ನಿಖಿಲ್ ಕುಮಾರಸ್ವಾಮಿ-ರೇವತಿ ವಿವಾಹ: ಕುಮಾರಸ್ವಾಮಿ ವಿರುದ್ಧ ಹರಿಹಾಯ್ದ ರವೀನಾ!ಕಾರಣ ಏನು ಗೊತ್ತಾ?

ಲಾಕ್ ಡೌನ್ ಮಧ್ಯೆಯೂ ತನ್ನ ಮಗ ನಿಖಿಲ್ ಕುಮಾರಸ್ವಾಮಿ ವಿವಾಹವನ್ನು ನೆರವೇರಿಸಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಬಾಲಿವುಡ್ ನಟಿ ರವೀನಾ ಟಂಡನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ

Published: 17th April 2020 07:11 PM  |   Last Updated: 17th April 2020 09:04 PM   |  A+A-


RaveenatandanNikhil1

ರವೀನಾ ಟಂಡನ್, ನಿಖಿಲ್ - ರೇವತಿ ಮದುವೆ ಚಿತ್ರ

Posted By : Nagaraja AB
Source : The New Indian Express

ಬೆಂಗಳೂರು: ಲಾಕ್ ಡೌನ್ ಮಧ್ಯೆಯೂ ತನ್ನ ಮಗ ನಿಖಿಲ್ ಕುಮಾರಸ್ವಾಮಿ ವಿವಾಹವನ್ನು ನೆರವೇರಿಸಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಬಾಲಿವುಡ್ ನಟಿ ರವೀನಾ ಟಂಡನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಲಾಕ್ ಡೌನ್ ಮಧ್ಯೆಯೂ ರಾಮನಗರ ಜಿಲ್ಲೆ ಬಿಡದಿ ಬಳಿಯ ಫಾರ್ಮ್ ಹೌಸ್ ನಲ್ಲಿ ನಿಖಿಲ್ - ರೇವತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನಿಂದ 45 ಕಿಲೋ ಮೀಟರ್ ದೂರದಲ್ಲಿರುವ ಕೇತಗಾನಹಳ್ಳಿಯ ಫಾರ್ಮ್ ಹೌಸ್ ನಲ್ಲಿ ನಿಖಿಲ್ ಕುಮಾರಸ್ವಾಮಿ ವಿವಾಹ ಮಹೋತ್ಸವ ನೆರವೇರಿದೆ. 

ಈ  ವಿವಾಹದ ಬಗ್ಗೆ  ಟ್ವೀಟರ್ ನಲ್ಲಿ ರವೀನಾ ಟಂಡನ್ ವ್ಯಂಗದ ಮೂಲಕ ಟೀಕಿಸಿದ್ದಾರೆ. ನಿಸ್ಸಂಶಯವಾಗಿ ದೇಶದ ಅನೇಕ ಬಡವರು ತಮ್ಮ ಕುಟುಂಬವನ್ನು ತಲುಪಲು ಸಾಧ್ಯವಾಗದೆ ಹಸಿವಿನಿಂದ ಬಳಲುತ್ತಿದ್ದಾರೆ. ಇದು ಕೆಲ ಆತ್ಮಗಳಿಗೆ ಅರ್ಥವಾಗಿಲ್ಲ, ಬಪೆಟ್ ನಲ್ಲಿ ಏನು ನೀಡಲಾಯಿತು ಎಂಬ ಬಗ್ಗೆ ಕುತೂಹಲವಿದೆ ಎಂದು ವ್ಯಂಗ್ಯವಾಡಿದ್ದಾರೆ.

 

ಈ ಹಿಂದೆಯೂ ಟ್ವೀಟ್ ಮಾಡಿದ ರವೀನಾ, ಭೂಮಿಯನ್ನು ನಾವು ಬಹಳಷ್ಟು ದುರುಪಯೋಗಪಡಿಸಿಕೊಂಡಿದ್ದೇವೆ. ನಮ್ಮ ಮನೆಗಳಿಂದ ಹೊರಬರಲು ಸಹ ಸಾಧ್ಯವಿಲ್ಲದಂತಾಗಿದೆ.  ಅಲ್ಲದೆ, ಅನೇಕ ಮಂದಿ ಮನೆಗೆಲಸದವರು,  ಚಾಲಕರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಜನರು ತಮ್ಮ ಸಂಬಳವನ್ನು ಅವಲಂಬಿಸಿರುವುದರಿಂದ ಅವರನ್ನು ವಜಾಗೊಳಿಸದಂತೆ ನಾನು ವಿನಂತಿಸುತ್ತಿದ್ದೇನೆ ಎಂದು ಮನವಿ ಮಾಡಿಕೊಂಡಿದ್ದರು

Stay up to date on all the latest ಸಿನಿಮಾ ಸುದ್ದಿ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp