ಆನ್‌ಲೈನ್‌ ಪ್ಲ್ಯಾಟ್‏ಫಾರ್ಮ್ ಮೂಲಕ 'ತ್ರಿಕೋಣ' ಬಿಡುಗಡೆಗೆ ಚಿತ್ರತಂಡ ಸಜ್ಜು!

ನಿರ್ದೇಶಕ ಕಮ್‌ ನಿರ್ಮಾಪಕ ಬ್ಲಾಕ್‌ ಬರ್ಡ್‌ ರಾಜಶೇಖರ್ ತ್ರಿಭಾಷೆಯಲ್ಲಿ ನಿರ್ಮಿಸಿರುವ ‘ತ್ರಿಕೋನ’ ಸಾಹಸ ಪ್ರಧಾನ ಚಿತ್ರ ಏಪ್ರಿಲ್‌ನಲ್ಲಿ ತೆರೆಗೆ ಬರಬೇಕಿತ್ತು. ಕೊರೊನಾ ಮಾರಿ ಚಿತ್ರರಂಗದ ಭವಿಷ್ಯವನ್ನೂ ಅತಂತ್ರ ಸ್ಥಿತಿಗೆ ನೂಕಿರುವುದರಿಂದ ಚಿತ್ರ ಬಿಡುಗಡೆಗೆ ಈಗ ನಿರ್ಮಾಪಕರು ಪರ್ಯಾಯ ಮಾರ್ಗಗಳ ಶೋಧದಲ್ಲಿ ತೊಡಗಿದ್ದಾರೆ.
ತ್ರಿಕೋನ ಸಿನಿಮಾ ಪೋಸ್ಟರ್
ತ್ರಿಕೋನ ಸಿನಿಮಾ ಪೋಸ್ಟರ್

ನಿರ್ದೇಶಕ ಕಮ್‌ ನಿರ್ಮಾಪಕ ಬ್ಲಾಕ್‌ ಬರ್ಡ್‌ ರಾಜಶೇಖರ್ ತ್ರಿಭಾಷೆಯಲ್ಲಿ ನಿರ್ಮಿಸಿರುವ ‘ತ್ರಿಕೋನ’ ಸಾಹಸ ಪ್ರಧಾನ ಚಿತ್ರ ಏಪ್ರಿಲ್‌ನಲ್ಲಿ ತೆರೆಗೆ ಬರಬೇಕಿತ್ತು. ಕೊರೊನಾ ಮಾರಿ ಚಿತ್ರರಂಗದ ಭವಿಷ್ಯವನ್ನೂ ಅತಂತ್ರ ಸ್ಥಿತಿಗೆ ನೂಕಿರುವುದರಿಂದ ಚಿತ್ರ ಬಿಡುಗಡೆಗೆ ಈಗ ನಿರ್ಮಾಪಕರು ಪರ್ಯಾಯ ಮಾರ್ಗಗಳ ಶೋಧದಲ್ಲಿ ತೊಡಗಿದ್ದಾರೆ.

ಕನ್ನಡ, ತೆಲುಗು, ತಮಿಳಿನಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲು ಯೋಜಿಸಿದ್ದ ರಾಜಶೇಖರ್‌, ಈಗ ಒಟಿಟಿ ವೇದಿಕೆಗಳತ್ತ ಚಿತ್ತ ಹರಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಅಶೋಕ್‌ ನಿರ್ದೇಶನದ ‘ದಿಯಾ’ ಸಿನಿಮಾ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿದ್ದಕ್ಕಿಂತ ಒಟಿಟಿಯಲ್ಲಿ ಹೆಚ್ಚು ಜನರು ವೀಕ್ಷಿಸಿರುವುದನ್ನು ಉಲ್ಲೇಖಿಸುವ ಅವರು, ಸದ್ಯದ ಪರಿಸ್ಥಿತಿಯಲ್ಲಿ ಚಿತ್ರಮಂದಿರವನ್ನೇ ನೆಚ್ಚಿಕೊಂಡು ಕೂರುವ ಬದಲು ನೆಟ್‌ಫ್ಲಿಕ್ಸ್‌ ಅಥವಾ ಅಮೆಜಾನ್‌ ಪ್ರೈಮ್‌ನಲ್ಲಿ ಚಿತ್ರ ಬಿಡುಗಡೆ ಮಾಡುವ ಬಗ್ಗೆ ಮಾತುಕತೆ ನಡೆಸುತ್ತಿದ್ದೇವೆ ಎಂದತು
ರಾಜಶೇಖರ್ ತಿಳಿಸಿದ್ದಾರೆ.

ಮೂರು ಭಾಷೆಗಳಲ್ಲಿ ಚಿತ್ರ ನಿರ್ಮಿಸಲು ಸುಮಾರು ₹ 4 ಕೋಟಿಯವರೆಗೆ ವಿನಿಯೋಗಿಸಲಾಗಿದೆ. ಮಾರ್ಚ್‌ನಲ್ಲಿ ಪ್ರಚಾರ ಶುರುಮಾಡುವ ಯೋಜನೆಯೂ ಇತ್ತು. ಕೊರೊನಾ ನಮ್ಮ ಎಲ್ಲ ಯೋಜನೆಗಳನ್ನು ತಲೆಕೆಳಗು ಮಾಡಿಬಿಟ್ಟಿದೆ. ಹಾಗಂತ ಕೈಕಟ್ಟಿ ಕೂರುವಂತಿಲ್ಲ. ಬಿಡುಗಡೆಯನ್ನು ಇನ್ನು ಮುಂದೂಡುತ್ತಾ ಹೋದರೆ ಆರ್ಥಿಕ ನಷ್ಟವು ಏರುತ್ತದೆ ಎಂದು ತಿಳಿಸಿದ್ದಾರೆ.

ಮೂರು ಭಾಷೆಗಳಲ್ಲೂ ಸ್ಕ್ರಿಪ್ಟ್‌ ಬೇರೆ ಬೇರೆ ರೀತಿ ಇದೆ. ಆದರೆ, ಆರಂಭ ಮತ್ತು ಕ್ಲೈಮ್ಯಾಕ್ಸ್‌ ಒಂದೇ ರೀತಿ ಇದೆ. ಕಥೆಯೇ ಚಿತ್ರದ ನಾಯಕ ಎಂದಿದ್ದಾರೆ.  ಬಾಡಿಬಿಲ್ಡರ್‌ 'ಮಿಸ್ಟರ್‌ ಇಂಡಿಯಾ’ ವಿಜೇತ ಬಳ್ಳಾರಿಯ ಮಾರುತೇಶ್‌ ಶಕ್ತಿ, ಅಹಂ ಮತ್ತು ತಾಳ್ಮೆ ಪರೀಕ್ಷೆಗೆ ಒಳಪಡಿಸುವ ಪಾತ್ರ ನಿಭಾಯಿಸಿದ್ದಾರೆ. ಈ ಚಿತ್ರದಲ್ಲಿ ಕಲಾವಿದರ ದೊಡ್ಡ ದಂಡೇ ಇದೆ. ಸುರೇಶ್‌ ಹೆಬ್ಳಿಕರ್‌, ಲಕ್ಷ್ಮಿ, ಸುಧಾರಾಣಿ, ಸಾಧುಕೋಕಿಲ, ಅಚ್ಯುತ್ ಕುಮಾರ್ ಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com