ಕಿಸ್ ಸಿನಿಮಾ ನಾಯಕಿ ಶ್ರೀಲೀಲಾಗೆ ಮಯೂರಿ ಕ್ಯಾತರಿ 'ಕಂಠದಾನ'

ಎ.ಪಿ ಅರ್ಜುನ್ ನಿರ್ದೇಶನದ ಕಿಸ್ ಸಿನಿಮಾ ರಿಲೀಸ್ ಹಂತಕ್ಕೆ ಬಂದಿದ್ದು., ನನ್ನ ಪ್ರಕಾರ ಸಿನಿಮಾ ನಟಿ ಮಯೂರಿ ಕ್ಯಾತರಿ ಕಿಸ್   ನಾಯಕಿ ಶ್ರೀಲೀಲಾ ಅವರಿಗೆ ಕಂಠದಾನ ಮಾಡಿದ್ದಾರೆ.
ಮಯೂರಿ
ಮಯೂರಿ

ಎ.ಪಿ ಅರ್ಜುನ್ ನಿರ್ದೇಶನದ ಕಿಸ್ ಸಿನಿಮಾ ರಿಲೀಸ್ ಹಂತಕ್ಕೆ ಬಂದಿದ್ದು., ನನ್ನ ಪ್ರಕಾರ ಸಿನಿಮಾ ನಟಿ ಮಯೂರಿ ಕ್ಯಾತರಿ ಕಿಸ್   ನಾಯಕಿ ಶ್ರೀಲೀಲಾ ಅವರಿಗೆ ಕಂಠದಾನ ಮಾಡಿದ್ದಾರೆ.

ಕಿಸ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಶ್ರೀಲೀಲಾ ಪಾದಾರ್ಪಣೆ ಮಾಡುತ್ತಿದ್ದು, ನಟನೆಯ ಕಡೆ ಹೆಚ್ಚು ಗಮನ ನೀಡುತ್ತಿದ್ದಾರೆ, ಹೀಗಾಗಿ ಆಕೆಗೆ ತೊಂದರೆ ಕೊಡಬಾರದು ಎಂದು ನಿರ್ದರಿಸಿದೆ, ಶ್ರೀಲೀಲಾ ಮುದ್ದು ಮುಖಕ್ಕೆ ಮಯೂರಿ ಅವರ ಸ್ವೀಟ್ ವಾಯ್ಸ್ ಸರಿ ಹೊಂದುತ್ತದೆ ಎಂದು ನಿರ್ಧರಿಸಿ ಅವರಿಂದ ಡಬ್ಬಿಂಗ್ ಮಾಡಿದ್ದೇನೆ ಎಂದು ನಿರ್ದೇಶಕ ಅರ್ಜುನ್ ಹೇಳಿದ್ದಾರೆ.

ಮೊದಲಿಗೆ ಮಯೂರಿ ಕಂಠದಾನ ಮಾಡಲು ಹಿಂಜರಿದರು, ಅನಂತರ ಶ್ರೀಲೀಲಾಗೆ ಏಕೆ ನಿಮ್ಮದೆ ಧ್ವನಿ ಬೇಕು ಎಂಬುದರ ಬಗ್ಗೆ ಅರ್ಥ ಮಾಡಿಸಿದ ನಂತರ ಅವರು ಒಪ್ಪಿಕೊಂಡರು ಎಂದು ಅರ್ಜುನ್ ತಿಳಿಸಿದ್ದಾರೆ.

ಸ್ಯಾಂಡಲ್ ವುಡ್ ನ ಎಲ್ಲಾ ಸ್ನೇಹಿತರು ತಮಗೆ ಪ್ರೋತ್ಸಾಹ ನೀಡಿದ್ದಾರೆ, ಧ್ರುವ ಸರ್ದಾ ಕೂಡ ಕಿಸ್ ಸಿನಿಮಾಗೆ ಧ್ವನಿ ನೀಡಿದ್ದಾರೆ,  ಕಿಸ್ ಸಿನಿಮಾಗಾಗಿ ಪುನೀತ್ ಹಾಡಿಗೆ ದನಿಯಾಗಿದ್ದಾರೆ, ನಟ ಯಶ್ ಕಿಸ್ ಸಿನಿಮಾ ಆಡಿಯೋ ರಿಲೀಸ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com