ನಟಿ ತಾರಾ ಅನುರಾಧಾ ಪುತ್ರ ಕೃಷ್ಣನ ಬಹುದೊಡ್ಡ ಕನಸು ಏನು ಗೊತ್ತೆ?

Published: 20th September 2019 02:16 PM  |   Last Updated: 20th September 2019 02:16 PM   |  A+A-


tara Son Shree Krishna

ತಾರಾ ಪುತ್ರ ಶ್ರೀಕೃಷ್ಣ

Posted By : Shilpa D
Source : UNI

ಬೆಂಗಳೂರು: 'ಅಮ್ಮನೇ ನನಗೆ ಸ್ಫೂರ್ತಿ, ನಾನು ಅಮ್ಮನ ದೊಡ್ಡ ಫ್ಯಾನ್, ದೊಡ್ಡವನಾಗಿ ನಾನು ಅಮ್ಮನಂತೆ ಸ್ಟಾರ್ ಆಗ್ತಿನಿ. ನಾನು ಒಂದು ದಿನ ದೊಡ್ಡ ಹೀರೋ ಆಗುತ್ತೇನೆ' ಇದು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ, ಮೇಲ್ಮನೆ ಮಾಜಿ ಸದಸ್ಯೆ ತಾರಾ ಅನುರಾಧ, ಛಾಯಾಗ್ರಾಹಕ ಎಚ್.ಸಿ ವೇಣು ದಂಪತಿ ಪುತ್ರ 'ಕೃಷ್ಣ'ನ ಮುದ್ದಾದ ಮಾತುಗಳು.

'ಶಿವಾರ್ಜುನ' ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶ ಪಡೆದಿರುವ ಕೃಷ್ಣ, ತಾಯಿ ಜೊತೆ ತೆರೆಹಂಚಿಕೊಂಡಿದ್ದಾನೆ. ಚಿತ್ರದಲ್ಲಿ ತಾಯಿ-ಮಗನ ಪಾತ್ರವನ್ನು ಮಾಡುತ್ತಿರುವ ಈ ರಿಯಲ್ ಅಮ್ಮನ ಒಟ್ಟಿಗೆ ನಟಿಸಿದ್ದಕ್ಕೆ ಸಖತ್ ಖುಷಿಯಾಗಿದ್ದಾರೆ. ಶಿವನಂದಿ ಪಾತ್ರಕ್ಕೆ ಬಣ್ಣಹಚ್ಚಿರುವ ಕೃಷ್ಣ, ಡಬ್ಬಿಂಗ್ ಕೂಡ ಮಾಡಿ ಸೈ ಅನಿಸಿಕೊಂಡಿದ್ದಾನೆ. ಪಕ್ಕಾ ಕಮರ್ಷಿಯಲ್ ಆಗಿರುವ ಚಿತ್ರಕ್ಕೆ ಶಿವನಂದಿ ಪ್ರಮುಖ ಪಾತ್ರವಾಗಿದ್ದು, ಚಿರಂಜೀವಿ ಸರ್ಜಾ ಜೊತೆಗೆ ಶಿವನಂದಿ ಒಳ್ಳೆಯ ಕಾಂಬಿನೇಷನ್ ಆಗಿದೆ.

ಮನೆಯ ಸಮೀಪವೇ ಇರುವ ಇನ್ನೀಸ್ ಫ್ರೀ ಹೋಮ್ ಸ್ಕೂಲ್ ನಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿರುವ ಕೃಷ್ಣನಿಗೆ ಈಗ ಪರೀಕ್ಷಾ ಸಮಯ. ಓದಿನೊಂದಿಗೆ ಪರೀಕ್ಷೆಯಲ್ಲಿಯೂ ಈ ಹುಡುಗ ಚೆನ್ನಾಗಿ ಬರೆದಿದ್ದಾನಂತೆ. ಪರೀಕ್ಷೆ, ಸಿನಿಮಾ, ಪೇಂಟಿಂಗ್ ಎಂದೆಲ್ಲಾ ಬಿಝಿಯಾಗಿರುವ ಕೃಷ್ಣ ಸಿನಿಮಾ ಅಭಿನಯದ ಅನುಭವವನ್ನು ಹಂಚಿಕೊಂಡಿದ್ದಾರೆ,

ನಾನು ಅಮ್ಮನ ಚಿತ್ರಗಳನ್ನು ನೋಡುತ್ತಲೇ ಬರುತ್ತಿದ್ದೇನೆ. ಅವರ ಜೊತೆ ಚಿತ್ರೀಕರಣಕ್ಕೆ ಆಗಾಗ ಹೋಗುತ್ತಿರುತ್ತೇನೆ.ಅಮ್ಮನಂತೆ ನಾನು ನಟಿಸಬೇಕು ಎಂದು ಆಸೆಯಾಗುತ್ತಿತ್ತು. ಅಮ್ಮನೇ ನನ್ನ ಮೆಚ್ಚಿನ ನಟಿ, ನೆಚ್ಚಿನ ನಟ ರಾಕಿಂಗ್ ಸ್ಟಾರ್ ಯಶ್ ಎಂದು ಹೇಳಿರುವ ಕೃಷ್ಣ , ನಾನು ಹೀರೋ ಆಗಬೇಕು. ಧೃವಸರ್ಜಾ ತರಹ ಫೈಟ್ ಮಾಡಬೇಕು ಎಂಬ ಬಯಕೆ  ವ್ಯಕ್ತ ಪಡಿಸಿದ್ದೇನೆ.

ನಾನು ನಟನೆ ಮಾಡುತ್ತಿರುವುದನ್ನು ಶಾಲೆಯ ಶಿಕ್ಷಕಿಗಾಗಲೀ, ಫ್ರೆಂಡ್ ಗಾಗಲೀ ಹೇಳಿರಲಿಲ್ಲ. ನನ್ನ ಫ್ರೆಂಡ್ ಒಬ್ಬ ಪೇಪರ್ ನಲ್ಲಿ ಬಂದಿದ್ದ ನನ್ನ ಫೋಟೋವನ್ನು ತಂದು ನನಗೆ ತೋರಿಸಿ ಖುಷಿಪಟ್ಟ. ಅಮ್ಮನ ಜೊತೆಯಲ್ಲಿಯೇ ನಟನೆ ಮಾಡಿದ್ದು ಬಹಳ ಖುಷಿ ಕೊಟ್ಟಿದೆ. ಅಪ್ಪನೇ ಚಿತ್ರೀಕರಣ ಮಾಡಿದ್ದಾರೆ. ಸೆಟ್ ನಲ್ಲಿ ನಾನು ಅಮ್ಮ,ಅಪ್ಪ ಜೊತೆಗೆ ಇರುತ್ತಿದ್ದೆ. ಇನ್ನೂ ಯಾರನ್ನೂ ಸ್ನೇಹಿತರನ್ನಾಗಿ ಮಾಡಿಕೊಂಡಿಲ್ಲ.

ಅಪ್ಪನೇ ಕ್ಯಾಮೆರಾ ಹಿಡಿದಿದ್ದರಿಂದ ತೊಂದರೆಯೇನು ಆಗಲಿಲ್ಲ. ಡೈಲಾಗ್ ಹೇಳುವಾಗ ಸ್ವಲ್ಪ ಕಷ್ಟ ಆಗುತ್ತಿತ್ತು. ಆದರೆ ಅದೆ ಖುಷಿ ಕೊಡುತ್ತಿತ್ತು. ತುಂಬ ಸಂತೋಷವಾಗಿಯೇ ನಟಿಸಿದ್ದೇನೆ. ನಾನು ರಜೆ ದಿನಗಳಲ್ಲಿಯೇ ಹೆಚ್ಚು ನಟಿಸಿದ್ದೇನೆ. ಶಾಲೆಗಾಗಲೀ, ನನ್ನ ಓದಿಗಾಗಲಿ ಯಾವುದೇ ತೊಂದರೆಯಾಗಲಿಲ್ಲ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp