ಕ್ವಾರಂಟೈನ್ ನನಗೇನು ಹೊಸದಲ್ಲ: ಸಂಗೀತ ಸಂಯೋಜಕ ಚರಣ್ ರಾಜ್

ಸಂಗೀತ ಸಂಯೋಜಕ ಚರಣ್ ರಾಜ್ ಅವರ ಪ್ರಕಾರ ಒಂದೊಮ್ಮೆ ನೀವು  ಸ್ಟುಡಿಯೊದೊಳಗೆ ನಾಲ್ಕು ಗೋಡೆಗಳ ನಡುವೆ ಲಾಕ್ ಆದಾಗ ಒಂದು ಅತ್ಯುತ್ತಮ ಔಟ್ ಪುಟ್ ನೊಡನೆ ಹೊರಬರುವ ಎಲ್ಲಾ ಸಾಧ್ಯತೆ ಇದೆ. . "ನೀವು ನಾಲ್ಕು ಗೋಡೆಗಳೊಳಗೆ ಲಾಕ್ ಆಗಿರುವಾಗ ಉತ್ತಮ ಸಂಗೀತ ನಿಮ್ಮಿಂದ ಸಂಯೋಜಿಸಲ್ಪಡುತ್ತದೆ. ನಾನೆಂದಿಗೂ ಸ್ಟುಡಿಯೋದ ಒಳಗಿರುವ ಕಾರಣ ಕ್ವಾರಂಟೈನ್ ಬಗೆಗೆ ನನಗೇನೂ ಹೊಸತನ ಕಾಣಿಸು
ನಾನು ಕೂಡ ಕ್ವಾರಂಟೈನ್ ನಲ್ಲಿದ್ದೇನೆ: ಸಂಗೀತ ಸಂಯೋಜಕ ಚರಣ್ ರಾಜ್
ನಾನು ಕೂಡ ಕ್ವಾರಂಟೈನ್ ನಲ್ಲಿದ್ದೇನೆ: ಸಂಗೀತ ಸಂಯೋಜಕ ಚರಣ್ ರಾಜ್

ಸಂಗೀತ ಸಂಯೋಜಕ ಚರಣ್ ರಾಜ್ ಅವರ ಪ್ರಕಾರ ಒಂದೊಮ್ಮೆ ನೀವು  ಸ್ಟುಡಿಯೊದೊಳಗೆ ನಾಲ್ಕು ಗೋಡೆಗಳ ನಡುವೆ ಲಾಕ್ ಆದಾಗ ಒಂದು ಅತ್ಯುತ್ತಮ ಔಟ್ ಪುಟ್ ನೊಡನೆ ಹೊರಬರುವ ಎಲ್ಲಾ ಸಾಧ್ಯತೆ ಇದೆ. "ನೀವು ನಾಲ್ಕು ಗೋಡೆಗಳೊಳಗೆ ಲಾಕ್ ಆಗಿರುವಾಗ ಉತ್ತಮ ಸಂಗೀತ ನಿಮ್ಮಿಂದ ಸಂಯೋಜಿಸಲ್ಪಡುತ್ತದೆ. ನಾನೆಂದಿಗೂ ಸ್ಟುಡಿಯೋದ ಒಳಗಿರುವ ಕಾರಣ ಕ್ವಾರಂಟೈನ್ ಬಗೆಗೆ ನನಗೇನೂ ಹೊಸತನ ಕಾಣಿಸುತ್ತಿ;ಲ್ಲ"

ದುನಿಯಾ ವಿಜಯ್ ಅವರ "ಸಲಗ" ಚಿತ್ರಕ್ಕೆ ಉತ್ತಮ ಸಂಗೀತ ನೀಡುವುದು ಚರಣ್ ರಾಜ್ ಅವರ ಮೊದಲ ಆದ್ಯತೆಯಾಗಿದೆ.

"ಸಾಮಾಜಿಕ ಅಂತರವು ಒಂದು ಅಗತ್ಯವಾಗಿದ್ದು ಸದ್ಯ ನಮ್ಮ ಸ್ಟುಡಿಯೊಗೆ ಯಾರೂ ಬರುತ್ತಿಲ್ಲ. ನನ್ನ  ವ್ಯಾಪ್ತಿಯಲ್ಲಿ  ಮಾಡಬಹುದಾದ ಎಲ್ಲವನ್ನು ನಾನು ಮಾಡುತ್ತಿದ್ದೇನೆ. ಲಾಕ್‌ಡೌನ್ ಸ್ಟುಡಿಯೋಗಳನ್ನು ಮುಚ್ಚಿದೆ ಮತ್ತು ಅದು ಯಾವುದೇ ಸಂಗೀತಗಾರನನ್ನು ರೆಕಾರ್ಡ್ ಮಾಡಲು ಅನುಮತಿಸುವುದಿಲ್ಲ, ಮತ್ತು ನಾನು ಸಹ ಅದಕ್ಕೆ ಹೊರತಲ್ಲ.ಲೈವ್ ರೆಕಾರ್ಡಿಂಗ್ ಮಾಡಲು. ನಾನು ಸಂಯೋಜನೆಗಳನ್ನು ಸಿದ್ಧಪಡಿಸುತ್ತಿದ್ದೇನೆ. ಸಲಗ ಚಿತ್ರಕ್ಕಾಗಿ  ನಾವು ಈಗಾಗಲೇ ಲೈವ್ ರೆಕಾರ್ಡಿಂಗ್ ಅನ್ನು ಪೂರ್ಣಗೊಳಿಸಿದ್ದರಿಂದ, ನಾವು ಚಿತ್ರದ ದ್ವಿತೀಯಾರ್ಧದಲ್ಲಿ ಸಂಗೀತ ದಲ್ಲಿನ ಕೆಲ ತಿದ್ದುಪಡಿಗಳನ್ನು ಮಾಡುತ್ತಿದ್ದೇನೆ.  ಉತ್ತಮವಾದ ಶ್ರುತಿ ಹೊರಹೊಮ್ಮಿಸುವಿಕೆಯತ್ತ ಗಮನ ಹರಿಸುತ್ತಿದ್ದೇನೆ. "  ಅವರು ಹೇಳುತ್ತಾರೆ.

ಕೆಪಿ ಶ್ರೀಕಾಂತ್ ಅವರ ಮೊದಲಹಿಟ್ ಚಿತ್ರ "ಟಗರು" ಬಳಿಕ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರ ಇದಾಗಲಿದೆ. ಸಂಜಾನಾ ಆನಂದ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು ಸಲಗದಲ್ಲಿ ಧನಂಜಯ್ ಪೋಲೀಸ್ ಪಾತ್ರಧಾರಿಯಾಗಿದ್ದಾರೆ.

ಏತನ್ಮಧ್ಯೆ, ಪುನೀತ್ ರಾಜ್‌ಕುಮಾರ್ ಅವರ ಜೇಮ್ಸ್ ಮತ್ತು ಶಿವರಾಜ್‌ಕುಮಾರ್ ಅವರ ಆರ್‌ಡಿಎಕ್ಸ್‌ಗಾಗಿ  ಸಂಗೀತ ಸಂಯೋಜನೆ ಮಾಡಲು  ಚರಣ್ ರಾಜ್ ಈ ಸಮಯವನ್ನು ಬಳಸುತ್ತಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com