ಕೊರೋನಾ ಯೋಧರಿಗಾಗಿ 10 ಸಾವಿರ ಮಾಸ್ಕ್ ತಯಾರಿಸಿ ಮಾದರಿಯಾದ ನಟಿ ಅಮೂಲ್ಯ ದಂಪತಿ 

ಸ್ಯಾಂಡಲ್ ವುಡ್ ನಟಿ ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ತಾವೆಂದಿಗೂ ಸಮಾಜ ಸೇವೆಗೆ ಮುಂದೆಂದು ಸಾಬೀತು ಪಡಿಸುತ್ತಾ ಬಂದಿದ್ದಾರೆ. ದೇಶಾದ್ಯಂತ ಕೊರೋನಾ ಹಾವಳಿ ಇರುವ ಈ ದಿನಗಳಲ್ಲಿ ಸಹ ದಂಪತಿಗಳು ವೈದ್ಯರು ಹಾಗೂ ಪೊಲೀಸರಿಗಾಗಿ 10 ಸಾವಿರ ಮಾಸ್ಕ್‌ ತಯಾರಿಸಲು ಮುಂದಾಗಿದ್ದಾರೆ.
ನಟಿ ಅಮೂಲ್ಯ ದಂಪತಿ

ಈ ಹಿಂದೆ ರಾಜ್ಯದ ನೆರೆ, ಬರ ಪರಿಸ್ಥಿತಿಯಲ್ಲಿ  ಆರ್‌ಎಸ್‌ಎಸ್ ಸಂಘಟನೆ ಜತೆ ಸೇರಿ  1 ಟನ್ ಅಕ್ಕಿ ನೀಡಿದ್ದ ನಟಿ ಅಮೂಲ್ಯ ದಂಪತಿ,ಈಗ ಮತ್ತೆ ನೆರವಿಗೆ ನಿಂತಿದ್ದಾರೆ.

ತಮ್ಮ ಕಾರ್ಯದ ಬಗೆಗೆ ಸಾಮಾಜಿಕ ತಾಣದಲ್ಲಿ ಬರೆದುಕೊಂಡಿರುವ ಜಗದೀಶ್ "ಲಾಕ್ ಡೌನ್ ಈ ಬಿಕ್ಕಟ್ಟಿನಲ್ಲಿ ಮಹಿಳಾ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜರಾಜೇಶ್ವರಿ ನಗರದಿಂದ 25ಕ್ಕೂ ಹೆಚ್ಚು ಟೈಲರ್‌ಗಳನ್ನು ನೇಮಿಸುವ ಮೂಲಕ ನಾವು ಪ್ರಸ್ತುತ 10000 ಮಾಸ್ಕ್ ಗಳನ್ನು  ಉತ್ಪಾದಿಸುತ್ತಿದ್ದೇವೆ. ಈ ಮಾಸ್ಕ್ ಗಳನ್ನು ಅಗತ್ಯವಿರುವ  ಎಲ್ಲಾ ಕರೋನಾ ಯೋಧರಿಗೆ ನೀಡಲಾಗುವುದು " ಎಂದಿದ್ದಾರೆ 

ಏನೇ ಆದರೂ ನಟ ನಟಿಯರು, ಸೆಲೆಬ್ರಿಟಿಗಳು ಇಂತಹಾ ಸಮಾಜಸೇವೆ ಮಾಡುವ ಊಲಕ ಇತರರಿಗೆ ಮಾದರಿಯಾಗುವುದನ್ನು ನಾವು ಮೆಚ್ಚಲೇಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com