ಆನಂದ್ ಆಡಿಯೊ ತೆಕ್ಕೆಗೆ 'ರಾಬರ್ಟ್' ಮ್ಯೂಸಿಕ್ ರೈಟ್ಸ್ 

ದರ್ಶನ್ ನಟನೆಯ ತರುಣ್ ಸುಧೀರ್ ನಿರ್ದೇಶನದ ಬಹು ನಿರೀಕ್ಷೆಯ ಚಿತ್ರ ರಾಬರ್ಟ್. ಚಿತ್ರಕ್ಕೆ ಸಿಕ್ಕಿರುವ ಭಾರೀ ಪ್ರಚಾರದಿಂದ ಅದರ ಮ್ಯೂಸಿಕ್ ಆಲ್ಬಂಗೆ ಸಾಕಷ್ಟು ಬೇಡಿಕೆ ಸಿಕ್ಕಿದೆ.ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಚಿತ್ರದ ಪೋಸ್ಟರ್

ಮ್ಯೂಸಿಕ್ ಆಲ್ಬಂನ ಬಿಡ್ಡಿಂಗ್ ಪ್ರಕ್ರಿಯೆ ಮುಗಿದಿದ್ದು ಆನಂದ್ ಆಡಿಯೊಗೆ ಹಕ್ಕು ದೊರೆತಿದೆ.ಎಷ್ಟಕ್ಕೆ ಮಾರಟವಾಗಿದೆ ಎಂದು ನಿರ್ಮಾಣ ಸಂಸ್ಥೆ ಮತ್ತು ಆಡಿಯೊ ಕಂಪೆನಿ ಬಹಿರಂಗಪಡಿಸದಿದ್ದರೂ ಕೂಡ ಲಕ್ಷಾಂತರ ರೂಪಾಯಿಗೆ ಮಾರಾಟವಾಗಿದೆ ಎಂದು ತಿಳಿದುಬಂದಿದೆ. 

ರಾಬರ್ಟ್ ಚಿತ್ರದ ಶೂಟಿಂಗ್ ಈಗಾಗಲೇ ಅರ್ಧಭಾಗ ಮುಗಿದಿದೆ. ಮುಂದಿನ ಶೂಟಿಂಗ್ ಶೆಡ್ಯೂಲ್ ಅಕ್ಟೋಬರ್ 2ರಂದು ಆರಂಭವಾಗಲಿದೆ.  ಚಿತ್ರದ ನಾಯಕ ದರ್ಶನ್ ಗೆ ಜೊತೆಯಾಗಿ ಬಾಲಿವುಡ್ ನಲ್ಲಿ ನಟಿಸಿ ಬಂದಿರುವ ಭದ್ರಾವತಿ ಮೂಲದ ಹುಡುಗಿ ಆಶಾ ಭಟ್ ನಟಿಸುತ್ತಿದ್ದಾರೆ. ಚಿತ್ರದಲ್ಲಿ ವಿನೋದ್ ಪ್ರಭಾಕರ್, ಜಗಪತಿ ಬಾಬು ವಿಲನ್ ಗಳಾಗಿದ್ದಾರೆ. 

ರಾಬರ್ಟ್ ಗೆ ಚಂದ್ರಮೌಳಿ ಮತ್ತು ರಾಜಶೇಖರ್ ಕೆ ಎಲ್ ಸಂಭಾಷಣೆ ಬರೆದಿದ್ದು, ಕೆ ಎಂ ಪ್ರಕಾಶ್ ಸಂಕಲನ, ಸುಧಾಕರ್ ಜೈನ್ ಕ್ಯಾಮರಾ ಕೈಚಳಕವಿದೆ. ಕಲಾ ವಿಭಾಗದ ಉಸ್ತುವಾರಿ ಮೋಹನ್ ಬಿ ಕೆರೆ ವಹಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com