ನರಸಿಂಹಾ ರೆಡ್ಡಿ ಕುಟುಂಬಸ್ಥರಿಗೆ ಶಾಕ್ ಕೊಟ್ಟ ಸೆನ್ಸಾರ್ ಮಂಡಳಿ, ಅ.2ಕ್ಕೆ 'ಸೈರಾ' ಬಿಡುಗಡೆ

ಉಯ್ಯಾಲವಾಡ ನರಸಿಂಹಾ ರೆಡ್ಡಿ ಕುಟುಂಬಸ್ಥರಿಗೆ ಸೆನ್ಸಾರ್ ಮಂಡಳಿ ಶಾಕ್ ನೀಡಿದ್ದು, ಚಿತ್ರಕ್ಕೆ ಯುಎ ಪ್ರಮಾಣ ಪತ್ರ ನೀಡುವ ಮೂಲಕ ಚಿತ್ರ ಬಿಡುಗಡೆಗೆ ಅವಕಾಶ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸೂಕ್ತ ಪರಿಹಾರ ನೀಡದೇ ಚಿತ್ರ ನಿರ್ಮಾಣ ಆರೋಪ, ಉಯ್ಯಾಲವಾಡ ಕುಟುಂಬಸ್ಥರಿಂದ ನಿರಂತರ ಪ್ರತಿಭಟನೆ

ಹೈದರಾಬಾದ್: ಉಯ್ಯಾಲವಾಡ ನರಸಿಂಹಾ ರೆಡ್ಡಿ ಕುಟುಂಬಸ್ಥರಿಗೆ ಸೆನ್ಸಾರ್ ಮಂಡಳಿ ಶಾಕ್ ನೀಡಿದ್ದು, ಚಿತ್ರಕ್ಕೆ ಯುಎ ಪ್ರಮಾಣ ಪತ್ರ ನೀಡುವ ಮೂಲಕ ಚಿತ್ರ ಬಿಡುಗಡೆಗೆ ಅವಕಾಶ ನೀಡಿದೆ.

ಹೌದು.. ತೆಲುಗಿನ ಬಹು ನಿರೀಕ್ಷಿತ ನಟ ಚಿರಂಜೀವಿ ಅಭಿನಯದ ಬಹುಭಾಷಾ ಚಿತ್ರ ಸೈರಾ ನರಸಿಂಹಾ ರೆಡ್ಡಿ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯುಎ ಪ್ರಮಾಣ ಪತ್ರ ನೀಡಿದೆ. ಆ ಮೂಲಕ ಚಿತ್ರ ಬಿಡುಗಡೆಗಿದ್ದ ಎಲ್ಲ ಅಡ್ಡಿಗಳು ನಿವಾರಣೆಯಾದಂತಾಗಿದ್ದು, ಇದೇ ಅಕ್ಟೋಬರ್ 2ರಂದು ಚಿತ್ರ ಬಿಡುಗಡೆಯಾಗಲಿದೆ.

ಈ ಕುರಿತಂತೆ ಚಿತ್ರದ ನಿರ್ಮಾಪಕ ರಾಮ್ ಚರಣ್ ಅವರು ಟ್ವೀಟ್ ಮಾಡಿದ್ದು, ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯುಎ ಪ್ರಮಾಣ ಪತ್ರ ನೀಡಿದೆ. ಚಿತ್ರ ಅಕ್ಟೋಬರ್ 2ರಂದು ತೆರೆ ಕಾಣಲಿದೆ ಎಂದು ಟ್ವಿಟರ್ ನಲ್ಲಿ ಘೋಷಣೆ ಮಾಡಿದ್ದಾರೆ.

ಇನ್ನು ಈ ಬಿಗ್ ಬಜೆಟ್ ಚಿತ್ರ ದೇಶದ ಮೊಟ್ಟ ಮೊದಲ ಸ್ವತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹಾ ರೆಡ್ಡಿ ಅವರ ಜೀವನಚರಿತ್ರೆಯಾಗಿದ್ದು, ನಟ ಚಿರಂಜೀವಿ ನರಸಿಂಹಾ ರೆಡ್ಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಅವರ ಪುತ್ರ ರಾಮ್ ಚರಣ್ ಅವರು ಕೊನಿಡೆಲಾ ನಿರ್ಮಾಣ ಸಂಸ್ಥೆಯಡಿಯಲ್ಲಿ ನಿರ್ಮಾಣ ಮಾಡಿದ್ದು, ಭಾರಿ ಬಜೆಟ್ ಚಿತ್ರವಾಗಿದೆ. ಇದೇ ಕಾರಣಕ್ಕೆ ಸೈರಾ ಭಾರಿ ಸುದ್ದಿಗೆ ಗ್ರಾಸವಾಗಿತ್ತು. ಇದರ ನಡುವೆ ಉಯ್ಯಾಲವಾಡ ಕುಟುಂಬಸ್ಥರು ತಮಗೆ ಮೋಸವಾಗಿದೆ. ಹೀಗಾಗಿ ಚಿತ್ರ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಹೇಳಿ ಪ್ರತಿಭಟನೆ ನಡೆಸಿದ್ದಾರೆ.

ಚಿತ್ರದ ನಿರ್ಮಾಪಕರು ತಮಗೆ ಪರಿಹಾರ ನೀಡುವುದಾಗಿ ನಂಬಿಸಿ ಸಹಿ ಪಡೆದು ಈಗ ಯಾವುದೇ ರೀತಿಯ ಪರಿಹಾರ ನೀಡದೇ ಚಿತ್ರ ನಿರ್ಮಾಣ ಮಾಡಿದ್ದಾರೆ. ಹೀಗಾಗಿ ತಮಗೆ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿ ಒಟ್ಟು 22 ಕುಟುಂಬಗಳು ಸೈರಾ ಚಿತ್ರದ ವಿರುದ್ಧ ದಾವೆ ಹೂಡಿವೆ. ಈ ಪ್ರಕರಣಗಳ ವಿಚಾರಣೆ ಪೂರ್ಣಗೊಳ್ಳುವ ಮುನ್ನವೇ ಸೆನ್ಸಾರ್ ಮಂಡಳಿ ಚಿತ್ರ ಪ್ರಮಾಣ ಪತ್ರ ನೀಡಿ ಕುಟುಂಬಸ್ಥರಿಗೆ ಶಾಕ್ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com