ಧಾರ್ಮಿಕ ಸ್ಥಳಗಳಲ್ಲಿ ಸಭೆ ಸೇರಿ ಅವ್ಯವಸ್ಥೆ ಉಂಟುಮಾಡುವ ಸಮಯ ಇದಲ್ಲ- ಎ.ಆರ್.ರೆಹಮಾನ್

ಕೊರೋನಾವೈರಸ್ ಹರಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರದ ಸಲಹೆಗಳು ಹಾಗೂ ಸ್ವಯಂ ಐಸೋಲೆಷನ್ ಪಾಲಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿರುವ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್, ಇದು ಧಾರ್ಮಿಕ ಸ್ಥಳಗಳಲ್ಲಿ ಸಭೆ ಸೇರಿ ಅವ್ಯವಸ್ಥೆಯನ್ನುಂಟುಮಾಡುವ ಸಮಯವಲ್ಲ ಎಂದಿದ್ದಾರೆ
ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್
ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್

ನವದೆಹಲಿ: ಕೊರೋನಾವೈರಸ್ ಹರಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರದ ಸಲಹೆಗಳು ಹಾಗೂ ಸ್ವಯಂ ಐಸೋಲೆಷನ್ ಪಾಲಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿರುವ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್, ಇದು ಧಾರ್ಮಿಕ ಸ್ಥಳಗಳಲ್ಲಿ ಸಭೆ ಸೇರಿ ಅವ್ಯವಸ್ಥೆಯನ್ನುಂಟುಮಾಡುವ ಸಮಯವಲ್ಲ ಎಂದಿದ್ದಾರೆ

ದೇಶಾದ್ಯಂತ ಕೋವಿಡ್ 19 ಸೋಂಕು ಹರಡುವಲ್ಲಿ ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಕೇಂದ್ರದಲ್ಲಿ ಕಳೆದ ತಿಂಗಳು ನಡೆದಿದ್ದ ತಬ್ಲಿಘಿ ಜಮಾತ್ ಸಭೆ ಬಗೆಗಿನ ಸುದ್ದಿಗಳು ಹೊರಬಂದ ಬೆನ್ನಲ್ಲೇ ರೆಹಮಾನ್ ಈ ರೀತಿಯ ಮನವಿ ಮಾಡಿಕೊಂಡಿದ್ದಾರೆ.

ಮಾರಕ ಸೋಂಕಿಗೆ ತುತ್ತಾದವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ನರ್ಸ್ ಗಳು ಹಾಗೂ ಎಲ್ಲಾ ಸಿಬ್ಬಂದಿಗಳ ನಿಸ್ವಾರ್ಥತತೆ ಹಾಗೂ ಧೈರ್ಯಗೆ ಟ್ವೀಟರ್ ಮೂಲಕ ಎ.ಆರ್. ರೆಹಮಾನ್ ಧನ್ಯವಾದ ಸಲ್ಲಿಸಿದ್ದಾರೆ.

ಮಾನವೀಯತೆ ಹಾಗೂ ಆಧ್ಯಾತ್ಮಿಕತೆ ಸೌಂದರ್ಯದ ಬಗ್ಗೆ ಮಾತನಾಡಿರುವ ರೆಹಮಾನ್, ಮಾರಕ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಜನರು ಒಗ್ಗೂಡುವಂತೆ ಮನವಿ ಮಾಡಿಕೊಂಡಿದ್ದಾರೆ.ರೆಹಮಾನ್ ಅವರ ಮನವಿಯನ್ನು ನಟಿ ಶ್ರಾದ್ದಾ ಕಪೂರ್ ಸೇರಿದಂತೆ ಹಲವು ಅಭಿಮಾನಿಗಳು ಬೆಂಬಲಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com