ತೆಲುಗು ಖ್ಯಾತ ನಟ ನಾಗಾರ್ಜುನ ಫಾರಂ ಹೌಸ್'ನಲ್ಲಿ ಕೊಳೆತ ಶವ ಪತ್ತೆ: ತನಿಖೆ ಆರಂಭ
ತೆಲುಗು ಚಿತ್ರರಂಗದ ಖ್ಯಾತ ನಟ ನಾಗಾರ್ಜುನ ಅವರಿಗೆ ಸೇರಿದ್ದ ಫಾರಂ ಹೌಸ್ ನಲ್ಲಿ ಅಪರಿಚತ ವ್ಯಕ್ತಿಯೊಬ್ಬರ ಮೃತದೇಹ ಕೊಳೆತ ರೀತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆಂದು ಶುಕ್ರವಾರ ತಿಳಿದುಬಂದಿದೆ.
Published: 20th September 2019 01:49 PM | Last Updated: 20th September 2019 01:49 PM | A+A A-

ನಾಗಾರ್ಜುನ
ಹೈದಬಾರಾದ್: ತೆಲುಗು ಚಿತ್ರರಂಗದ ಖ್ಯಾತ ನಟ ನಾಗಾರ್ಜುನ ಅವರಿಗೆ ಸೇರಿದ್ದ ಫಾರಂ ಹೌಸ್ ನಲ್ಲಿ ಅಪರಿಚತ ವ್ಯಕ್ತಿಯೊಬ್ಬರ ಮೃತದೇಹ ಕೊಳೆತ ರೀತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆಂದು ಶುಕ್ರವಾರ ತಿಳಿದುಬಂದಿದೆ.
ಹೈದರಾಬಾದ್ ನಲ್ಲಿರುವ ಹೊರವಲಯದಲ್ಲಿ ನಾಗಾರ್ಜುನ ಅವರ ಫಾರಂ ಹೌಸ್ ಇದ್ದು, ಫಾರಂ ಹೌಸ್ ನ ಜಮೀನಿನಲ್ಲಿ ಬೆಳೆಗಳನ್ನು ನೋಡಿಕೊಂಡು ಬರುವಂತೆ ಕೆಲಸದಾಳುಗಳನ್ನು ನಾಗಾರ್ಜುನ ಅವರು ಕಳುಹಿಸಿದ್ದರು. ಈ ವೇಳೆ ಶವ ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ.
ಪಾಪಿರೆಡ್ಡಿಗುಡಾ ಗ್ರಾಮದಲ್ಲಿರುವ ಫಾರಂಹೌಸ್ ನ ಕೋಣೆಯೊಂದರಲ್ಲಿ ಶವ ಪತ್ತೆಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ತನಿಖೆ ಆರಂಭಿಸಿದ್ದಾರೆ.
ಕೇಶಂಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.