ಟಿವಿ ಧಾರಾವಾಹಿಗಳಿಗೂ ಕೊರೋನಾ ಎಫೆಕ್ಟ್: ಗೃಹಿಣಿಯರ ಹಿಡಿಶಾಪ
ಲಾಕ್ ಡೌನ್ ಸಮಯವನ್ನು ಟಿವಿ ಧಾರಾವಾಹಿ ನೋಡಿಕೊಂಡು ಕಳೆಯುತ್ತಿರುವವರಿಗೆ ಮತ್ತೊಂದು ಬ್ಯಾಡ್ ನ್ಯೂಸ್, ಕೆಲವು ಚಾನೆಲ್ ಗಳು ಕೆಲವು ದಿನಗಳ ಹಿಂದೆಯೇ ಧಾರಾವಾಹಿ ಶೂಟಿಂಗ್ ನಿಲ್ಲಿಸಿದ್ದಾರೆ.
Published: 02nd April 2020 11:44 AM | Last Updated: 02nd April 2020 11:44 AM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಲಾಕ್ ಡೌನ್ ಸಮಯವನ್ನು ಟಿವಿ ಧಾರಾವಾಹಿ ನೋಡಿಕೊಂಡು ಕಳೆಯುತ್ತಿರುವವರಿಗೆ ಮತ್ತೊಂದು ಬ್ಯಾಡ್ ನ್ಯೂಸ್, ಕೆಲವು ಚಾನೆಲ್ ಗಳು ಕೆಲವು ದಿನಗಳ ಹಿಂದೆಯೇ ಧಾರಾವಾಹಿ ಶೂಟಿಂಗ್ ನಿಲ್ಲಿಸಿದ್ದಾರೆ.
ಕೆಲವು ಚಾನೆಲ್ ಗಳು ಹಳೆಯ ಸಂಚಿಕೆಗಳನ್ನು ಮರು ಪ್ರಸಾರ ಮಾಡುತ್ತಿವೆ ಆದರೆ ವೀಕ್ಷಕರು ಹೊಸ ಸಂಚಿಕೆಗಳನ್ನು ವೀಕ್ಷಿಸಲು ಬಹಳ ಕಾತರರಾಗಿದ್ದಾರೆ, ಆದರೆ ಹೊಸ ಸಂಚಿಕೆ ಪ್ರಸಾರ ಮಾಡಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ.
ಕನ್ನಡದ ಉದಯ, ಕಲರ್ಸ್ ಕನ್ನಡ, ಜೀ ಕನ್ನಡ, ಸುವರ್ಣ ಚಾನೆಲ್ ಗಳ ಧಾರಾವಾಹಿ ಶೂಟಿಂಗ್ ಗಾಗಿ ನೂರಾರು ಮಂದಿ ತಂತ್ರಜ್ಞರು ಹಾಗೂ ಕಲಾವಿದರು ಭಾಗವಹಿಸುತ್ತಿದ್ದರು.
ಕಳ ಚಾನೆಲ್ ಗಳು ಹೆಚ್ಚುವರಿ ಎಪಿಸೋಡ್ ಶೂಟಿಂಗ್ ಮಾಡಿದ್ದು, ಅವೆಲ್ಲಾ ಮುಗಿಯುವ ಹಂತದಲ್ಲಿವೆ ಎಂದು ಕಲರ್ಸ್ ಕನ್ನಡ ಚಾನೆಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಗಳು ಚಾನಕಿ ಸೀರಿಯಲ್ ಶೂಟಿಂಗ್ ಮಾರ್ಚ್ 18 ರಿಂದ ನಿಲ್ಲಿಸಿದ್ದಾಗಿ ಕಾರ್ಯಕ್ರಮದ ಕ್ರಿಯೆಟಿವ್ ಹೆಡ್ ಅಶ್ವಿನಿ ಅನೀಶ್ ತಿಳಿಸಿದ್ದಾರೆ.