ಬಳೆ ತೊಟ್ಟವರು ಅಶಕ್ತರಲ್ಲ: ಕಿಚ್ಚಾ ಸುದೀಪ್ ಟ್ವೀಟ್ ಗೆ ವಿರೋಧ

ಪೈಲ್ವಾನ್ ಚಿತ್ರದ ಪೈರಸಿ ವಿರುದ್ಧ ನಟ ಕಿಚ್ಚಾ ಸುದೀಪ್ ಮಾಡಿದ್ದ ಟ್ವೀಟ್ ಇದೀಗ ಮತ್ತೆ ಸುದ್ದಿಗೆ ಗ್ರಾಸವಾಗಿದ್ದು, ಸುದೀಪ್ ಟ್ವೀಟ್ ಗೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.

Published: 21st September 2019 01:20 PM  |   Last Updated: 21st September 2019 01:20 PM   |  A+A-


Kiccha Sudeep

ಸಂಗ್ರಹ ಚಿತ್ರ

Posted By : Srinivasamurthy VN
Source : Online Desk

ಬೆಂಗಳೂರು: ಪೈಲ್ವಾನ್ ಚಿತ್ರದ ಪೈರಸಿ ವಿರುದ್ಧ ನಟ ಕಿಚ್ಚಾ ಸುದೀಪ್ ಮಾಡಿದ್ದ ಟ್ವೀಟ್ ಇದೀಗ ಮತ್ತೆ ಸುದ್ದಿಗೆ ಗ್ರಾಸವಾಗಿದ್ದು, ಸುದೀಪ್ ಟ್ವೀಟ್ ಗೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.

‘ಪೈಲ್ವಾನ್‌’ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆ ಕಂಡ ಬಳಿಕ ಅದನ್ನು ಕೆಲ ಕಿಡಿಗೇಡಿಗಳು ಸಾಮಾಜಿಕ ತಾಣ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದರು. ಅದರ ಲಿಂಕ್‌ ಅನ್ನು ಸಾಮಾಜಿಕ ತಾಣಗಳಲ್ಲಿ ಹಂಚಲಾಗಿತ್ತು. ಇದು ಉದ್ದೇಶಪೂರ್ವಕ ಕೃತ್ಯ, ಇದರ ಹಿಂದೆ ಪಟ್ಟಭದ್ರರಿದ್ದಾರೆ ಎಂದು ಸುದೀಪ್‌ ಅಭಿಮಾನಿಗಳು ಕಿಡಿಕಾರಿದ್ದರು. ಈ ವಿಚಾರವಾಗಿ ಸುದೀಪ್‌ ಮತ್ತು ದರ್ಶನ್‌ ಅಭಿಮಾನಿಗಳ ನಡುವೆ ಸಾಮಾಜಿಕ ತಾಣಗಳಲ್ಲಿ ವಾಕ್ಸಮರಗಳು ನಡೆದಿವೆ.  

ಇದೇ ವಿಚಾರವಾಗಿ ದರ್ಶನ್‌ ಕೂಡ ಟ್ವೀಟ್‌ ಮಾಡಿ ನನ್ನ ಅಭಿಮಾನಿಗಳನ್ನು ಕೆಣಕದಂತೆ ಎಚ್ಚರಿಕೆ ರವಾನಿಸಿದ್ದರು. ಈ ಮಧ್ಯೆ ಇದೇ ವಿಚಾರವಾಗಿ ಟ್ವೀಟ್‌ ಮಾಡಿರುವ ಸುದೀಪ್‌, ದರ್ಶನ್‌ ಅವರ ಧಾಟಿಯಲ್ಲೇ ಎಚ್ಚರಿಕೆ ರವಾನಿಸಿದ್ದರು. ‘ನಾನು ಹಾಗೂ ನನ್ನ ಸ್ನೇಹಿತರು, ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೆನುಗೊತಿಲ್ಲ. ನನ್ನ ಮೌನ, ನನ್ನ ತಾಳ್ಮೆ, ಎರಡನ್ನು ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳುಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳ ನೆಮ್ಮದಿಯ ನಿದ್ರೆ,ಇನ್ನು ಕೆಲವು ದಿನಗಳು ಮಾತ್ರ,’ ಎಂದು ಬರೆದುಕೊಂಡಿದ್ದರು.

ಈ ಟ್ವೀಟ್ ಇದೀಗ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದ್ದು, ಸುದೀಪ್ ಬಳೆ ತೊಟ್ಟವರನ್ನು ಅಶಕ್ತರು ಎಂಬಂತೆ ಭಾವಿಸಿದಂತಿದೆ. ಬಳೆ ತೊಡುವ ಹೆಣ್ಣುಮಕ್ಕಳು ಎಷ್ಟೋ ವಿಷಯಗಳಲ್ಲಿ ಗಂಡಸರಿಗಿಂತ ಬಲಶಾಲಿಗಳಾಗಿರುತ್ತಾರೆ ಅನ್ನೋ ಕಾಮನ್ ಸೆನ್ಸ್ ನಿಮಗಿದೆ ಎಂದು ಆಶಿಸುತ್ತೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp