ಶಿವರಾಜ್ ಕುಮಾರ್ 'ಆಯುಷ್ಮಾನ್ ಭವ' ಚಿತ್ರದಲ್ಲಿ ಒಂದು ಗಂಟೆಗೂ ಹೆಚ್ಚು ವಿಷುವಲ್ ಎಫೆಕ್ಟ್ಸ್

ಪಿ ವಾಸು ನಿರ್ದೇಶನದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಆಯುಷ್ಮಾನ್ ಭವ ಚಿತ್ರದಲ್ಲಿ ಒಂದು ಗಂಟೆಗೂ ಅಧಿಕ ಸಮಯದ ವಿಷುವಲ್ ಎಫೆಕ್ಟ್ ಗಳಿರುತ್ತದೆ.  
ಚಿತ್ರದ ಸ್ಟಿಲ್
ಚಿತ್ರದ ಸ್ಟಿಲ್

ಪಿ ವಾಸು ನಿರ್ದೇಶನದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಆಯುಷ್ಮಾನ್ ಭವ ಚಿತ್ರದಲ್ಲಿ ಒಂದು ಗಂಟೆಗೂ ಅಧಿಕ ಸಮಯದ ವಿಷುವಲ್ ಎಫೆಕ್ಟ್ ಗಳಿರುತ್ತದೆ. 


ಮ್ಯೂಸಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವನ್ನು ದ್ವಾರಕೀಶ್ ಚಿತ್ರ ಬ್ಯಾನರ್ ನಡಿ ನಿರ್ಮಿಸಲಾಗುತ್ತಿದ್ದು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ಗ್ರಾಫಿಕ್ಸ್ ಗಳನ್ನು ಹೆಣೆಯಲಾಗುತ್ತಿದೆಯಂತೆ. ಚಿತ್ರದ ವಿಷುವಲ್ ಎಫೆಕ್ಟ್ ವೊಂದಕ್ಕೇ ಸುಮಾರು 2 ಕೋಟಿ ಖರ್ಚಾಗಲಿದೆ, ಅದನ್ನು ಚೆನ್ನೈ, ಹೈದರಾಬಾದ್ ಮತ್ತು ಮುಂಬೈಯಲ್ಲಿ ಮಾಡಿಸಲಾಗುತ್ತಿದೆ. 


ನವೆಂಬರ್ 1 ಕನ್ನಡ ರಾಜ್ಯೋತ್ಸವ ದಿನದಂದು ಚಿತ್ರ ತೆರೆಗೆ ತರಲು ಚಿತ್ರತಂಡ ಗುರಿಯಿಟ್ಟುಕೊಂಡಿದ್ದು ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸದಲ್ಲಿದೆ. ಸಿನಿಮಾ ನೋಡುವ ಪ್ರೇಕ್ಷಕರಿಗೆ ಕಣ್ಣಿಗೆ ಹಬ್ಬವನ್ನುಂಟುಮಾಡಲಿದೆ, ಚಿತ್ರದ ಸೆಕೆಂಡ್ ಹಾಫ್ ನಲ್ಲಿ ದೃಶ್ಯಗಳು ಇನ್ನಷ್ಟು ಚೆನ್ನಾಗಿ ಮೂಡಿಬರಲಿದೆ ಎಂದು ನಿರ್ಮಾಪಕ ಯೋಗಿ ದ್ವಾರಕೀಶ್ ಹೇಳಿದ್ದಾರೆ.


42 ವರ್ಷಗಳ ನಂತರ ದ್ವಾರಕೀಶ್ ಮತ್ತು ರಾಜ್ ಕುಮಾರ್ ಕುಟುಂಬ ಸಮಾಗಮಗೊಳ್ಳುತ್ತಿದೆ. ಶಿವಲಿಂಗ ನಂತರ ಶಿವರಾಜ್ ಕುಮಾರ್ ಗೆ ಎರಡನೇ ಬಾರಿ ವಾಸು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇಲ್ಲಿ ರಚಿತಾ ರಾಮ್ ನಾಯಕಿ. ಸಂಗೀತ ನಿರ್ದೇಶಕ ಗುರುಕಿರಣ್ ಗೆ ಇದು 100ನೇ ಚಿತ್ರ. ನಿಧಿ ಸುಬ್ಬಯ್ಯ, ಅನಂತ್ ನಾಗ್, ಸುಹಾಸಿನಿ ಮಣಿರತ್ನಂ, ರವಿ ಶಂಕರ್, ಶಿವಾಜಿ ಪ್ರಭು, ರಂಗಾಯಣ ರಘು ಕೂಡ ಚಿತ್ರದಲ್ಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com