ಕೋವಿಡ್ ಮಹಾಮಾರಿ: ಬಡವರ, ದೀನರ ನೆರವಿಗೆ ನಿಂತ ಸ್ಯಾಂಡಲ್ ವುಡ್ ಸ್ಟಾರ್ ಅಭಿಮಾನಿ ಬಳಗ

ಕೊರೋನಾ ಮಹಾಮಾರಿ ಇಡೀ ಜಗತ್ತನ್ನು ಆವರಿಸಿರುವ ಈ ಸಮಯದಲ್ಲಿ ಸ್ಯಾಂಡಲ್ ವುಡ್ ನಟರ ಅಭಿಮಾನಿಗಳು ದೀನದಲಿತರಿಗೆ ಸಹಾಯ ಮಾಡಲು ತಾವು ಒಗ್ಗಟ್ಟಾಗಿ ಮುಂದೆ ಬಂದಿದ್ದಾರೆ.
ಕೋವಿಡ್ ಮಹಾಮಾರಿ: ಬಡವರ, ದೀನರ ನೆರವಿಗೆ ನಿಂತ ಸ್ಯಾಂಡಲ್ ವುಡ್ ಸ್ಟಾರ್ ಅಭಿಮಾನಿ ಬಳಗ

ಕೊರೋನಾ ಮಹಾಮಾರಿ ಇಡೀ ಜಗತ್ತನ್ನು ಆವರಿಸಿರುವ ಈ ಸಮಯದಲ್ಲಿ ಸ್ಯಾಂಡಲ್ ವುಡ್ ನಟರ ಅಭಿಮಾನಿಗಳು ದೀನದಲಿತರಿಗೆ ಸಹಾಯ ಮಾಡಲು ತಾವು ಒಗ್ಗಟ್ಟಾಗಿ ಮುಂದೆ ಬಂದಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಯಾಗಿರುವ ಐವತ್ತು ವರ್ಷದ ಗೋವಿಂದರಾಜು ತನ್ನ ನೆಚ್ಚಿನ ನಟನಿಂದ ಸ್ಫೂರ್ತಿ ಪಡೆದು  ಕೆಲಸ ಕಳೆದುಕೊಂಡ ದೈನಂದಿನ ಕೂಲಿ ಕಾರ್ಮಿಕರಿಗೆ ಆಹಾರವನ್ನು ವಿತರಿಸುತ್ತಿದ್ದಾರೆ.

"ದರ್ಶನ್ ಯಾವಾಗಲೂ ತನ್ನ ಅಭಿಮಾನಿಗಳಿಗೆ ತನಗಾಗಿ ಏನಾದರೂ ವಿಶೇಷವಾದದ್ದನ್ನು ಮಾಡಲು ಬಯಸಿದರೆ, ಅವರು ಮಾಡಬೇಕಾಗಿರುವುದು ನಿರ್ಗತಿಕರಿಗೆ ಸಹಾಯವಾಗಿರುತ್ತದೆ ಎಂದು ಎಂದಿಗೂ ಹೇಳುತ್ತಾ ಬಂದಿದ್ದಾರೆ. ಕೊರೋನಾ ಬಿಕ್ಕಟ್ಟಿನ ಈ ಸಮಯದಲ್ಲಿ ನಾವು ಅದನ್ನೇ ಮಾಡುತ್ತಿದ್ದೇವೆ" ಬೆಂಗಳೂರಿನ ಉದ್ಯಮಿ ಡಿ.ಗೋವಿಂದರಾಜು ಹೇಳಿದ್ದಾರೆ.

 ಮಂಡ್ಯ ಮತ್ತು ಮೈಸೂರು ಪ್ರದೇಶಗಳಲ್ಲಿ ವರನಟ ರಾಜ್ ಅಭಿಮಾನಿಗಳು ದತ್ತಿ ಸಂಗ್ರಹ ಮಾಡುತ್ತಿದ್ದಾರೆ. ಯಾವುದೇ ರೀತಿಯ ಬಿಕ್ಕಟ್ಟಿನ ಸಮಯದಲ್ಲಿ  ರಾಜ್‌ಕುಮಾರ್ ಕುಟುಂಬವು ಯಾವಾಗಲೂ ಸಹಾಯ ಹಸ್ತ  ಚಾಚಿ ನೆರವಿಗೆ ನಿಂತು ಮಾದರಿಯಾಗಿದೆ. ಈಗ ಅವರ ಅಭಿಮಾನಿಗಳು ಅವರನ್ನು ಅನುಸರಣೆ ಮಾಡುತ್ತಿದ್ದಾರೆ.ಇಂಜಿನಿಯರಿಂಗ್ ವಿದ್ಯಾರ್ಥಿ ಅಭಿಷೇಕ್ ಎಚ್ ಶಿವರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದು ಪ್ರತಿಯೊಬ್ಬರೂ ಸುರಕ್ಷಿತವಾಗಿರಿ ಎಂದು ಹ್ಯಾಟ್ರಿಕ್ ಹೀರೋ ಸಂದೇಶ ರವಾನಿಸಿದ ಸಮಯದಲ್ಲಿ ತಾವೂ ಅಗತ್ಯವಿರುವವರಿಗೆ ಏನಾದರೂ ಸಹಾಯ ಮಾಡಲು ಬಯಸಿದ್ದರು.]

"ನಾನು ಶಿವಣ್ಣನ ಫ್ಯಾನ್ ಕ್ಲಬ್‌ನ ಜನರೊಂದಿಗೆ ಸಂಪರ್ಕ ಹೊಂದಿದ್ದೇನೆ ಮತ್ತು ಅವರಲ್ಲಿ ಹತ್ತು ಮಂದಿ ಸೇರಿ ಅಗತ್ಯವಿರುವವರಿಗೆ ಡ್ರೈ ಕಾಂಡಿಮೆಂಟ್ಸ್ ಗಳನ್ನು ಏ.2ರಿಂದ ವಿತರಿಸಲು ನಿರ್ಧರಿಸಿದ್ದೇವೆ" ಅಭಿಷೇಕ್  ಹೇಳಿದ್ದಾರೆ. ರಾಜ್‌ಕುಮಾರ್ ಕುಟುಂಬದ ಇನ್ನೂ ಅನೇಕ ಅಭಿಮಾನಿಗಳು ಇದ್ದಾರೆ, ಅವರು ಈಗಾಗಲೇ ದೀನದಲಿತರಿಗೆ ಆಹಾರವನ್ನು ವಿತರಿಸುತ್ತಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ

"ನಾವು ಇದನ್ನು ಶಿವಣ್ಣನಿಗಾಗಿ ಮಾಡುತ್ತಿದ್ದೇವೆ ಆದರೆ ಅಪ್ಪಾಜಿ (ರಾಜ್ ಕುಮಾರ್) ಮತ್ತು ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳು ಈಗಾಗಲೇ ಫೀಲ್ಡಿನಲ್ಲಿದ್ದಾರೆ" ಎಂದು ಅಭಿಷೇಕ್ ಹೇಳಿದರು. 

ಇನ್ನು ಕಿಚ್ಚ  ಸುದೀಪ್ ಅವರ ಅಭಿಮಾನಿಗಳು ಸಹ ತಾವೇನೂ ಹಿಂದೆ ಬಿದ್ದಿಲ್ಲ.ಕಳೆದ ಐದು ದಿನಗಳಿಂದ, 40 ವರ್ಷದ ಜಗದೀಶ್ ಜಗ್ಗಿ ನಗರದ ವಿವಿಧ ಭಾಗಗಳಿಗೆ ಆಹಾರವನ್ನು ಪೂರೈಸಲು ತನ್ನ ತಂಡದೊಂದಿಗೆ ಇಡೀ ದಿನ ಕೆಲಸ ಮಾಡುತ್ತಿದ್ದಾರೆ.  "ನಾವು ಮಾರ್ಚ್ 28 ರಂದು ಆಹಾರವನ್ನು ವಿತರಿಸಲು ಪ್ರಾರಂಭಿಸಿದ್ದೇವೆ. ಟೊಮೆಟೊ ಬಾತ್, ಪುಲಾವ್ ಮುಂತಾದ ಕೆಲವು ಮೂಲಭೂತ ಆಹಾರ ಪದಾರ್ಥಗಳನ್ನು ನಾವು ಬಡವರಿಗೆನೀಡುತ್ತೇವೆ." ಎಂದು ಪ್ರಿಂಟಿಂಗ್ ಪ್ರೆಸ್ ನಡೆಸುವ ಜಗ್ಗಿ ಹೇಳಿದ್ದಾರೆ.

ಜಗ್ಗಿ ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿಯ ಸದಯ್ಸರಾಗಿದ್ದು ದು ನಟನ ಹೆಸರಿನಲ್ಲಿ ವಿವಿಧ ದತ್ತಿ ಕಾರ್ಯಗಳನ್ನು ನಡೆಸುತ್ತಿದ್ದಾರೆ.. ಈ ಕಾರಣಕ್ಕಾಗಿಅವರು ಪ್ರತಿದಿನ ಸುಮಾರು 600-700 ಜನರಿಗೆ ಆಹಾರವನ್ನು ನೀಡುತ್ತಾರೆ ಮತ್ತು ಎಲ್ಲರಿಗೂ ಮಾಸ್ಕ್ ಗಳು,  ಸ್ಯಾನಿಟೈಸರ್ಗಳನ್ನು ಒದಗಿಸುತ್ತಾರೆ. ಕೆಜಿಎಫ್ ಸ್ಟಾರ್ ಯಶ್ ಅವರ ಅನೇಕ ಅಭಿಮಾನಿಗಳು ಸಹ ದಾನಕ್ಕಾಗಿ ತಮ್ಮಿಂದ ಸಾಧ್ಯವಾದಷ್ಟು ಕೊಡುಗೆ ನೀಡುತ್ತಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com