ಕೊರೊನಾ ಗ್ಯಾಪ್‌ನಲ್ಲಿಯೇ ಸಿದ್ಧವಾಗುತ್ತಿದೆ "ಬಾಳೇ ಬಂಗಾರ"- ಇದು ಆರ್ಯ ತೆರೆದಿಡಲಿರುವ ಭಾರತಿ ವಿಷ್ಣುವರ್ಧನ್ ಜೀವನಚರಿತ್ರೆ

ಪ್ರತಿದಿನ ರಾತ್ರಿ ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು ಅಂತ ಪ್ರತಿ ಮನೆ ಮನೆಯಲ್ಲೂ ಒಂದು ಹೊಸ ಅಲೆಯನ್ನು ಸೃಷ್ಟಿಸಿರುವ ಪ್ರೀತಿಗೆ ಹೊಸ ಭಾಷೆಯನ್ನೇ ನೀಡಿರುವ 20 ವರ್ಷದ ಹುಡುಗಿ ಹಾಗೂ 45 ವರ್ಷದ ಮಧ್ಯವಯಸ್ಕನ ನಡುವಿನ ನಿಷ್ಕಲ್ಮಶ ಪ್ರೇಮಹಂದರವುಳ್ಳ ಧಾರಾವಾಹಿ;ಜೊತೆ ಜೊತೆಯಲಿ.
ಭಾರತಿ ವಿಷ್ಣುವರ್ಧನ್
ಭಾರತಿ ವಿಷ್ಣುವರ್ಧನ್

ಬೆಂಗಳೂರು: ಪ್ರತಿದಿನ ರಾತ್ರಿ ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು ಅಂತ ಪ್ರತಿ ಮನೆ ಮನೆಯಲ್ಲೂ ಒಂದು ಹೊಸ ಅಲೆಯನ್ನು ಸೃಷ್ಟಿಸಿರುವ ಪ್ರೀತಿಗೆ ಹೊಸ ಭಾಷೆಯನ್ನೇ ನೀಡಿರುವ 20 ವರ್ಷದ ಹುಡುಗಿ ಹಾಗೂ 45 ವರ್ಷದ ಮಧ್ಯವಯಸ್ಕನ ನಡುವಿನ ನಿಷ್ಕಲ್ಮಶ ಪ್ರೇಮಹಂದರವುಳ್ಳ ಧಾರಾವಾಹಿ;ಜೊತೆ ಜೊತೆಯಲಿ.

ಈ ಧಾರಾವಾಹಿಯ ಆರ್ಯ ಸರ್ ಸರ್ ಆರ್ಯ ಸರ್ ಸರ್ ಅಂದರೆ ಅನಿರುಧ್ ಜತ್ಕರ್ ಎಲ್ಲರ ಮನೆ-ಮನಗಳಲ್ಲಿ ರಾರಾಜಿಸುತ್ತಿದ್ದಾರೆ. ಅನಿರುದ್ಧ ಪಾತ್ರಧಾರಿ ಆರ್ಯವರ್ಧನ್ ಆಗೇ ಬಿಟ್ಟಿದ್ದಾರೆ.

ಈಗ ಜಾಹೀರಾತಿನ ಕೊರತೆ ಒಂದು ಕಡೆಯಾದರೆ ಮತ್ತೊಂದು ಕಡೆ ಶೂಟಿಂಗ್ ಸಮಸ್ಯೆ. ಸಾಮಾಜಿಕ ಅಂತರ ಕೊರೋನಾ  ಡೌನ್ ನಿಂದಾಗಿ ಶೂಟಿಂಗ್ ಗೆ ಅವಕಾಶ ಆಗ್ತಾ ಇಲ್ಲ ಪ್ರತಿದಿನ ಆರ್ಯ ಸರ್, ಅನು ಸಿರಿಮನೆ ಪುಷ್ಪ, ಝೇಂಡೆ, ಸುಬ್ಬು ಮೀರಾ ಅಂತೆಲ್ಲ ಪಾತ್ರದಾರಿಗಳನ್ನು ಕಣ್ತುಂಬಿಕೊಂಡು ಖುಷಿಪಡುತ್ತಿದ್ದ ಪ್ರೇಕ್ಷಕರಿಗೆ ಹೊಸ ಸಂಚಿಕೆ ಬರದೇ ನಿರಾಸೆ ಆಗಿದ್ದಂತೂ ಖಂಡಿತ. ಲಾಕ್ ಡೌನ್ ಸಮಯ ಅದೆಷ್ಟೋ ಜನರಿಗೆ ಬೇಜಾರು ತರಿಸಿದೆ. ಒಂದಿಷ್ಟು ಮಂದಿಗೆ ಜೀವನೋತ್ಸಾಹವೇ ಇಲ್ಲದಂಗೆ ಮಾಡಿದೆ. ಮತ್ತೆ ಕೆಲವು ಜನಕ್ಕೆ  ಹೇಗಪ್ಪ ಈ ಸಮಯವನ್ನು ಕಳೆಯುವುದು ಅಂತ ಚಿಂತೆ ಆಗಿದೆ. ಹೇಗೆ ಸಮಯವನ್ನು ಕಳೆಯುವುದು ಹೇಗೆ  ಅನ್ನೋದು ಗೊತ್ತಾಗ್ತಾ ಇಲ್ಲ ಅಂತ ಸಪ್ಪೆ ಮೊರೆ ಹಾಕುತ್ತಿದ್ದಾರೆ.

ಆದರೆ ಆರ್ಯವರ್ಧನ್ ಅರ್ಥಾತ್ ಅನಿರುಧ್ ಸಿಕ್ಕಿರೋ ಈ ಸಮಯವನ್ನು ವ್ಯರ್ಥ ಮಾಡದೇ ಓದು, ಬರಹ ಅಂತೆಲ್ಲ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಮಯವನ್ನು ಆರ್ಯವರ್ಧನ್ ಹೇಗೆ ಕಳೆಯುತ್ತಿದ್ದಾರೆ ಎನ್ನುವ ಪ್ರೇಕ್ಷಕರ ಹಾಗೂ ಅನಿರುಧ್ ಅಭಿಮಾನಿಗಳ ಕುತೂಹಲವನ್ನು ಸಂಗ್ರಹಿಸಿದ ಯುಎನ್ಎನ್ ಕನ್ನಡ ಸುದ್ದಿ ಸಂಸ್ಥೆ, ಆರ್ಯವರ್ಧನ್ ಅವರನ್ನು ಸಂದರ್ಶಿಸಿತು.

ಅಂದಹಾಗೆ ಅನಿರುಧ್,  'ಅಪ್ಪ' ಎಂದೇ ಕರೆಯುವ ಮಾವ ದಿವಂಗತ ನಟ ವಿಷ್ಣುವರ್ಧನ್ ಎಷ್ಟು ಇಷ್ಟ  ಗೌರವ ಪ್ರೀತಿಯೋ ಅಷ್ಟೇ ಗೌರವ, ಪ್ರೀತಿ ಅತ್ತೆ ಭಾರತಿ ವಿಷ್ಣುವರ್ಧನ್ ಅವರ ಮೇಲೂ ಇದೆ. ಅತ್ತೆ-ಮಾವ ಅವರನ್ನು ತಮ್ಮ ಬದುಕಿನ ಅವಿಭಾಜ್ಯ ಅಂಗವೆಂದು ಕರೆಯುವ ಅನಿರುಧ್ ಸಮಯವನ್ನು ಒಂದು ದೊಡ್ಡ ಮಹತ್ ಕಾರ್ಯಕ್ಕಾಗಿ ವಿನಿಯೋಗಿಸಿ ಕೊಂಡಿದ್ದಾರೆ. ಅದು ಏನು ಅನ್ನೋದಾದರೆ, ಭಾರತಿ ವಿಷ್ಣುವರ್ಧನ್ ಅವರ ಬದುಕಿನ ಹೂರಣವನ್ನು ಹೊತ್ತ ಡಾಕ್ಯುಮೆಂಟರಿ (ಸಾಕ್ಷ್ಯಚಿತ್ರ).

ಭಾರತಿ ವಿಷ್ಣುವರ್ಧನ್ ಅವರ ಬಾಲ್ಯದಿಂದ ಹಿಡಿದು ಇಲ್ಲಿಯವರೆಗಿನ ಜೀವನವನ್ನು ತೆರೆದಿಡುವ ಪ್ರಯತ್ನ ಮಾಡುತ್ತಿದ್ದಾರೆ.
ಬಾಳ ಬಂಗಾರ ನೀನು ಇದು ಭಾರತಿ ಅವರಿಗೆ ಒಳ್ಳೆ ಹೆಸರು ತಂದುಕೊಟ್ಟ ನೃತ್ಯ ಹಾಡು. ಈ ಹಾಡು ಕೇಳಿದಾಗಲೆಲ್ಲ ಹಣೆತುಂಬಾ ಬೊಟ್ಟು ಇಟ್ಟು ರೇಷ್ಮೆ ಸೀರೆಯುಟ್ಟು ಲವಲವಿಕೆಯಿಂದ ಕುಣಿವ ಭಾರತಿ ವಿಷ್ಣುವರ್ಧನ್ ಅವರ ಚಿತ್ರ ಕಣ್ಮುಂದೆ ಹಾಗೆ ಸುಳಿದು ಬಿಡುತ್ತದೆ.

ಇದೇ ಬಾಳ ಬಂಗಾರ ಎನ್ನುವ ಹೆಸರನ್ನೇ ಡಾಕ್ಯುಮೆಂಟರಿಗೆ ಇಡಲಾಗಿದೆ. ಸುಮಾರು 2.30 ತಾಸಿನ ಈ ಸಾಕ್ಷ್ಯಚಿತ್ರಕ್ಕೆ ಅನಿರುಧ್ ಕಥೆ ಸಂಭಾಷಣೆ ಬರೆದು ಅವರೇ ಸಿದ್ಧಪಡಿಸುತ್ತಿದ್ದಾರೆ. ಪ್ರತಿದಿನ ಈ ಡಾಕ್ಯುಮೆಂಟರಿಗಾಗಿ ಆರ್ಯವರ್ಧನ್ ತಮ್ಮ ಅಮೂಲ್ಯ ಸಮಯವನ್ನು ಮೀಸಲಿಟ್ಟಿದ್ದಾರೆ. ಇನ್ನು ಮನೆಯಲ್ಲಿ ಸುಮ್ಮನೆ ಕೂರದ ಅನಿರುಧ್ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವುದು ಮಾಡುತ್ತಾರೆ. ಪತ್ನಿ ಕೀರ್ತಿವರ್ಧನ್, ಅತ್ತೆ ಭಾರತಿಗೆ ಮನೆಯ ಕೆಲಸಕ್ಕೂ ಆಗಾಗ ಕೈಜೋಡಿಸುತ್ತಾರಂತೆ.

ಸಿಕ್ಕಿರುವ ಸಮಯವನ್ನು ವ್ಯರ್ಥ ಮಾಡಬಾರದು. ಏನಾದರೂ ಹೊಸತನ್ನು ಕಲಿಯುವುದು ಓದುವುದು ಮಾಡಬೇಕು. ಹೊಸ ಹೊಸ ವಿಚಾರಗಳನ್ನು ಓದಿ ಜ್ಞಾನಭಂಡಾರ ಹೆಚ್ಚಿಸಿಕೊಳ್ಳಬೇಕು ಎನ್ನುವುದು ಆರ್ಯವರ್ಧನ್ ಅಂಬೋಣ.

ಜೊತೆ ಜೊತೆಯಲ್ಲಿ ಬರುವ ಮೊದಲಿನ ಅನಿರುಧ್ ಈಗಿನ ಆರ್ಯವರ್ಧನ್ ಗೂ ಬಹಳ ಅಂತರವೇನೂ ಇಲ್ಲ. ಅಷ್ಟಕ್ಕೂ ಜೊತೆಜೊತೆಯಲ್ಲಿ ಧಾರಾವಾಹಿಯಯಲ್ಲಿ ನಟಿಸುವುದಕ್ಕೆ ಅವರನ್ನು ಒಪ್ಪಿಸಿದ್ದು ಬೇರೆಯಾರೂ ಅಲ್ಲ ಪುತ್ರಿ ಶ್ಲೋಕ. 
ಹೊಸ ಸವಾಲುಗಳನ್ನು ಎದುರಿಸಲು ಇಷ್ಟಪಡುವ ತಾವು ಜೊತೆಜೊತೆಯಲ್ಲಿ ಧಾರಾವಾಹಿಯನ್ನು ಸವಾಲಾಗಿಯೇ ಸ್ವೀಕರಿಸಿದ್ದೆ. ಹೊಸ ಆಯಾಮಗಳನ್ನು ಬಹಳ ವಿವರವಾಗಿ ನಾಟಕದಲ್ಲಾಗಲೀ ಸಿನಿಮಾದಲ್ಲಾಗಲೀ ಅಷ್ಟಾಗಿ ಬಿಚ್ಚಿಡಲು ಸಾಧ್ಯವಿಲ್ಲ. ಕಿರುತೆರೆ ತಲುಪಿರುವಷ್ಟೂ ಯಾವುದೇ ಮಾಧ್ಯಮ ಇಷ್ಟು ಸುಲಭವಾಗಿ ಜನರನ್ನು ಅದೂ ಗ್ರಾಮೀಣ ಭಾಗದಲ್ಲಿ ತಲುಪಿದೆ. ಜನರ ಪ್ರೀತಿ ಹಾರೈಕೆ ಆಶೀರ್ವಾದವೇ ಈ ಯಶಸ್ಸಿಗೆ ಕಾರಣ ಎಂದು ಅನಿರುಧ್ ಬಹಳ ವಂದನಾಪೂರ್ವಕವಾಗಿ ಹೇಳುತ್ತಾರೆ.

-ವಿಶೇಷ ಸಂದರ್ಶನ ಸಂಧ್ಯಾ ಉರಣ್ ಕರ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com