ಲಾಕ್ ಡೌನ್ ವೇಳೆ ಜಾಲಿ ರೈಡ್ ಅಪಘಾತ: ಪರಾರಿಯಾಗಿದ್ದ ನಟಿ ಶರ್ಮಿಳಾ ಮಾಂಡ್ರೆ ಹೇಳಿದ್ದೇನು?

ತಾವು ಯಾವುದೇ ಪಾರ್ಟಿ ಮಾಡಲು ಲಾಕ್‌ಡೌನ್‌ ಸಂದರ್ಭದಲ್ಲಿ ಹೊರಗೆ ಹೋಗಿರಲಿಲ್ಲ, ಅನಾರೋಗ್ಯದ ಹಿನ್ನೆಲೆಯಲ್ಲಿ ಔಷಧಿಗಾಗಿ  ಮನೆಯಿಂದ ಸ್ನೇಹಿತರ ಕಾರಿನಲ್ಲಿ ಹೋಗಿದ್ದೆ ಎಂದು ಕಾರು ಅಪಘಾತದಲ್ಲಿ ಗಾಯಗೊಂಡಿರುವ ಸ್ಯಾಂಡಲ್‌ವುಡ್‌ ನಟಿ  ಶರ್ಮಿಳಾ ಮಾಂಡ್ರೆ ಸ್ಪಷ್ಟಪಡಿಸಿದ್ದಾರೆ.

Published: 05th April 2020 02:50 PM  |   Last Updated: 06th April 2020 02:27 PM   |  A+A-


sharmila-mandre

ಶರ್ಮಿಳಾ ಮಾಂಡ್ರೆ

Posted By : Vishwanath S
Source : UNI

ಬೆಂಗಳೂರು: ತಾವು ಯಾವುದೇ ಪಾರ್ಟಿ ಮಾಡಲು ಲಾಕ್‌ಡೌನ್‌ ಸಂದರ್ಭದಲ್ಲಿ ಹೊರಗೆ ಹೋಗಿರಲಿಲ್ಲ, ಅನಾರೋಗ್ಯದ ಹಿನ್ನೆಲೆಯಲ್ಲಿ ಔಷಧಿಗಾಗಿ  ಮನೆಯಿಂದ ಸ್ನೇಹಿತರ ಕಾರಿನಲ್ಲಿ ಹೋಗಿದ್ದೆ ಎಂದು ಕಾರು ಅಪಘಾತದಲ್ಲಿ ಗಾಯಗೊಂಡಿರುವ ಸ್ಯಾಂಡಲ್‌ವುಡ್‌ ನಟಿ  ಶರ್ಮಿಳಾ ಮಾಂಡ್ರೆ ಸ್ಪಷ್ಟಪಡಿಸಿದ್ದಾರೆ.

ನಿನ್ನೆ ನಡೆದ ಅಪಘಾತದ ಸುದ್ದಿ ವೈರಲ್ ಆಗಿದೆ ಎಂದು ಕೆಲವರು ತಮಾಷೆಯಾಗಿ ಮಾತನಾಡಿದ್ದಾರೆ. ನಾನು  ಔಷಧಿಯನ್ನು ಖರೀದಿಸಲು ಮಾತ್ರ ಮನೆಯಿಂದ ಹೊರ ಹೋಗಿದ್ದೆ. ಲಾಕ್‌ಡೌನ್ ಸಮಯದಲ್ಲಿ ಓಡಾಡಲು  ಪಾಸ್ ಹೊಂದಿದ್ದ ಸ್ನೇಹಿತರ ಸಹಾಯವನ್ನು ಪಡೆದಿದ್ದೆ ಅಷ್ಟೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನನಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಆಗ ನನ್ನ  ಸ್ನೇಹಿತರಾದ ಲೋಕೇಶ್ ಮತ್ತು ಡಾನ್ ಥಾಮಸ್ ಇಬ್ಬರ ಸಹಾಯವನ್ನು ಕೇಳಿದೆ. ಏಕೆಂದರೆ ಅವರ  ಬಳಿ ಲಾಕ್‌ಡೌನ್ ವೇಳೆ ಓಡಾಡುವ ಪಾಸ್ ಇತ್ತು. ಹೀಗಾಗಿ ನನ್ನನ್ನು ಹತ್ತಿರದ ಆಸ್ಪತ್ರೆಗೆ  ಕರೆದುಕೊಂಡು ಹೋಗುವಂತೆ ಮನವಿ ಮಾಡಿಕೊಂಡೆ. ಈ ವೇಳೆ ಅಪಘಾತವಾಗಿದೆ. ಆದರೆ ನಾನು ಕಾರು  ಓಡಿಸುತ್ತಿರಲಿಲ್ಲ. ಕಾರಿನ ಹಿಂಬದಿ ಸೀಟಿನಲ್ಲಿ ನಾನು ಕುಳಿತಿದ್ದೆ. ನನ್ನ ಸ್ನೇಹಿತ  ಡಾನ್ ಕಾರು ಓಡಿಸುತ್ತಿದ್ದ. ಈ ಅಪಘಾತದಲ್ಲಿ ನನ್ನ ಕುತ್ತಿಗೆಗೆ ಪೆಟ್ಟಾಗಿದೆ ಎಂದು ಶರ್ಮಿಳಾ ಮಾಂಡ್ರೆ ತಿಳಿಸಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Babri Masjid

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನ್ಯಾಯ ಒದಗಿಸಲಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp