ತೆಲುಗಿನ ಹಿಟ್ ಚಿತ್ರ 'ಎವರು' ಕನ್ನಡ ಅವತರಣಿಕೆ ಶೀಘ್ರ

 ಸ್ಪ್ಯಾನಿಷ್ ಚಲನಚಿತ್ರ ದಿ ಇನ್ವಿಸಿಬಲ್ ಗೆಸ್ಟ್ ಚಿತ್ರದಿಂದ ಸ್ಪೂರ್ತಿ ಪಡೆದ ತೆಲುಗು ಚಿತ್ರ "ಎವರು" ಕನ್ನಡದಲ್ಲಿ ಮೂಡಿಬರುತ್ತದೆ ಎನ್ನಲಾಗಿದೆ. ತೆಲುಗಿನಲ್ಲಿ ಅದ್ವಿ ಸೇಶ್ ನಾಯಕ ನಟನಾಗಿ ಕಾಣಿಸಿಕೊಂಡ ಈ ಚಿತ್ರದ ಕನ್ನಡ ಅವತರಣಿಕೆಯಲ್ಲಿ ದಿಗಂತ್ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾತು ಗಾಂಧಿನಗರದ ಸುತ್ತ ಸುಳಿದಾಡುತ್ತಿದೆ. 

Published: 08th April 2020 10:58 AM  |   Last Updated: 08th April 2020 11:00 AM   |  A+A-


Posted By : Raghavendra Adiga
Source : The New Indian Express

ಸ್ಪ್ಯಾನಿಷ್ ಚಲನಚಿತ್ರ ದಿ ಇನ್ವಿಸಿಬಲ್ ಗೆಸ್ಟ್ ಚಿತ್ರದಿಂದ ಸ್ಪೂರ್ತಿ ಪಡೆದ ತೆಲುಗು ಚಿತ್ರ "ಎವರು" ಕನ್ನಡದಲ್ಲಿ ಮೂಡಿಬರುತ್ತದೆ ಎನ್ನಲಾಗಿದೆ. ತೆಲುಗಿನಲ್ಲಿ ಅದ್ವಿ ಸೇಶ್ ನಾಯಕ ನಟನಾಗಿ ಕಾಣಿಸಿಕೊಂಡ ಈ ಚಿತ್ರದ ಕನ್ನಡ ಅವತರಣಿಕೆಯಲ್ಲಿ ದಿಗಂತ್ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾತು ಗಾಂಧಿನಗರದ ಸುತ್ತ ಸುಳಿದಾಡುತ್ತಿದೆ. 

ವೆಂಕಟ್ ರಾಮ್ ಜಿ ನಿರ್ದೇಶನದ ಕ್ರೈಮ್ ಥ್ರಿಲ್ಲರ್ ಚಿತ್ರ  ಈಗ ಕನ್ನಡದಲ್ಲಿ ರಿಮೇಕ್ ಆಗಲಿದೆ. 2019 ರಲ್ಲಿ ಅತ್ಯುತ್ತಮ ತೆಲುಗು ಚಿತ್ರಗಳಲ್ಲಿ ಒಂದೆಂದು  ಹೆಸರಾಗಿದ್ದ ಈ ಚಿತ್ರದ ಮೂಲಕ , ಒಂದು ದೊಡ್ಡ ಪ್ರೊಡಕ್ಷನ್ ಹೌಸ್ಸ್ಯಾಂಡಲ್‌ವುಡ್‌ಗೆ ಪ್ರವೇಶಿಸುತ್ತದೆ ಎಂದು ಮೂಲವೊಂದು ತಿಳಿಸಿದೆ.

. ತೆಲುಗಿನ ತಾಂತ್ರಿಕ ಸಿಬ್ಬಂದಿ ಕನ್ನಡ ಆವೃತ್ತಿಗೆ ತಮ್ಮ ಟಚ್ ನೀಡಲಿದ್ದು  ಸಂಭಾಷಣೆ ಬರೆಯುವುದು ಸೇರಿದಂತೆ ಹೊಸ ಯೋಜನೆಗೆ ಸಿದ್ಧತೆ  ನಡೆದಿದೆ. ಇದಾಗಲೇ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಲು ಚಿತ್ರತಂಡ ಸಿದ್ದವಿತ್ತಾದರೂ ಕೊರೋನಾವೈರಸ್ ಕಾರಣ  ಈಗ ಎಲ್ಲವನ್ನೂ ಸ್ಥಗಿತಗೊಳಿಸಿ

ಎವರು ಚಿತ್ರದ ನಾಯಕಿಯಾಗಿ  ರೆಜಿನಾ ಕಸ್ಸಂದ್ರ.ಅಭಿನಯಿಸಿದ್ದರು.ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ಅಜುರೆ ಎಂಟರ್‌ಟೈನ್‌ಮೆಂಟ್ ಜಂಟಿಯಾಗಿ ನಿರ್ಮಿಸಿರುವ ಸುಜಯ್ ಘೋಷ್  ನಿರ್ದೇಶನದ ಮತ್ತು ಅಮಿತಾಬ್ ಬಚ್ಚನ್ ಮತ್ತು ತಪ್ಸೀ ಪನ್ನು ಅಭಿನಯದ ಹಿಂದಿ ಚಿತ್ರ "ಬದ್ಲಾ" ಸಹ ಇದೇ ಕಥೆಯನ್ನಾಧರಿಸಿದೆ.

ಏತನ್ಮಧ್ಯೆ, ದಿಗಂತ್  ಯೋಗರಾಜ್ ಭಟ್ ಅವರ ಗಾಳಿಪಟ2, ರಾಘವೇಂದ್ರ ಎಂ ನಾಯಕ್ ನಿರ್ದೇಶನದ ಮಾರಿಗೋಲ್ಡ್, ಮತ್ತು ವಿನಾಯಕ್ ಕೊಡ್ಸಾರ ನೇತೃತ್ವದ ಇನ್ನೂ ಹೆಸರಿಡದ ಚಿತ್ರ ಸೇರಿ ಹಲವು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.. ಈ ಮೂರೂ ಚಿತ್ರಗಳು ಪ್ರಸ್ತುತ ಶೂಟಿಂಗ್ ಹಂತದಲ್ಲಿವೆ.
 

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp