'ಪೈಲ್ವಾನ್' ಪೈರಸಿ ಹಿಂದಿರೋದು 'ಆತ'ನಲ್ಲ, 'ಆಕೆ'? ಅಭಿಮಾನಿ ಕೈಯಲ್ಲಿ ಲಿಂಕ್ ಶೇರ್ ಮಾಡಿಸಿದ್ದು ಹೇಗೆ ಗೊತ್ತ?

ಪೈರಸಿ ಭೂತ ಚಿತ್ರರಂಗವನ್ನು ಬೆಂಬಿಡದೆ ಕಾಡುತ್ತಿದೆ  ಇತ್ತೀಚೆಗಷ್ಟೆ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಪೈರಸಿಯಾಗಿ ದೊಡ್ಡ ಸುದ್ದಿಯಾಗಿತ್ತು, ಅಲ್ಲದೆ ಸ್ಟಾರ್ ನಟರ ನಡುವಣ ವಾಗ್ಯುದ್ಧಕ್ಕೂ ಕಾರಣವಾಗಿತ್ತು.

Published: 28th September 2019 06:09 PM  |   Last Updated: 28th September 2019 06:35 PM   |  A+A-


Pailwan

ಪೈಲ್ವಾನ್

Posted By : Vishwanath S
Source : UNI

ಬೆಂಗಳೂರು: ಪೈರಸಿ ಭೂತ ಚಿತ್ರರಂಗವನ್ನು ಬೆಂಬಿಡದೆ ಕಾಡುತ್ತಿದೆ  ಇತ್ತೀಚೆಗಷ್ಟೆ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಪೈರಸಿಯಾಗಿ ದೊಡ್ಡ ಸುದ್ದಿಯಾಗಿತ್ತು, ಅಲ್ಲದೆ ಸ್ಟಾರ್ ನಟರ ನಡುವಣ ವಾಗ್ಯುದ್ಧಕ್ಕೂ ಕಾರಣವಾಗಿತ್ತು. ಪೈರಸಿ ಕಾಟಕ್ಕೊಂದು ಫುಲ್ ಸ್ಟಾಪ್ ಹಾಕಲೇಬೇಕೆಂದು ಹೊರಟ ಪೊಲೀಸರಿಗೆ ಓರ್ವ ಆರೋಪಿ ಸೆರೆ ಸಿಕ್ಕಿದ್ದ ಅನ್ನೋದು ಎಲ್ಲರಿಗೂ ಗೊತ್ತಿದೆ.

100%   

ಆದರೆ, ಈಗ ಕೇಳಿಬರುತ್ತಿರುವ ಇನ್ನೊಂದು ಸುದ್ದಿ ಏನೆಂದರೆ, ಪೈಲ್ವಾನ್ ಪೈರಸಿಯ ಹಿಂದೆ ಇರೋದು ’ಆತ’ನಲ್ಲ, ’ಆಕೆ’ ಎಂಬ ವಿಷಯ. ಹೀಗೆಂದು ಸ್ವತಃ ಆರೋಪಿಯೇ ಪೊಲೀಸರ ಎದುರು ಬಾಯಿಬಿಟ್ಟಿದ್ದಾನಂತೆ. ತಾನು ಸುದೀಪ್ ಅಭಿಮಾನಿಯಾಗಿದ್ದು, ಅವರಿಗಾಗಿಯೇ ಪೈರಸಿ ಮಾಡಿದ್ದಾಗಿ ಒಪ್ಪಿಕೊಂಡೆ.  ಆದರೆ ನಿಜವಾಗಿ ಈ ಕೃತ್ಯದ ಹಿಂದಿರುವುದು ಓರ್ವ ಹೆಣ್ಣು ಎಂದು ತಿಳಿಸಿದ್ದಾನಂತೆ.

100%

ನಾನು ಡಿ-ಬಾಸ್ ಫ್ಯಾನ್ ಹಾಗಾಗಿ ಕಿಚ್ಚ ಸುದೀಪ್ ಸಿನಿಮಾ ಪೈರಸಿ ಮಾಡಿದ್ದೆ ಅಂತ ಒಪ್ಪಿಕೊಂಡಿದ್ದ. ಆದರೆ, ಇದರ ಹಿಂದೆ ನಾನಲ್ಲ ಓರ್ವ ಮಹಿಳೆ ಇದ್ದಾಳೆ ಆಕೆಯೇ ಲಿಂಕ್ ಶೇರ್ ಮಾಡಲು ಹೇಳಿದ್ದು. ಆಕೆಯೇ, ಕ್ಲಿಯರ್ ಪ್ರಿಂಟ್ ಸಿನಿಮಾ ಕೊಟ್ಟಿದ್ದು ಅನ್ನೋ ಅಂಶ ಬಾಯ್ಬಿಟ್ಟಿದ್ದಾನಂತೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ರೆ ಗೊತ್ತಾಗುತ್ತೆ ಅನ್ನೋ ಕಾರಣಕ್ಕೆ, ಸದ್ಯ ಟೆಲಿಗ್ರಾಂ ಆಪ್ ಮೂಲಕ ಆಕೆ ಲಿಂಕ್ ಶೇರ್ ಮಾಡಿದ್ದಳಂತೆ.

100%

ಹೆಸರಿಲ್ಲದೆ ಫೋಟೋ ಇಲ್ಲದೆ ಆಪ್ ಬಳಸಿ ಹೀಗೆ ಮಾಡಿದ್ದಾಳೆ ಎಂದು ಪೊಲೀಸರ ಮುಂದೆ ರಾಕೇಶ್ ಹೇಳಿಕೆ ಕೊಟ್ಟಿದ್ದಾನೆ ಎನ್ನಲಾಗಿದೆ. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರುವ ಪೊಲೀಸ್ ಇಲಾಖೆ ಪೈರಸಿ ಹಿಂದೆ ಅದೆಷ್ಟು ಮಂದಿಯ ಕೈವಾಡವಿದೆ ಎಂಬುದನ್ನು ಪತ್ತೆ ಮಾಡಲು ಮುಂದಾಗಿದೆ.

Stay up to date on all the latest ಸಿನಿಮಾ ಸುದ್ದಿ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp