ರಾಜ್ಯಾದ್ಯಂತ ‘ದಾದಾ’ ಸ್ಮರಣೆ, 'ಯಜಮಾನ'ನನ್ನು ನೆನೆದ ಸಿಎಂ ಯಡಿಯೂರಪ್ಪ, ಸ್ಯಾಂಡಲ್ ವುಡ್ 

ರಾಜ್ಯಾದ್ಯಂತ ಸಾಹಸ ಸಿಂಹ ಡಾ ವಿಷ್ಣುವರ್ಧನ್ ಅವರ 69ನೇ ಜನ್ಮದಿನವನ್ನು ಆಚರಿಸಲಾಗುತ್ತಿದ್ದು, ಅನ್ನದಾನ, ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ ಚಂದನವನದ ತಾರೆಯರು ಸಾಮಾಜಿಕ ಜಾಲತಾಣಗಳಲ್ಲಿ ದಾದಾನನ್ನು ಸ್ಮರಿಸಿದ್ದಾರೆ

Published: 18th September 2019 01:29 PM  |   Last Updated: 18th September 2019 01:29 PM   |  A+A-


ವಿಷ್ಣುವರ್ಧನ್

Posted By : Raghavendra Adiga
Source : UNI

ಬೆಂಗಳೂರು:  ರಾಜ್ಯಾದ್ಯಂತ ಸಾಹಸ ಸಿಂಹ ಡಾ ವಿಷ್ಣುವರ್ಧನ್ ಅವರ 69ನೇ ಜನ್ಮದಿನವನ್ನು ಆಚರಿಸಲಾಗುತ್ತಿದ್ದು, ಅನ್ನದಾನ, ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ ಚಂದನವನದ ತಾರೆಯರು ಸಾಮಾಜಿಕ ಜಾಲತಾಣಗಳಲ್ಲಿ ದಾದಾನನ್ನು ಸ್ಮರಿಸಿದ್ದಾರೆ

ಚಾಲೆಂಜಿಂಗ್ ಸ್ಟಾರ್ ದರ್ಶನ್, “ಕನ್ನಡಿಗರ ಯಜಮಾನ, ನಮ್ಮೆಲ್ಲರ ನಲ್ಮೆಯ ‘ಅಭಿನಯ ಭಾರ್ಗವ’ ಸಾಹಸ ಸಿಂಹ ಡಾ ವಿಷ್ಣುವರ್ಧನ್ ಸರ್ ರವರ ಜನ್ಮದಿನೋತ್ಸವ ಇಂದು ಯುಗ ಯುಗಗಳೇ ಸಾಗಲಿ ನಮ್ಮ ಪ್ರೀತಿ ಶಾಶ್ವತ” ಎಂದು ಟ್ವೀಟ್ ಮಾಡಿದ್ದಾರೆ.

 

 

ಇನ್ನು ಕಿಚ್ಚ ಸುದೀಪ್ "ಹುಟ್ಟು ಹಬ್ಬದ ಶುಭಾಶಯ ಅಪ್ಪಾಜಿ.ನಿಮ್ಮ ಮೇಲೆ ಪ್ರೀತಿ ಯೆಷ್ಟುಇದ್ಯೆಯೋ, ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ಕೋಪವು ಅಷ್ಟೇ ಇದೆ. ಅನಾಥರಾಗಿದ್ಧೀವಿ. ಬಹಳ ಬೇಗೆ ಹೋಗಿಬಿಟ್ಟಿರಿ. ನಿಮಗೆ ನಮ್ಮೆಲ್ಲರ ಅಗತ್ಯ ಎಷ್ಟಿತ್ತೋ ನನಗೆ ಗೊತ್ತಿಲ್ಲ, ಆದರೆ ನಿಮ್ಮ ಅಗತ್ಯ ನಮಗಿತ್ತು.  ನಿಮ್ಮನ್ನು ನೆನೆಯುವ,ಪ್ರೀತಿಸುವ, ಅಭಿಮಾನಿಯಲೊಬ್ಬ." ಎಂದಿದ್ದಾರೆ.

ನಟ ರಮೇಶ್ ಅರವಿಂದ್, “ನೂರೊಂದು ನೆನಪು ಎದೆಯಾಳದಿಂದ” ಎಂದು ಬರೆದುಕೊಂಡಿದ್ದು, ವಿಷ್ಣುವರ್ಧನ್ ಕ್ಲಾಪ್ ಮಾಡುತ್ತಿರುವ ಭಾವಚಿತ್ರವನ್ನು ಶೇರ್ ಮಾಡಿದ್ದಾರೆ
  
ಗೋಲ್ಡನ್ ಸ್ಟಾರ್ ಗಣೇಶ್, ವಿಷ್ಣುವರ್ಧನ್ ಅವರೊಂದಿಗಿನ ಜನ್ಮದಿನದ ಪೋಟೊ ಶೇರ್ ಮಾಡಿ, “ದಾದಾ ನಿಮ್ಮ ನೆನಪು ಸದಾ ಹಸಿರು” ಎಂದು ಬರೆದುಕೊಂಡಿದ್ದಾರೆ
  
ಖ್ಯಾತ ಹಾಸ್ಯನಟ ಶರಣ್, “ಸೆಪ್ಟೆಂಬರ್ 18 ಸದಾ ವಿಶೇಷ ಇಂದು ದಾದಾ ವಿಷ್ಣುವರ್ಧನ್, ಸೂಪರ್ ಸ್ಟಾರ್ ಉಪೇಂದ್ರ ಹಾಗೂ ನನ್ನ ಅಕ್ಕ ಶ್ರುತಿಯವರ ಜನ್ಮದಿನ” ಎಂದು ಟ್ವೀಟ್ ಮಾಡುವುದರ ಜೊತೆಗೆ ಮೂವರ ಭಾವಚಿತ್ರಗಳನ್ನು ಶೇರ್ ಮಾಡಿದ್ದಾರೆ.
  
ನವರಸನಾಯಕ ಜಗ್ಗೇಶ್,“ನೆನಪಿದೆ ಆ ದಿನ ನನ್ನ ಹರಸಿದ ನಿಮ್ಮ ಮನ!! ದೇಹತ್ಯಾಗ ನಶ್ವರ ಜಗದ ಸಹಜಕ್ರಿಯೆ! ಆದರೆ ಸವಿನೆನಪು ಬಿಟ್ಟು ಹೋಗುವುದು ಆತ್ಮೀಯ ಹೃದಯ ಮಾತ್ರ.. ನಾ ಕಂಡ ಕೆಲ ಆತ್ಮೀಯ ಹೃದಯಗಳಲ್ಲಿ ನೀವು ಒಬ್ಬರು.. ನಿಮ್ಮ ಕಾಲದಲ್ಲಿ ನಾನು ಇದ್ದೆ ಎಂಬ ಹೆಮ್ಮೆಯಿದೆ..ಹುಟ್ಟು ಹಬ್ಬದ ಶುಭಾಶಯಗಳು ವಿಷ್ಣು ಸಾರ್...” ಎಂದು ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.
  
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ನಟ ಚಿರಂಜೀವಿ ಸರ್ಜಾ, ಧ್ರುವ ಸರ್ಜಾ, ನಿರ್ದೇಶಕ ಶಶಾಂಕ್, ಸಂತೋಷ್ ಆನಂದ್ ರಾಮ್ ಮೊದಲಾದವರು ವಿಷ್ಣುವರ್ಧನ್ ಅವರನ್ನು ಸ್ಮರಿಸಿದ್ದಾರೆ.. 

ಚಿತ್ರರಂಗ ಮಾತ್ರವಲ್ಲದೆ ರಾಜ್ಯದ ಸಿಎಂ ಯಡಿಯೂರಪ್ಪ ಸಹ ಸಾಹಸಸಿಂಹನ ಜನ್ಮದಿನದಂದು ಅವರ ಸ್ಮರಣೆ ಮಾಡಿದ್ದಾರೆ. "ಇಂದು ಕನ್ನಡ ‌ಚಿತ್ರರಂಗ ಕಂಡ ಮಹಾನ್ ನಟರಲ್ಲೊಬ್ಬರಾದ ಡಾ‌‌. ವಿಷ್ಣುವರ್ಧನ್ ಅವರ ಜನ್ಮದಿನ. ಮೇರು ನಟ ವಿಷ್ಣುವರ್ಧನ್ ತಮ್ಮ ಅಭಿನಯ ಮತ್ತು ವ್ಯಕ್ತಿತ್ವದಿಂದ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ." ಎಂಬುದಾಗಿ ಅವರು ಟ್ವೀಟ್ ಮಾಡಿದ್ದಾರೆ.

ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಬಳಿಯಿರುವ ಪುಣ್ಯಭೂಮಿಯಲ್ಲಿ ವಿಷ್ಣುವರ್ಧನ್ ಸಮಾಧಿಯನ್ನು ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿದ್ದು, ರಾಜ್ಯದ ವಿವಿಧ ಭಾಗದಿಂದ ಆಗಮಿಸಿರುವ ಅಭಿಮಾನಿಗಳು ದರ್ಶನ ಪಡೆಯುತ್ತಿದ್ದಾರೆ
  
ಮೈಸೂರು ಜಿಲ್ಲೆ, ಹೆಗ್ಗಡದೇವನ ಕೋಟೆ ತಾಲ್ಲೂಕಿನ ಹಾಲಾಳು ಗ್ರಾಮದಲ್ಲಿ ಆಯೋಜಿಸಲಾಗಿರುವ ವಿಷ್ಣುವರ್ಧನ್ ಜನ್ಮದಿನದ ಕಾರ್ಯಕ್ರಮದಲ್ಲಿ ಭಾರತಿ ವಿಷ್ಣುವರ್ಧನ್, ಪುತ್ರಿ ಕೀರ್ತಿ ಹಾಗೂ ಅಳಿಯ, ನಟ ಅನಿರುದ್ಧ್ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ

 

 

 

 

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp