ಕೊರೋನಾ ಮಹಾಮಾರಿಗೆ ನಲುಗಿದ ಜನತೆ, ಮನಕಲಕುವ ಫೋಟೋ ಟ್ವೀಟ್ ಮಾಡಿದ ನಟ ಜಗ್ಗೇಶ್

ಕೊರೋನಾ ವೈರಸ್ ಮಹಾಮಾರಿಗೆ ದೇಶದ ಜನತೆ ಕಂಗೆಟ್ಟಿದ್ದಾರೆ. ಈ ನಡುವೆ ಅನ್ನ ಆಹಾರವಿಲ್ಲದೆ ಬಡವರು ಸಂಕಷ್ಟ ಎದುರಿಸುತ್ತಿದ್ದು ಪ್ರಾಣಕ್ಕೆ ಒಡೆಯ ಪ್ರಾಣದೇವ ನಾನಿರುವೆ ನಿನ್ನ ಜೊತೆ ಮಿಡಿಯಲಿ ರಾಮನಾಮ ಎಂದು ನಟ ಜಗ್ಗೇಶ್ ಮನಕಲುಕುವ ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ. 

Published: 17th April 2020 01:25 PM  |   Last Updated: 17th April 2020 01:25 PM   |  A+A-


Jaggesh

ಜಗ್ಗೇಶ್

Posted By : Vishwanath S
Source : Online Desk

ಬೆಂಗಳೂರು: ಕೊರೋನಾ ವೈರಸ್ ಮಹಾಮಾರಿಗೆ ದೇಶದ ಜನತೆ ಕಂಗೆಟ್ಟಿದ್ದಾರೆ. ಈ ನಡುವೆ ಅನ್ನ ಆಹಾರವಿಲ್ಲದೆ ಬಡವರು ಸಂಕಷ್ಟ ಎದುರಿಸುತ್ತಿದ್ದು ಪ್ರಾಣಕ್ಕೆ ಒಡೆಯ ಪ್ರಾಣದೇವ ನಾನಿರುವೆ ನಿನ್ನ ಜೊತೆ ಮಿಡಿಯಲಿ ರಾಮನಾಮ ಎಂದು ನಟ ಜಗ್ಗೇಶ್ ಮನಕಲುಕುವ ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ. 

ಮಾರುಕಟ್ಟೆಯೊಂದರಲ್ಲಿ ವದ್ಧೆ ಮತ್ತು ಕೋತಿ ಇರುವ ಫೋಟೋವನ್ನು ಜಗ್ಗೇಶ್ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಊರು ಹೋಗೆನ್ನಲು ಕಾಡು ಬಾ ಎನ್ನಲು 
ಯಾರು ಬರುವರು ನನ್ನಜೊತೆ ಬಂಧುವಾಗಿ.! ಪ್ರಾಣಕ್ಕೆ ಒಡೆಯ ಪ್ರಾಣದೇವ ನಾನಿರುವೆ ನಿನ್ನಜೊತೆ ನೀನಿಲ್ಲಿ ಇರುವವರೆಗೆ.! ಗುಣಿಸಿಬಾಗಿಸಿ ಸರಿತಪ್ಪುಗಳ ದಿಕ್ಕುತಿಳಿಸುವೆ ತಲುಪಲು ಯಾವ ಊರಿಗೆ ಎಂದು.! ಅಲ್ಲಿಯವರೆಗು ಹೃದಯಶಬ್ಧದ ಜೊತೆ ಮಿಡಿಯಲಿ ರಾಮನಾಮ.! ಬರೆದಿದ್ದಾರೆ. 

ಈ ಫೋಟೋ ನಿಜಕ್ಕೂ ದೇಶದ ದುಸ್ಥಿತಿಗೆ ಕೈಗನ್ನಡಿಯಂತಿದೆ. ದೇಶದ ಜನರು ಒಂದಲ್ಲ ಒಂದು ಸಮಸ್ಯೆಗೆ ಒಳಗಾದಿದ್ದಾರೆ. 

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp