50 ದಿನ ಪೂರೈಸಿದ ದರ್ಶನ್ ನಟನೆಯ 50ನೇ ಚಿತ್ರ ಕುರುಕ್ಷೇತ್ರ

ಆಗಸ್ಟ್ 9 ರಂದು ಬಿಡುಗಡೆಯಾದ ಮುನಿರತ್ನ ನಿರ್ಮಾಣದ ದರ್ಶನ್ ಅಭಿನಯದ ಕುರುಕ್ಷೇತ್ರ 50 ನೇ ದಿನ ಪೂರೈಸಿದ್ದು ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಸೃಷ್ಟಿಸಿದೆ.
ಕುರುಕ್ಷೇತ್ರ ಸಿನಿಮಾ ಸ್ಟಿಲ್
ಕುರುಕ್ಷೇತ್ರ ಸಿನಿಮಾ ಸ್ಟಿಲ್

ಆಗಸ್ಟ್ 9 ರಂದು ಬಿಡುಗಡೆಯಾದ ಮುನಿರತ್ನ ನಿರ್ಮಾಣದ ದರ್ಶನ್ ಅಭಿನಯದ ಕುರುಕ್ಷೇತ್ರ 50 ನೇ ದಿನ ಪೂರೈಸಿದ್ದು ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಸೃಷ್ಟಿಸಿದೆ.

ದರ್ಶನ್ 50ನೇ ಸಿನಿಮಾ ಇದಾಗಿದ್ದು ನಾಗಣ್ಣ ನಿರ್ದೇಶನದ ಈ ಸಿನಿಮಾ 2ಡಿ ಮತ್ತು 3ಡಿಯಲ್ಲಿ ರಿಲೀಸ್ ಆಗಿತ್ತು, ಕನ್ನಡ ಸಿನಿಮಾದಲ್ಲಿ ಅತಿ ಹೆಚ್ಚಿನ ಪ್ರಮಾಣದ ದಾಖಲೆ ಗಳಿಸಿತ್ತು, 28 ಸಿನಿಮಾಗಳ ಪೈಕಿ ಆಸ್ಕರ್  ಗೆ ಕುರುಕ್ಷೇತ್ರ ಸಿನಿಮಾವನ್ನು ಕೂಡ ನಾಮ ನಿರ್ದೇಶನ ಮಾಡಲಾಗಿದೆ.

ಎಲ್ಲಾ ವಯೋಮಾನದ ಪ್ರೇಕ್ಷಕರು ಥಿಯೇಟರ್ ಗೆ ಬಂದು ಸಿನಿಮಾ ನೋಡಿದ್ದರಿಂದ ಈ ಯಶಸ್ಸು ಸಿಕ್ಕಿದೆ, ಈ ಐತಿಹಾಸಿಕ ಸಿನಿಮಾ ಯಶಸ್ಸಿಗೆ ದರ್ಶನ್ ಅಭಿಮಾನಿಗಳು ಕಾರಣರಾಗಿದ್ದಾರೆ, ಈ ಗೌರವ ಮುನಿರತ್ನ ಅವರಿಗೆ ಸಲ್ಲಬೇಕು ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com