ಭಾಷೆಗಿಂತ ದೊಡ್ಡದು ಬೇರೊಂದು ಇಲ್ಲ: ನಟ ಗಣೇಶ್ 

ಗೀತಾದೊಂದಿಗೆ ಗೋಲ್ಡನ್ ಸ್ಟಾರ್  ಗಣೇಶ್ ಅವರ ಉತ್ಸಾಹ ಎರಡು ಪಟ್ಟು ಹೆಚ್ಚಾಗಿದೆ. ತಮ್ಮ ಚಿತ್ರ ಬಿಡುಗಡೆಯ ದಿನದಂದು ಎಂದಿಗೂ ಚಿತ್ರಮಂದಿರಕ್ಕೆ ಭೇಟಿ ನೀಡದ ಗಣೇಶ್  ಮೊದಲ ಬಾರಿಗೆ  ಈ ಚಿತ್ರದ ಮೊದಲ ಪ್ರದರ್ಶನವನ್ನು ನೋಡಲಿದ್ದಾರೆ.
ಗೀತಾ ಚಿತ್ರದ ತುಣುಕು
ಗೀತಾ ಚಿತ್ರದ ತುಣುಕು

ಗೀತಾದೊಂದಿಗೆ ಗೋಲ್ಡನ್ ಸ್ಟಾರ್  ಗಣೇಶ್ ಅವರ ಉತ್ಸಾಹ ಎರಡು ಪಟ್ಟು ಹೆಚ್ಚಾಗಿದೆ. ತಮ್ಮ ಚಿತ್ರ ಬಿಡುಗಡೆಯ ದಿನದಂದು ಎಂದಿಗೂ ಚಿತ್ರಮಂದಿರಕ್ಕೆ ಭೇಟಿ ನೀಡದ ಗಣೇಶ್  ಮೊದಲ ಬಾರಿಗೆ  ಈ ಚಿತ್ರದ ಮೊದಲ ಪ್ರದರ್ಶನವನ್ನು ನೋಡಲಿದ್ದಾರೆ.

ಪ್ರೇಕ್ಷಕರೊಂದಿಗೆ  ಚಿತ್ರವನ್ನು ಎಂಜಯ್ ಮಾಡಲಿದ್ದೇನೆ. ಅವರೊಂದಿಗೆ ಕುಳಿತು ಸಿನಿಮಾ ವೀಕ್ಷಿಸುವ ಮೂಲಕ ಪ್ರತಿಕ್ರಿಯೆಗೆ ಸಾಕ್ಷಿಯಾಗಲಿದ್ದೇನೆ ಎಂದು ಗಣೇಶ್ ಹೇಳಿದ್ದಾರೆ.

ಸಾಮಾನ್ಯವಾಗಿ ಎಲ್ಲ ಕಥೆಗಳನ್ನು ಎರಡ್ಮೂರು ಬಾರಿ ಮಾತ್ರ ಓದುತ್ತೀನಿ. ಆದರೆ, ಗೀತಾ ಚಿತ್ರ ಕಥೆಯನ್ನು 12-13 ಸಲ ಓದಿದ ನಂತರವಷ್ಟೇ ಫೈನಲ್ ಮಾಡಿದ್ದಾಗಿ ಹೇಳುವ ಗಣೇಶ್,  ಚಿತ್ರವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವಲ್ಲಿ ಹೊಸ ನಿರ್ದೇಶಕ ವಿಜಯ್ ನಾಗೇಂದ್ರ ನೆರವಾಗಿದ್ದಾರೆ ಎಂದಿದ್ದಾರೆ. 

ರೋಮ್ಯಾನ್ಸ್  ಅಂಶವಿಲ್ಲದೆ ತಮ್ಮ ಸಿನಿಮಾ ಪೂರ್ತಿಯಾಗಲ್ಲ ಎಂಬುದನ್ನು ಅರಿತಿರುವ ಗಣೇಶ್, ಪ್ರೇಕ್ಷಕರು ಕೂಡಾ ನನ್ನಿಂದ ಯಾವಾಗಲೂ ಇದನ್ನೇ ಬಯಸುತ್ತಾರೆ. ಗೋಕಾಕ್  ಚಳವಳಿಯ ಹಿನ್ನೆಲೆಯು ಇದೆ. ಬಾಕ್ಸ್ ಆಫೀಸ್ ದೃಷ್ಟಿಯಲ್ಲಿ ರೋಮ್ಯಾನ್ ಒಳ್ಳೇಯದು ಆದರೆ, ಅದಕ್ಕಾಗಿಯೇ ಅಂಟಿಕೂರುವುದಿಲ್ಲ ಎನ್ನುತ್ತಾರೆ. 

ಕನ್ನಡ ಭಾಷೆ ಕುರಿತು ಎಪಿಸೋಡ್ ಕೇಳಿದಾಗ ಯಾವಾಗಲೂ ಗೌರವ ಇದ್ದೇ ಇರುತ್ತದೆ. ಗೀತಾದಲ್ಲಿ ಭಾಷೆಯೊಂದಿಗೆ ರೋಮ್ಯಾಂಟಿಕ್ ಹಿರೋ, ಹಾಗೂ ಕೋಪದ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ  ಹೇಳಿದ್ದಾರೆ.

ಬೆಳ್ಳಿ ಪರದೆಯ ಮೇಲೆ ಗೋಕಾಕ್ ಆಂದೋಲನದಂತಹ ಪ್ರಸಂಗವನ್ನು ನೆನಪಿಸಿಕೊಳ್ಳುವುದು ಅದ್ಬುತ ಅನುಭವವಾಗುತ್ತದೆ. ಈ ಆಂದೋಲದನ ಕೆಲವು ವಿಡಿಯೋಗಳನ್ನು ನೋಡಿದ್ದೇನೆ. ಅಣ್ಣಾವ್ರ ರೇಡಿಯೋ ಸಂದರ್ಶವನ್ನು ಕೇಳಿದ್ದೇನೆ. ಅವರ ಸಿನಿಮಾದಲ್ಲಿನ ಸಾರವು ನನ್ನಗೆ ಗೊತ್ತಿದೆ. ಭಾಷೆಗಿಂತಲೂ ದೊಡ್ಡದು ಯಾವುದಿಲ್ಲ. ಮುಂಗಾರು ಮಳೆಯಿಂದಾಗಿಯೇ ಚಿತ್ರರಂಗದಲ್ಲಿ ಉಳಿಯಲು ಸಾಧ್ಯವಾಯಿತು. ನಾಡು, ನುಡಿಗೆ ಗೌರವ ನೀಡುವುದನ್ನು ಪದಗಳನ್ನು ವರ್ಣಿಸಲು ಸಾಧ್ಯವಿಲ್ಲ ಎಂದಿದ್ದಾರೆ

ಶಿಲ್ಪಾ ಗಣೇಶ್ ಅವರೊಂದಿಗೆ ಸಯ್ಯದ್ ಸಲಾಂ ಈ ಚಿತ್ರದ ನಿರ್ಮಾಣ ಮಾಡಿದ್ದು, ಅವರೊಂದಿಗೆ ಉತ್ತಮ ಚಿತ್ರ ಮಾಡಿದ್ದೇವೆ. 1981ರಲ್ಲಿ  ಶಂಕರ್ ನಾಗ್ ಅಭಿನಯದ ಗೀತಾ ಚಿತ್ರದ  ಶೀರ್ಷಿಕೆಯನ್ನು ತಮ್ಮ ಚಿತ್ರಕ್ಕೂ ಶೀರ್ಷಿಕೆಯನ್ನಾಗಿ ಇಡಲಾಗಿದ್ದು ಗೀತಾ ಸಂಗೀತ  ಮೂಲ ಟ್ರ್ಯಾಕ್ ನ್ನು ಬಳಸಿರುವುದಾಗಿ ತಿಳಿಸಿದರು. 

ಗೀತಾ ರಾಜ್ಯಾದ್ಯಂತ ಸೆಪ್ಟೆಂಬರ್ 27 ರಂದು ತೆರೆಗೆ ಬರಲಿದ್ದು, ಶಾನ್ವಿ ಶ್ರೀವಾತ್ಸವ್  ಸುಧಾರಾಣಿ ಮತ್ತಿತರು ಅಭಿನಯಿಸಿದ್ದಾರೆ
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com