ಆಸ್ಟ್ರೇಲಿಯಾದಲ್ಲಿ ಹಾಡಿ ಕುಣಿಯಲು 'ತ್ರಿವಿಕ್ರಮ' ಇನ್ನೂ ಕಾಯಬೇಕು!

ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ತ್ರಿವಿಕ್ರಮ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.  ಎಲ್ಲವೂ ಅಂದುಕೊಂಡಂತೆ ಆದರೆ  ಸಹನಾ ಮೂರ್ತಿ ನಿರ್ದೇಶನದ ಈ ಚಿತ್ರ ವಿ. ರವಿಚಂದ್ರನ್ ಜನ್ಮದಿನದಂದು (ಮೇ 30) ತೆರೆ ಕಾಣಬೇಕಿತ್ತು.
ಆಸ್ಟ್ರೇಲಿಯಾದಲ್ಲಿ ಹಾಡಿ ಕುಣಿಯಲು ತಯಾರಾದ 'ತ್ರಿವಿಕ್ರಮ'
ಆಸ್ಟ್ರೇಲಿಯಾದಲ್ಲಿ ಹಾಡಿ ಕುಣಿಯಲು ತಯಾರಾದ 'ತ್ರಿವಿಕ್ರಮ'

ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ತ್ರಿವಿಕ್ರಮ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.  ಎಲ್ಲವೂ ಅಂದುಕೊಂಡಂತೆ ಆದರೆ  ಸಹನಾ ಮೂರ್ತಿ ನಿರ್ದೇಶನದ ಈ ಚಿತ್ರ ವಿ. ರವಿಚಂದ್ರನ್ ಜನ್ಮದಿನದಂದು (ಮೇ 30) ತೆರೆ ಕಾಣಬೇಕಿತ್ತು. ಆದರೆ ಇದೀಗ ದೇಶಾದ್ಯಂತ ಕೊರೋನಾ ಹಾವಳಿ ಇರುವ ಕಾರಣ ಎಲ್ಲವೂ ಅನಿಶ್ಚಿತವಾಗಿದೆ. 

ಬೆಂಗಳೂರು, ದಾಂಡೇಲಿ, ರಾಜಸ್ಥಾನ ಮತ್ತು ಬ್ಯಾಂಕಾಕ್‌ನ ವಿವಿಧ ಸ್ಥಳಗಳ ಚಿತ್ರೀಕರಣ ನಡೆಸಿರುವ ತ್ರಿವಿಕ್ರಮ ತಂಡವು ಈಗ ಎರಡು ಹಾಡುಗಳ ಚಿತ್ರೀಕರಣವನ್ನಷ್ಟೇ ಬಾಕಿ ಉಳಿಸಿಕೊಂಡಿದೆ. ಈ ಹಾಡಿನ ದೃಶ್ಯಗಳನ್ನು ಆಸ್ಟ್ರೇಲಿಯಾದಲ್ಲಿ ಶೂಟಿಂಗ್ ನಡೆಸಲು ತೀರ್ಮಾನಿಸಲಾಗಿದೆ. ನಿರ್ದೇಶಕ ನರಸಿಂಹ ಲಾಕ್ ಡೌನ್ ಮುಗಿಯುವವರೆಗೆ ಕಾದು ಬಳಿಕ ಎರಡು ಹಾಡಿನ ಚಿತ್ರೀಕರಣ ನಡೆಸಲು ತೀರ್ಮಾನಿಸಿದ್ದಾರೆ.

"ಏಪ್ರಿಲ್ 14 ನಾವು ಶೂಟಿಂಗ್‌ನ ಕೊನೆಯ ಹಂತ ತಲುಪಬೇಕಿತ್ತು. ನಾವು ಆಸ್ಟ್ರೇಲಿಯಾದಲ್ಲಿರಬೇಕಿತ್ತು. ಆದರೆ ಇದೀಗ ಅದು ಸಾಧ್ಯವಿಲ್ಲ. ನಾವು ಈಗ ಆಸ್ಟ್ರೇಲಿಯಾ ಬದಲಾಗಿ ಬೇರೆ ಸ್ಥಳದಲ್ಲಿ ಶುಟಿಂಗ್ ನಡೆಸುವುದು ಸಹ ಸಾಧ್ಯವಿಲ್ಲ ಎಂಬ ಸ್ಥಿತಿಯಲ್ಲಿದ್ದೇವೆ. ಏಕೆಂದರೆ ಪ್ರೊಡಕ್ಷನ್ ಹೌಸ್ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮುಂಗಡ ಮೊತ್ತವನ್ನು ಪಾವತಿಸಿದೆ. ಆದ್ದರಿಂದ ಬೇರೆ ಸ್ಥಳದ ಬಗೆಗೆ ಯೋಚಿಸಲು ಸಾಧ್ಯವಾಗುವುದಿಲ್ಲ" ಎಂದು ನಿರ್ದೇಶಕರು ಹೇಳಿದ್ದಾರೆ.

"ಕೊರೋನಾವೈರಸ್ ಹಾವಳಿಯು ಅಲ್ಲಿ ಶೂಟಿಂಗ್ ಗೆ ಅನುಮತಿ ಸಿಕ್ಕ ಬಳಿಕ ಬಿಗಡಾಯಿಸಿದ್ದು ನಾವು ಸಾಕಷ್ಟು ಕಾರ್ಯವಿಧಾನಗಳನ್ನು ಅನುಸರಿಸಬೇಕಾಗಿದೆ. ಮೊದಲಿಗಿಂತ ಭಿನ್ನ ಸನ್ನಿವೇಶವಿದ್ದು ನಾವೀಗ ಇನ್ನಷ್ಟು ಕಠಿಣ ಪರಿಸ್ಥಿತಿಯಲ್ಲಿದ್ದೇವೆ. ಪ್ರೊಡಕ್ಷನ್ ಹೌಸ್, ನಟರು ಮತ್ತು ಇತರರು ಲಾಕ್‌ಡೌನ್ ಮುಗಿಯುವುದನ್ನು ಕಾಯುತ್ತಿದ್ದಾರೆ.ಮುಂದಿನ ಕ್ರಮವನ್ನು ನಾವು ಚರ್ಚಿಸಿ ತೀರ್ಮಾನಿಸುತ್ತೇವೆ"

ಹೈ ವೋಲ್ಟೇಜ್ ಲವ್ ಸ್ಟೋರಿ ಎಂಬ ಟ್ಯಾಗ್ ಲೈನ್‌ನೊಂದಿಗೆ ಬರುವ ತ್ರಿವಿಕ್ರಮ, ಆಕಾಂಕ್ಷಾ ಶರ್ಮಾ ಪಾಲಿಗೆ ಚೊಚ್ಚಲ ಚಿತ್ರವಾಗಲಿದೆ. ಗೌರಿ ಎಂಟರ್‌ಟೈನರ್ಸ್‌ನ ಬ್ಯಾನರ್ ಅಡಿಯಲ್ಲಿ ಸೊಮ್ಮಣ್ಣ ಮತ್ತು ಸುರೇಶ್ ನಿರ್ಮಿಸುತ್ತಿರುವ ಈ ಚಿತ್ರ ನಟ ರೋಹಿತ್ ರಾಯ್ ಅವರ ಕನ್ನಡ ಚಿತ್ರೋದ್ಯಮ ಪಾದಾರ್ಪಣೆಗೆ ಸಾಕ್ಷಿಯಾಗಲಿದೆ. ಅವರು ಇದರಲ್ಲಿ ವಿಲನ್ ಪಾತ್ರಧಾರಿಯಾಗಿರಲಿದ್ದಾರೆ. ರೊಮ್ಯಾಂಟಿಕ್ ಡ್ರಾಮಾದಲ್ಲಿ  ಅಕ್ಷರ ಗೌಡ, ಚಿಕ್ಕಣ್ಣ ಸಾಧು ಕೋಕಿಲಾ, ಸುಚೇಂದ್ರ ಪ್ರಸಾದ್, ಶಿವಮಣಿ ಆದಿ ಲೋಕೇಶ್ ಮತ್ತು ತೆಲುಗು ನಟ ಜಯಪ್ರಕಾಶ್ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸುತ್ತಿದ್ದರೆ, ಸಾಹಿತ್ಯವನ್ನು ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಸಂತೋಷ್ ರೈ ಪಾಥಜೆ ಮತ್ತು ಗುರು ಪ್ರಶಾಂತ್ ರಾಯ್ ಛಾಯಾಗ್ರಾಹಕರಾಗಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com