ಬೈಕ್ ಮೇಲೆ 'ಕಿರಿಕ್' ನಟಿ ಸಂಯುಕ್ತ ಹೆಗ್ಡೆ ಲಿಪ್ ಲಾಕ್, ವಿಡಿಯೋ ವೈರಲ್!

ಕಿಸ್ಸಿಂಗ್ ಸೀನ್ ಇದೆ ಅಂತ ಕನ್ನಡದ ಚಿತ್ರಕ್ಕೆ ಮುಖ ತಿರುಗಿಸಿದ್ದ ಕಿರಿಕ್ ಪಾರ್ಟಿ ನಟಿ ಸಂಯುಕ್ತ ಹೆಗ್ಡೆ ಇದೀಗ ತಮಿಳು ಚಿತ್ರವೊಂದರಲ್ಲಿ ಲಿಪ್ ಲಾಕ್ ಮಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
ಸಂಯುಕ್ತ ಹೆಗ್ಡೆ
ಸಂಯುಕ್ತ ಹೆಗ್ಡೆ

ಕಿಸ್ಸಿಂಗ್ ಸೀನ್ ಇದೆ ಅಂತ ಕನ್ನಡದ ಚಿತ್ರಕ್ಕೆ ಮುಖ ತಿರುಗಿಸಿದ್ದ ಕಿರಿಕ್ ಪಾರ್ಟಿ ನಟಿ ಸಂಯುಕ್ತ ಹೆಗ್ಡೆ ಇದೀಗ ತಮಿಳು ಚಿತ್ರವೊಂದರಲ್ಲಿ ಲಿಪ್ ಲಾಕ್ ಮಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

ತಮಿಳಿನಲ್ಲಿ ನಿರ್ಮಾಣವಾಗಿರುವ ಪಪ್ಪಿ ಚಿತ್ರದಲ್ಲಿ ಸಂಯುಕ್ತ ಹೆಗ್ಡೆ ನಟಿಸಿದ್ದಾರೆ. ಈ ಚಿತ್ರದ ಕಿಸ್ಸಿಂಗ್ ಸೀನ್ ಇದೀಗ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಚಿತ್ರದಲ್ಲಿ ಒಂದಷ್ಟು ಹಸಿಬಿಸಿ ದೃಶ್ಯಗಳಲ್ಲೂ ಸಂಯುಕ್ತ ಕಾಣಿಸಿಕೊಂಡಿದ್ದು ಕಾಲಿವುಡ್ ನಲ್ಲಿ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. 

ಪಪ್ಪಿ ಚಿತ್ರದಲ್ಲಿ ಸಂಯುಕ್ತಾ ಹೆಗ್ಡೆ ಮೈ ಚಳಿ ಬಿಟ್ಟು ಅಭಿನಯಿಸಿದ್ದು ಹೀರೋ ಜೊತೆ ಬೈಕ್ ನಲ್ಲಿ ಹೋಗುವಾಗ ತುಟಿಗೆ ಮುತ್ತಿಕ್ಕುವ ದೃಶ್ಯಗಳು ವೈರಲ್ ಆಗಿವೆ. ಚಿತ್ರಕ್ಕೆ ಮೊರಟ್ಟು ಸಿಂಗಲ್ ಎಂಬುವರು ಆ್ಯಕ್ಷನ್ ಕಟ್ ಹೇಳಿದ್ದಾರೆ. 

ಈ ಹಿಂದೆ ಕನ್ನಡದ ಮೈ ನೇಮ್ ಈಸ್ ರಾಜ್ ಚಿತ್ರದಲ್ಲಿ ಸಂಯುಕ್ತ ಅಭಿನಯಿಸಬೇಕಿತಂತೆ. ಆದರೆ ಚಿತ್ರದಲ್ಲಿ ಲಿಪ್ ಲಾಕ್ ದೃಶ್ಯಗಳು ಇವೆ ಅಂತ ಆ ಚಿತ್ರವನ್ನು ರಿಜೆಕ್ಟ್ ಮಾಡಿದ್ದರು ಅಂತ ನಟ ರಾಜ್ ಹೇಳಿದ್ದಾರೆ.

ಇದೀಗ ತಮಿಳಿನಲ್ಲಿ ಲಿಪ್ ಲಾಕ್ ಮಾಡಿರುವುದು ಸಂಯುಕ್ತ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com