ಸಿನಿಮಾದಲ್ಲಿ ಪಾತ್ರವೇ ಮುಖ್ಯ:ಶಾನ್ವಿ ಶ್ರೀವಾಸ್ತವ್ 

ಶಾನ್ವಿ ಶ್ರೀವಾಸ್ತವ್ ಕನ್ನಡದ ಮುಂಚೂಣಿ ನಾಯಕಿಯರಲ್ಲಿ ಒಬ್ಬರು. ಹಲವು ಚಿತ್ರಗಳಲ್ಲಿ ನಟಿಸುತ್ತಾ ಹೋದಂತೆ ಪಾತ್ರಗಳ ಆಯ್ಕೆಯಲ್ಲಿ ಪಳಗಿರುವ ಅವರು ಚಿತ್ರದಲ್ಲಿ ಪಾತ್ರ ಜನರ ಮನಸ್ಸಿಗೆ ಹತ್ತಿರವಾಗಬೇಕೆ ಹೊರತು ಎಷ್ಟು ಹೊತ್ತು ಪಾತ್ರವಿರುತ್ತದೆ ಎಂಬುದಲ್ಲ ಎನ್ನುತ್ತಾರೆ. 
 

Published: 19th September 2019 05:16 PM  |   Last Updated: 19th September 2019 05:32 PM   |  A+A-


A still from the film Geetha

ಗೀತಾ ಚಿತ್ರದ ದೃಶ್ಯ

Posted By : Sumana Upadhyaya
Source : The New Indian Express

ಶಾನ್ವಿ ಶ್ರೀವಾಸ್ತವ್ ಕನ್ನಡದ ಮುಂಚೂಣಿ ನಾಯಕಿಯರಲ್ಲಿ ಒಬ್ಬರು. ಹಲವು ಚಿತ್ರಗಳಲ್ಲಿ ನಟಿಸುತ್ತಾ ಹೋದಂತೆ ಪಾತ್ರಗಳ ಆಯ್ಕೆಯಲ್ಲಿ ಪಳಗಿರುವ ಅವರು ಚಿತ್ರದಲ್ಲಿ ಪಾತ್ರ ಜನರ ಮನಸ್ಸಿಗೆ ಹತ್ತಿರವಾಗಬೇಕೆ ಹೊರತು ಎಷ್ಟು ಹೊತ್ತು ಪಾತ್ರವಿರುತ್ತದೆ ಎಂಬುದಲ್ಲ ಎನ್ನುತ್ತಾರೆ. 


ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಗೆ ಅಭಿನಯಿಸಿರುವ ಗೀತಾ ಚಿತ್ರದಲ್ಲಿ ಶಾನ್ವಿಗೆ ವಿಶೇಷ ಪಾತ್ರವಿದೆ. ಚಿತ್ರದಲ್ಲಿ ಮತ್ತಿಬ್ಬರು ನಾಯಕಿಯರಿದ್ದಾರೆ. ಮಲ್ಟಿ ಹೀರೋಯಿನ್ ಗಳೆಂದಾಗ ಆರಂಭದಲ್ಲಿ ಶಾನ್ವಿಗೆ ಎಲ್ಲರಂತೆ ಸಹಜವಾಗಿ ಈ ಪಾತ್ರ ಒಪ್ಪಿಕೊಳ್ಳಬೇಕೆ, ಬೇಡವೆ ಎಂದು ಸಂದೇಹ ಉಂಟಾಗಿತ್ತಂತೆ.


Shanvi Srivastava ಚಿತ್ರದ ಪಾತ್ರಕ್ಕೆ ತಾವು ಸೂಕ್ತವಾಗಿ ಹೊಂದಿಕೆಯಾಗುತ್ತಿದ್ದೀರಿ, ಬಹಳ ಮುಖ್ಯ ಪಾತ್ರ ಎಂದು ನಿರ್ದೇಶಕರು ಹೇಳಿದಾಗ ಶಾನ್ವಿ ಒಪ್ಪಿಕೊಂಡರಂತೆ. ಈ ಹಿಂದಿನ ತಾರಕ್ ಚಿತ್ರ ನಾನು ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಆಲೋಚನೆಯನ್ನೇ ಬದಲಿಸಿತು ಎನ್ನುತ್ತಾರೆ. ಅನೇಕ ವರ್ಷಗಳ ಕಾಲ ಒಬ್ಬಳೇ ಹೀರೋಯಿನ್ ಆಗಿರುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೆ. ಅಂತಹ ಸಮಯದಲ್ಲಿ ತಾರಕ್ ಒಪ್ಪಿಕೊಂಡೆ. ಅದರಲ್ಲಿ ಇಬ್ಬರು ನಾಯಕಿಯರು. ಪ್ರೇಕ್ಷಕರಿಗೆ ನನ್ನ ಪಾತ್ರ ಹಿಡಿಸಿತು. ಚಿತ್ರದಲ್ಲಿ ನಾಯಕಿಯರು ಎಷ್ಟು ಇರುತ್ತಾರೆ ಎಂಬುದು ಮುಖ್ಯವಲ್ಲ. ಪಾತ್ರ ಮುಖ್ಯ ಎಂದು ಗೊತ್ತಾಯಿತು ಎನ್ನುತ್ತಾರೆ.


ಗೀತಾ ಚಿತ್ರದಲ್ಲಿ ಶಾನ್ವಿ ಅವರ ಪಾತ್ರವೇ ಚಿತ್ರವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವುದಂತೆ. ಪ್ರೇಕ್ಷಕರು ಇಡೀ ಚಿತ್ರದಲ್ಲಿ ಮುಖ್ಯವಾಗುತ್ತಾರೆ. ಇದರಲ್ಲಿ ಶಾನ್ವಿ ರೆಟ್ರೊ ಲುಕ್ ಮತ್ತು ಕಾರ್ಪೊರೇಟ್ ಮಹಿಳೆಯ ಪಾತ್ರ ಎರಡು ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.


ಇದೇ ಮೊದಲ ಬಾರಿ ಗೀತಾ ಚಿತ್ರಕ್ಕೆ ಶಾನ್ವಿ ಅವರೇ ಧ್ವನಿ ನೀಡಿದ್ದಾರೆ. ನಟನೆ ಮತ್ತು ಧ್ವನಿ ನೀಡುವ ಮೂಲಕ ಈಗ ಪರಿಪೂರ್ಣ ಕನ್ನಡಿಗ ನಟಿ ಎಂದು ಅನಿಸಿಕೊಳ್ಳುತ್ತಿದ್ದೇನೆ ಎಂದರು. ಗೀತಾ ಬಳಿಕ ರಕ್ಷಿತ್ ಶೆಟ್ಟಿ ಜೊತೆಗೆ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ಕೂಡ ಶಾನ್ವಿ ನಟಿಸಿದ್ದಾರೆ. 


ಗೀತಾ ಚಿತ್ರಕ್ಕೆ ಚೊಚ್ಚಲ ನಿರ್ದೇಶಕ ವಿಜಯ್ ನಾಗೇಂದ್ರ ಆಕ್ಷನ್ ಕಟ್ ಹೇಳಿದ್ದಾರೆ. 

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp