ವಿನಯ್ ರಾಜ್​ಕುಮಾರ್ ಅಭಿನಯದ ಬಾಕ್ಸಿಂಗ್ ಸಿನಿಮಾ ಟೈಟಲ್ '10'?

'ಕಿರಿಕ್ ಪಾರ್ಟಿ' ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡುತ್ತಿರುವ ಹೊಸ ಚಿತ್ರದಲ್ಲಿ ವಿನಯ್ ರಾಜ್​ಕುಮಾರ್ ಕಾಣಿಸಿಕೊಳ್ಳುತ್ತಿರುವುದು ಹಳೆಯ ಸುದ್ದಿ. ಇದೀಗ ಆ ಚಿತ್ರದ ಮುಹೂರ್ತ ಕೂಡ ನೆರವೇರಿದೆ. ಕರಮ್ ಚಾವ್ಲಾ ನಿರ್ದೇಶಿಸಲಿರುವ ಈ ಸಿನಿಮಾದಲ್ಲಿ ಅಣ್ಣಾವ್ರ ಮೊಮ್ಮಗ ಬಾಕ್ಸರ್ ಪಾತ್ರದಲ್ಲಿ ರಿಂಗ್​ಗೆ ಎಂಟ್ರಿ ಕೊಡಲಿದ್ದಾರೆ.

Published: 16th September 2019 01:05 PM  |   Last Updated: 16th September 2019 01:05 PM   |  A+A-


Vinay Rajkumar

ವಿನಯ್ ರಾಜ್ ಕುಮಾರ್

Posted By : Shilpa D
Source : The New Indian Express

ಕಿರಿಕ್ ಪಾರ್ಟಿ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡುತ್ತಿರುವ ಹೊಸ ಚಿತ್ರದಲ್ಲಿ ವಿನಯ್ ರಾಜ್​ಕುಮಾರ್  ಅಭಿನಯದ ಮುಹೂರ್ತ  ನೆರವೇರಿದೆ.

ಸ್ಯಾಂಡಲ್​ವುಡ್​ನಲ್ಲಿ ಕ್ರೀಡಾ ಪ್ರಧಾನ ಚಿತ್ರಗಳ ಹೊಸ ಪರ್ವವೊಂದು ಆರಂಭವಾಗುತ್ತಿದೆ. ಒಂದೆಡೆ ಅಖಾಡಕ್ಕಿಳಿದ 'ಪೈಲ್ವಾನ್'​ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಮತ್ತೊಂದೆಡೆ ದುನಿಯಾ ವಿಜಿ ಅಭಿನಯದ 'ಕುಸ್ತಿ' ಕಮಾಲ್ ಮಾಡಲು ಅಣಿಯಾಗುತ್ತಿದೆ. .

'ಕಿರಿಕ್ ಪಾರ್ಟಿ' ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡುತ್ತಿರುವ ಹೊಸ ಚಿತ್ರದಲ್ಲಿ ವಿನಯ್ ರಾಜ್​ಕುಮಾರ್ ಕಾಣಿಸಿಕೊಳ್ಳುತ್ತಿರುವುದು ಹಳೆಯ ಸುದ್ದಿ. ಇದೀಗ ಆ ಚಿತ್ರದ ಮುಹೂರ್ತ ಕೂಡ ನೆರವೇರಿದೆ. ಕರಮ್ ಚಾವ್ಲಾ ನಿರ್ದೇಶಿಸಲಿರುವ ಈ ಸಿನಿಮಾದಲ್ಲಿ ಅಣ್ಣಾವ್ರ ಮೊಮ್ಮಗ ಬಾಕ್ಸರ್ ಪಾತ್ರದಲ್ಲಿ ರಿಂಗ್​ಗೆ ಎಂಟ್ರಿ ಕೊಡಲಿದ್ದಾರೆ.

ಈಗಾಗಲೇ 'ಪೈಲ್ವಾನ್'  ರಿಂಗ್​ನಲ್ಲೂ ಬಾಕ್ಸಾಫೀಸ್​ನಲ್ಲೂ ಅಬ್ಬರಿಸಿದ್ದಾನೆ. ಇದರ ಬೆನ್ನಲ್ಲೇ ಮತ್ತೊಂದು ಬಾಕ್ಸಿಂಗ್ ಕಥೆಯಾಧಾರಿತ ಚಿತ್ರದ ಶೂಟಿಂಗ್ ಆರಂಭವಾಗಿದೆ. ಇನ್ನೂ ಹೆಸರಿಡದ ಈ ಚಿತ್ರದ ಕಥೆಯನ್ನು ಬಾಕ್ಸಿಂಗ್ ಸುತ್ತ ಹೆಣೆಯಲಾಗಿದ್ದು, ಚಿತ್ರದ ಶೇ. 70 ರಿಂದ 80 ಸನ್ನಿವೇಶಗಳು ಬಾಕ್ಸಿಂಗ್​ಗೆ ಸಂಬಂಧಿಸಿರಲಿದೆ ಎಂದು ತಿಳಿದು ಬಂದಿದೆ.

ಹಾಗೆಯೇ ರಿಂಗ್ ಒಳಗಿನ ರೋಚಕ ಕಾದಾಟಕ್ಕೆ ಸಾಕ್ಷಿಯಾಗಲಿರುವ ಈ ಚಿತ್ರಕ್ಕೆ 'ಟೆನ್' ಎಂಬ ಶೀರ್ಷಿಕೆ ಫೈನಲ್ ಮಾಡುವ ಸಾಧ್ಯತೆಯಿದೆ ಎಂಬ ಮಾತುಗಳು ಹರಿದಾಡುತ್ತಿದೆ.

ಏಕೆಂದರೆ ಬಾಕ್ಸಿಂಗ್ ರಿಂಗ್​ನಲ್ಲಿ ಎದುರಾಳಿ ನೆಲಕ್ಕೆ ಬಿದ್ದಾಗ ರೆಫ್ರಿ 10 ರವರೆಗೂ ಕೌಂಟ್ ಮಾಡುತ್ತಾರೆ. ಚಿತ್ರದ ರೋಚಕ ದೃಶ್ಯ ಇದೇ ಆಗಿರುವುದರಿಂದ ಚಿತ್ರಕ್ಕೆ ‘ಟೆನ್’ ಶೀರ್ಷಿಕೆ ಸೂಕ್ತ ಎಂಬ ಅಭಿಪ್ರಾಯ ಚಿತ್ರತಂಡದಲ್ಲಿದೆ.

ಇನ್ನು ಈ ಚಿತ್ರಕ್ಕಾಗಿ ವಿನಯ್ ರಾಜ್​ಕುಮಾರ್ ಕಳೆದ ಐದು ತಿಂಗಳಿಂದ ದೇಹ ದಂಡಿಸುತ್ತಿದ್ದು, ಸಂಪೂರ್ಣ ಹೊಸ ಗೆಟಪ್​ ಮೂಲಕ ತೆರೆ ಮೇಲೆ ಕಾಣಿಸಲಿದ್ದಾರೆ. 

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp