ಮಲಯಾಳಂ ಚಿತ್ರರಂಗದ ನಟ ಸತಾರ್ ನಿಧನ

ಮಲಯಾಳಂ ಚಿತ್ರರಂಗದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದ ನಟ ಸತಾರ್ ಮಂಗಳವಾರ ಕೊಚ್ಚಿಯಲ್ಲಿ  ನಿಧನರಾಗಿದ್ದಾರೆ. 
ನಟ ಸತಾರ್
ನಟ ಸತಾರ್

ಕೊಚ್ಚಿ: ಮಲಯಾಳಂ ಚಿತ್ರರಂಗದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದ ನಟ ಸತಾರ್ ಮಂಗಳವಾರ ಕೊಚ್ಚಿಯಲ್ಲಿ  ನಿಧನರಾಗಿದ್ದಾರೆ. ಪಿತ್ತಜನಕಾಂಗದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಅಳುವಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ 67 ವರ್ಷ ವಯಸ್ಸಾಗಿತ್ತು. 


ಕೇರಳದ ಎರ್ನಾಕುಲಂ ಜಿಲ್ಲೆಯ ಕಡುಂಗಲ್ಲೂರಿನಲ್ಲಿ ಹುಟ್ಟಿದ ಸತಾರ್ 1975ರಲ್ಲಿ ಎಂ ಕೃಷ್ಣನ್ ನಾಯರ್ ನಿರ್ದೇಶನದ ಭರಾಯೆ ಅವಶ್ಯಮುಂಡು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. 1976ರಲ್ಲಿ ಅನಾವರಣಂ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಂತರ 1970 ಮತ್ತು 80ರ ದಶಕದಲ್ಲಿ ವಿಲನ್ ಪಾತ್ರಗಳಲ್ಲಿ ಅಭಿನಯಿಸಿ ಖ್ಯಾತಿ ಗಳಿಸಿದ್ದರು. 


ಅಂದಿನ ಸಮಯದ ಖ್ಯಾತ ನಟಿ ಜಯಭಾರತಿ ಅವರನ್ನು 1979ರಲ್ಲಿ ವಿವಾಹವಾಗಿದ್ದರು. ಆದರೆ 1987ರಲ್ಲಿ ದಾಂಪತ್ಯ ಜೀವನ ಅಂತ್ಯವಾಗಿದ್ದ. ದಂಪತಿಗೆ ಜನಿಸಿದ್ದ ಪುತ್ರ ಕೃಷ್ ಸತಾರ್ ನಟನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.


ತಮಿಳು, ತೆಲುಗು ಸೇರಿ ಸುಮಾರು 150 ಚಿತ್ರಗಳಲ್ಲಿ ಸತಾರ್ ಅಭಿನಯಿಸಿದ್ದಾರೆ. ಚಿತ್ರರಂಗಕ್ಕೆ ಅಲ್ಪ ವಿರಾಮ ಘೋಷಿಸಿದ್ದ ಸತಾರ್ 2012ರಲ್ಲಿ 22 ಫಿಮೇಲ್ ಕೊಟ್ಟಾಯಂ ಮೂಲಕ ಮತ್ತೆ ಬಣ್ಣಹಚ್ಚಿದರು. 2014ರಲ್ಲಿ ಬಿಡುಗಡೆಯಾದ ಪರಯನ್ ಬಕಿವೆಚಾ ಅವರ ಕೊನೆಯ ಅಭಿನಯದ ಚಿತ್ರ.


ಇಂದು ಸಂಜೆ 4 ಗಂಟೆಗೆ ಕುಡಂಗಲ್ಲೂರಿನ ಜುಮಾ ಮಸೀದಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com