಾ ನಾನು ಹುಡುಕುವ ವ್ಯಕ್ತಿ. ಆದ್ದರಿಂದ ಈ ಪಾತ್ರವನ್ನು ನಿರ್ವಹಿಸುವಾಗ, ನಾನು ಹಿಂದೆಂದೂ ಮಾಡದ ಕೆಲಸವನ್ನು ನಾನು ಮಾಡುತ್ತಿದ್ದೇನೆ ಎಂದು ನನಗೆ ಅನಿಸಿಲ್ಲ. ನಾನು ಗೀತಾ ಆಗಿದ್ದಕ್ಕೆ ಖುಷಿ ಇದೆ.

ಕನ್ನಡ ಉದ್ಯಮವು ತುಂಬಾ ವೃತ್ತಿಪರವಾಗಿದೆ ಎಂದು ಪ್ರಯಾಗ ಹೇಳುತ್ತಾರೆ. "ರಜನಿಕಾಂತ್ ಮತ್ತು ಅನಿಲ್ ಕಪೂರ್ ಅವರಂತಹ ಪ್ರಸಿದ್ಧ ನಟರು ಮತ್ತು ದೀಪಿಕಾ ಪಡುಕೋಣೆ ಅವರಂತಹ ಜನಪ್ರಿಯ ನಾಯಕಿ ಇಲ್ಲಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಎಂದು ತಿಳಿದಾಗ ಇದು ನನಗೆ ಪ್ರೇರಕ ಅಂಶವಾಗಿದೆ" ಎಂದು ನಟ ಹೇಳುತ್ತಾರೆ, 

ಗೋಕಾಕ್ ಆಂದೋಲನದ ಹಿಂದಿನ ಇತಿಹಾಸವನ್ನು ತಿಳಿದು ಸಂತೋಷವಾಗಿದೆ. ಇದು ಗೀತಾ ಚಿತ್ರದಲ್ಲಿ ಮೊಇದಲ ಬಾರಿಗೆ ತೆರೆ ಮೇಲೆ ಬಿತ್ತರವಾಗುತ್ತಿರುವ ಕನ್ನಡ ಚಳವಳಿಯ ನೈಜ ಪ್ರಸಂಗ ಎಂಬುದು ಗಮನಾರ್ಹ. "ಗೀತಾದಲ್ಲಿನ ಒಂದು ಪ್ರಸಂಗವಾದ್ದರಿಂದ, ಆಂದೋಲನ ಹೇಗೆ ರೂಪುಗೊಂಡಿತ್ತು, ಹೇಗೆ ನಡೆದಿತ್ತೆಂದು ತಿಳಿಯಲು ನಾನು ಉತ್ಸುಕಳಾಗಿದ್ದೆ.  ಈ ಬಗ್ಗೆ ನನಗೆ ಸಂಕ್ಷಿಪ್ತವಾಗಿ ಹೇಳಲು ನಾನು ನಿರ್ದೇಶಕರನ್ನು ಕೇಳಿದೆ, ಆದರೆ ನಾನು ಅದರ ಬಗ್ಗೆ ಓದಿದ್ದೇನೆ. ನನ್ನ ಹೃದಯವು ಕರ್ನಾಟಕಕ್ಕೂ ಒಂದು ಸ್ಥಾನವನ್ನು ನಿಡುತ್ತದೆ. ಡಾ. ರಾಜ್‌ಕುಮಾರ್, ಶಂಕರ್ ನಾಗ್ ಮತ್ತು ವಿಷ್ಣುವರ್ಧನ್ ಅವರಂತಹ ಪ್ರಸಿದ್ಧ ನಟರು ತಮ್ಮ ಕನ್ನಡ ಸಂಸ್ಕೃತಿ ಮತ್ತು ಭಾಷೆಗಾಗಿ ಒಟ್ಟಿಗೆ ಹೋರಾಡಿದ್ದರೆಂದು ತಿಳಿದಾಗ ಹೃದಯ ಸಂತೋಷದಿಂದ ಉಬ್ಬಿತು. ಇಂದಿಗೂ ಅದೇ ಐಕ್ಯತೆಯನ್ನು ಪ್ರದರ್ಶಿಸಿದರೆ, ಕನ್ನಡ ಉದ್ಯಮವು ಬಹಳ ದೂರ ಸಾಗಲಿದೆ ಎಂದು ನನಗೆ ಖಾತ್ರಿ ಇದೆ. “ಪ್ರಯಾಗ ಹೇಳುತ್ತಾರೆ.

ಪ್ರಯಾಗ ಅವರ ಪ್ರಕಾರ, ಗೀತಾ ಅತ್ಯುತ್ತಮ ತಂಡವನ್ನು ಹೊಂಇದೆ. , ಇದರಲ್ಲಿ ನಟ ಗಣೇಶ್, ನಿರ್ಮಾಪಕ ಸೈಯದ್ ಸಲಾಮ್, ನಿರ್ದೇಶಕ ವಿಜಯ್ ನಾಗೇಂದ್ರ, ಡಿಒಪಿ ಶ್ರೀಷಾ ಕುಡುವಲ್ಲಿ, ಮತ್ತು ಸಂತೋಷ್ ಆನಂದ್ ರಾಮ್  ಇತರರು ಸೇರಿದ್ದಾರೆ. “ನಾನು ಭೇಟಿಯಾದ ಮೊದಲ ವ್ಯಕ್ತಿ ವಿಜಯ್, ಮತ್ತು ನನ್ನ ಪಾತ್ರ ಮತ್ತು ಚಿತ್ರದ ಬಗ್ಗೆ ಅವರು ನನಗೆ ಮತ್ತು ನನ್ನ ಹೆತ್ತವರಿಗೆ ನೀಡಿದ ನಿರೂಪಣೆಯನ್ನು ನಾನು ಇಷ್ಟಪಟ್ಟೆ. ಇದಲ್ಲದೆ, ನಾನು ತಂಡದಿಂದ ವಿವರವಾದ ವಿವರಣೆಯನ್ನು ಪಡೆದಿದ್ದೇನೆ.ವೇಷಭೂಷಣಗಳು, ಮೇಕ್ಅಪ್ ಮತ್ತು ಕೂದಲ ಸ್ಟೈಲ್ ಬಗೆಗೆ ಸಹ ಚರ್ಚಿಸಿದ್ದೇನೆ.

ನಿರ್ದೇಶಕರು ದೂರದೃಷ್ಟಿ ಹೊಂದಿರುವ  ವ್ಯಕ್ತಿ ಎಂದು ನಾನು ಭಾವಿಸಿದ್ದೇನೆ. ಗಣೇಶ್  ತುಂಬಾ ಸ್ವಾಭಾವಿಕ ನಟ. ಅವರು  ತನ್ನ ದೃಶ್ಯಗಳನ್ನು ಮಾಡುವಾಗಲೆಲ್ಲಾ ನನ್ನ ಗಮನವನ್ನು ಅಲ್ಲಿಯೇ ಕೇಂದ್ರೀಕರಿಸುತ್ತಾರೆ.ಚಿತ್ರೀಕರಣದ ಅವಿಭಾಜ್ಯ ಅಂಗವಾಗಿದ್ದ ನಿರ್ಮಾಪಕ ಸೈಯದ್ ಸಲಾಮ್ ಅವರನ್ನೂ ನಾನು ನೆನೆಯಲೇಬೇಕಿದೆ":ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com