ಹಿಟ್ ಅಥವಾ ಫ್ಲಾಪ್, ನಾನು ನಟನಾಗಿ ಫೇಲ್ ಆಗಬಾರದು: ಫಿಲ್ಮಿ ಜರ್ನಿಯನ್ನು ರಿವೀಲ್ ಮಾಡಿದ ಗೋಲ್ಡನ್ ಸ್ಟಾರ್ ಗಣೇಶ್

ಗೋಲ್ಡನ್ ಸ್ಟಾರ್ ಗಣೇಶ್ ಸ್ಯಾಂಡಲ್ ವುಡ್ ನಾಯಕನಾಗಿ 14 ವರ್ಷಗಳು! ಈ ಬಗ್ಗೆ ಅವರನ್ನು ಕೇಳಿದರೆ "ಟೈಮ್ ಫ್ಲೈಸ್" ಎಂದು ಒಂದು ಮುಗುಳುನಗು ಚೆಲ್ಲುತ್ತಾರೆ. . "ನನ್ನ ಅಭಿಮಾನಿಗಳು ನನ್ನನ್ನು ಎಚ್ಚರಿಸಿದಾಗಲೇ ನಾನು ಈ ಬಗ್ಗೆ ತಿಳಿದದ್ದು ನನ್ನಂತೆಯೇ ನಿರ್ದೇಶಕ ಯೋಗರಾಜ್ ಭಟ್ ಸಹ ಮೊನ್ನೆ ಕರೆಮಾಡಿ ನಾವು ಕಳೆದ 200 ವರ್ಷಗಳಿಂದ ಇಲ್ಲಿದ್ದೇವೆಂದು ಭಾವಿಸಿದ್ದೆ ಆದರೆ ಇದು
ಗೋಲ್ಡನ್ ಸ್ಟಾರ್ ಗಣೇಶ್
ಗೋಲ್ಡನ್ ಸ್ಟಾರ್ ಗಣೇಶ್

ಗೋಲ್ಡನ್ ಸ್ಟಾರ್ ಗಣೇಶ್ ಸ್ಯಾಂಡಲ್ ವುಡ್ ನಾಯಕನಾಗಿ 14 ವರ್ಷಗಳು! ಈ ಬಗ್ಗೆ ಅವರನ್ನು ಕೇಳಿದರೆ "ಟೈಮ್ ಫ್ಲೈಸ್" ಎಂದು ಒಂದು ಮುಗುಳುನಗು ಚೆಲ್ಲುತ್ತಾರೆ. . "ನನ್ನ ಅಭಿಮಾನಿಗಳು ನನ್ನನ್ನು ಎಚ್ಚರಿಸಿದಾಗಲೇ ನಾನು ಈ ಬಗ್ಗೆ ತಿಳಿದದ್ದು ನನ್ನಂತೆಯೇ ನಿರ್ದೇಶಕ ಯೋಗರಾಜ್ ಭಟ್ ಸಹ ಮೊನ್ನೆ ಕರೆಮಾಡಿ ನಾವು ಕಳೆದ 200 ವರ್ಷಗಳಿಂದ ಇಲ್ಲಿದ್ದೇವೆಂದು ಭಾವಿಸಿದ್ದೆ ಆದರೆ ಇದು ಕೇವಲ  14 ವರ್ಷಗಳಷ್ಟೇ ಉರುಳಿದೆ ಎಂದಿದ್ದರು. ನಾನು ಟಿವಿಯಲ್ಲಿ ನಿರೂಪಕನಾಗಿ ಹಾಗೂ ಸ್ಯಾಂಡಲ್ ವುಡ್ ಪ್ರವೇಶಿಸಿ ಇದಾಗಲೇ ಇಪ್ಪತ್ತು ವರ್ಷವಾಗಿದೆ. ನಾಯಕ ನಟನಾಗಿ ಗುರುತಿಸಿಕೊಂಡು 14 ವರ್ಷ ಸಂದಿದೆ" ಗಣೇಶ್ ಹೇಳೀದ್ದಾರೆ.

ಈ ಲಾಕ್‌ಡೌನ್ ಅವಧಿಯನ್ನು ತನ್ನ ಕುಟುಂಬದೊಂದಿಗೆ ಸಮಯ ಕಳೆಯಲು ಬಳಸಿಕೊಳ್ಳುತ್ತಿರುವ ನಟ ಗಣೇಶ್ ಸಮಾಜ ಸೇವೆಯನ್ನೂ ನಡೆಸುತ್ತಿದ್ದಾರೆ.ಗಣೇಶ್ ಕೂಡ ತನ್ನ ಚಲನಚಿತ್ರಗಳನ್ನು ನೋಡುವ ಮೂಲಕ ನಟನಾಗಿ ತನ್ನನ್ನು ತಾನು ಮರುಮೌಲ್ಯಮಾಪನ ಮಾಡಿಕೊಳ್ಳುತ್ತಿದ್ದಾರೆ.“ನಾನು ನನ್ನ ಹಳೆಯ ಚಲನಚಿತ್ರಗಳನ್ನು ದೂರದರ್ಶನದಲ್ಲಿ ನೋಡುತ್ತಿದ್ದೇನೆ. ನಾನು ಮಾಡಿರುವ ಪಾತ್ರಗಳು, ಕಥೆಗಳನ್ನು ವಿಶ್ಲೇಷಿಸಲು ಇದು ನನಗೆ ಸಹಾಯ ಮಾಡುತ್ತದೆ, ಏಕೆಂದರೆ ನಾನು ಕೆಲವು ಪಾತ್ರಗಳನ್ನು ಇನ್ನಷ್ಟು ಉತ್ತಮವಾಗಿ ಮಾಡಬಹುದಿತ್ತು ಎಂದು ನಾನು ಭಾವಿಸುತ್ತೇನೆ, 

“ನಟನಾಗುವ ಮೊದಲೇ, ನನ್ನ ಕಾಲೇಜು ವರ್ಷಗಳಲ್ಲಿ, ನಾನು ಒಂದೇ ಕಡೆ ಕುಳಿತವನಲ್ಲ. . ನನ್ನ ತರಗತಿಗಳನ್ನು ಪೂರ್ಣಗೊಳಿಸಿದ ನಂತರ, ನಾನು ಪೂರ್ವಾಭ್ಯಾಸ ಅಥವಾ ತರಬೇತಿ ಕೇಂದ್ರಗಳಿಗೆ ತೆರಳುತ್ತಿದ್ದೆ. ನಾನು ಅರೆಕಾಲಿಕ ಉದ್ಯೋಗವನ್ನೂ ಮಾಡಿದ್ದೇನೆ. ಬ್ರ್ಯಾಂಡ್ ರಿವ್ಯೂ  ಮಾಡಿದ್ದೇನೆ. ಅದಕ್ಕಾಗಿ ನಮಗೆ ಗಂಟೆಗಳ ಆಧಾರದಲ್ಲಿ ಸಂಬಳ ನೀಡಲಾಗುತ್ತಿತ್ತು. ನನ್ನ ಪಾಕೆಟ್ ಮನಿಗಾಗಿ ಗಿ ಮತ್ತು ಚಲನಚಿತ್ರಗಳನ್ನು ನೋಡಲು ನಾನು ಇದನ್ನೆಲ್ಲಾ ಮಾಡಿದ್ದೆ. . ಸುಮ್ಮನೆ ಕುಳಿತುಕೊಳ್ಳುವುದು  ಎಂದರೆ ನನಗೆಂದಿಗೂ ಆಗುವುದಿಲ್ಲ.ನಾನು ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ನಂತರ, ಇದೇ ಮೊದಲ ಬಾರಿಗೆ ಇಷ್ಟು ಫ್ರೀ ಟೈಮ್ ನೋಡುತ್ತಿದ್ದೇನೆ."

ಲಾಕ್ ಡೌನ್ ಘೋಷಣೆಗೆ ಮುನ್ನ ನಿರ್ದೇಶಕ ಸುನಿಯ "ಸಖತ್" ಚಿತ್ರದ ಶೂಟಿಂಗ್ ಒಂದು ಶೆಡ್ಯೂಲ್ ಮುಗಿಸಿದ್ದ ನಟ ಗಣೇಶ್ ಮತ್ತೊಮ್ಮೆ ಶೂಟಿಂಗ್ ಪ್ರಾರಂಭಿಸುವ ಉತ್ಸಾಹದಲ್ಲಿದ್ದರು. "ನಾನು ಮತ್ತೊಮ್ಮೆ ಪೋಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಲಬೇಕು ಎಂದು ಭಾವಿಸಿದ್ದೇವೆ. " ಅವರು ಹೇಳಿದ್ದಾರೆ.

ಟಾಕ್ ಶೋ ಕಾಮಿಡಿ ಟೈಮ್ ಮೂಲಕ ನಿರೂಪಕರಾಗಿ ಖ್ಯಾತಿ ಗಳಿಸಿದ ಗಣೇಶ್ ತನಗೆ ಆ ಕಾರ್ಯಕ್ರಾಮ ದೊಡ್ಡ ಉತ್ತೇಜನ ಕೊಟ್ಟಿತ್ತು ಎನ್ನುತ್ತಾರೆ. ಸಿನೆಮಾದಲ್ಲಿ ಅವರ ಮೊದಲ ಪಾತ್ರ "ಟಪೋರಿ"ಯಲ್ಲಿ ಖಳನಾಯಕನ ಪಾತ್ರದಿಂದ ಪ್ರಾರಂಭಗೊಂಡಿತ್ತು. ನಂತರ ಅವರು 2006 ರಲ್ಲಿ "ಚೆಲ್ಲಾಟ"ದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು. ಅಲ್ಲಿಯವರೆಗೆ ಅನೇಕ ಚಿತ್ರಗಳಲ್ಲಿ ಪೋಷಕ ಪಾತ್ರ ನಿರ್ವಹಿಸಿದ್ದ ನಟನಿಗೆ "ಮುಂಗಾರುಮಳೆ" ಚಿತ್ರ ಬ್ರೇಕ್ ಕೊಟ್ಟಿತ್ತು.“ಹಿಟ್ ಅಥವಾ ಫ್ಲಾಪ್ ಒಬ್ಬರ ವೃತ್ತಿಜೀವನದ ಭಾಗವಾಗಿರುತ್ತದೆ. ಆದರೆ ಒಬ್ಬ ನಟನಾಗಿ  ಎಂದೂ ಫೇಲ್ ಆಗಬಾರದು. ಹಾಗೇನಾದರೂ ಆದಲ್ಲಿ ಅದು ನಿಮ್ಮ ವೃತ್ತಿಜೀವನದ ಅಂತ್ಯ. ಪ್ರಯೋಗಗಳು ಮತ್ತು ಪ್ರೇಕ್ಷಕರೊಂದಿಗೆ ಸಂಪರ್ಕ ಹೊಂದಲಾಗದ ಚಿತ್ರಗಳಲ್ಲಿಯೂ ಅಭಿನೈಸಿರುವುದು ಇದೆ. ಆದರೆ, ಒಬ್ಬ ನಟನಾಗಿ ನಾನು ಆ ಪಾತ್ರವನ್ನು ಅನುಭವಿಸಿದ್ದೇನೆ.  ನಾನು ಅತ್ಯುತ್ತಮ ಹಿಟ್‌ಗಳನ್ನು ಸಂತೋಷದಿಂದ ಒಪ್ಪಿಕೊಂಡಿದ್ದೇನೆ.  ನನ್ನ ನಿರ್ದೇಶಕ ಮತ್ತು ನಿರ್ಮಾಪಕರು ಸಂತೋಷವಾಗಿರುವುದನ್ನು ನೋಡಿ ಸಂತೋಷಪಟ್ಟಿದ್ದೇನೆ. ಆದರೆ ಅದೇ ಸಮಯದಲ್ಲಿ, ನಾನು ಸೂಪರ್ ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾಗಲೆಲ್ಲಾ ನನಗೆ ಭಯವಾಗುತ್ತಿತ್ತು.

“ನಾನು ಸಂಭಾಷಣೆ ವಿತರಣೆ ಮತ್ತು ನಟನೆ ಎಲ್ಲಾ ಕ್ಷೇತ್ರದಲ್ಲಿ ತೊಡಗಿದ್ದೇನೆ.  ಸಿನೆಮಾದ ಬ್ಯುಸಿನೆಸ್ ಅಂಶಗಳನ್ನು ಕಲಿಯಲು ನಾನೆಂದಿಗೂ ಹೋಗಿಲ್ಲ. ಹಾಗಾಗಿ ನನಗೆ ಯಾವ ಭಯವೂ ಇರಲಿಲ್ಲ.ಒಮ್ಮೆ  ಮುಂಗಾರು ಮಳೆ ಯಶಸ್ವಿಯಾದಾಗ ನನ್ನ ಪ್ರತಿಯೊಂದು ಚಿತ್ರವೂ ಹಾಗೆಯೇ ಇರಲಿದೆ  ಎಂದು ನಾನು ಭಾವಿಸಿದೆ. ಹೇಗಾದರೂ, ನನ್ನ ಮೊದಲ ಸೋಲನ್ನು ನಾನು ಕಂಡಾಗ ಅದು ನನ್ನ 11 ಅಥವಾ 12 ನೇ ಚಿತ್ರವಿರಬೇಕು. ಸೂಪರ್ ಹಿಟ್,ಎವರೇಜ್,  ಮತ್ತು ಫ್ಲಾಪ್ ಫಿಲ್ಮ್ ನಡುವಿನ ವ್ಯತ್ಯಾಸವನ್ನು ನಾನು ತಿಳಿದುಕೊಂಡೆ" ನಟ ನೆನಪಿಸಿಕೊಳ್ಳುತ್ತಾರೆ.

"ನೀವು ಹಿಟ್‌ಗಳ ಸರಣಿಯನ್ನು ನೀಡಿ ಅಥವಾ ಬಿಡಿ ದಿನದ ಕೊನೆಯಲ್ಲಿ, ನಟನಾಗಿ, ನೀವು ಪ್ರತಿ ಯೋಜನೆಯೊಂದಿಗೆ ಹೊಸ ಕರೆ ತೆಗೆದುಕೊಳ್ಳಬೇಕಾಗುತ್ತದೆ. ”ಇಂದು ಗಣೇಶ್ ನಟನೆ, ನಿರ್ದೇಶನ, ನಿರ್ಮಾಣ ಮತ್ತು ಗಾಯನದಲ್ಲಿ ತಮ್ಮ  ಕೈಯಾಡಿಸಿದ್ದಾರೆ.ಆದರೆ ಅವರು ಹೇಳಿದಂತೆ , “ನನ್ನ 14 ವರ್ಷಗಳ ಪ್ರಯಾಣದಲ್ಲಿ ಹೆಚ್ಚು ಹೇಳಬೇಕಾದುದಿಲ್ಲ ಬಹಳಷ್ಟು ಇದಾಗಲೇ ಗೊತ್ತಿದೆ. ಸಧ್ಯ ನಾನು "ಸಖತ್", ಯೋಗರಾಜ್ ಭಟ್ ಅವರ "ಗಾಳಿಪಟ 2" ಹಾಗೂ "ತ್ರ್ಬಲ್ ರೈಡಿಂಗ್" ಚಿತ್ರಗಳ ಶೂಟಿಂಗ್ ನಡೆಸಿದ್ದೇನೆ." 

ಕ್ವಾರಂಟೈನ್ ಪಾಠಗಳು

 ಕುಟುಂಬದೊಂದಿಗೆ ಲಾಕ್ ಡೌನ್ ಸಮಯವನ್ನು ಕಳೆಯುತ್ತಿರುವ ನಟ ಹಿತರೊಂದಿಗೆ ವೀಡಿಯೊ ಚಾಟಿಂಗ್ ಮಾಡುತ್ತಿರುತ್ತಾರೆ.  “ಜೀವನದ ಪ್ರತಿ ಕ್ಷಣವನ್ನು ಆನಂದಿಸಿ. ನಗುತ್ತಿರಿ,ಇತರರಿಗೆ ದಯೆತೋರಿ, ದಿನದ ಕೊನೆಯಲ್ಲಿ, ಬೇರೆ ಯಾವುದೂ ಮುಖ್ಯವಲ್ಲ. ಹಣ ಮತ್ತು ಸ್ಥಾನಮಾನವು ಇಲ್ಲಿ ಮೌಲ್ಯವನ್ನು ಹೊಂದಿರುವುದಿಲ್ಲ.  ಮಾನವೀಯತೆಯೊಂದೇ ಮುಖ್ಯವಾಗುತ್ತದೆ. ಕ್ವಾರಂಟೈನ್ ನಮಗೆ ಪ್ರತಿಯೊಂದನ್ನು ಕಲಿಸಿದೆ. "

ಗಣೇಶ್ ಅವರನ್ನು ಎಲ್ಲಿ ಯಾವಾಗ ಗೋಲ್ಡನ್ ಸ್ಟಾರ್ ಎಂದು ಹೇಳಲು ಪ್ರಾರಂಭಿಸಲಾಗಿತ್ತು?

“ಇದು ಮುಂಗಾರು ಮಳೆ ಹಾಗೂ ಹುಡುಗಾಟ ಚಿತ್ರಗಳು ಭಾರೀ ಹಿಟ್ ಆದ ನಂತರ ಚೆಲುವಿನ ಚಿತ್ತಾರ ಉತ್ತಮ ಪ್ರದರ್ಶನ ಕಾಣುತ್ತಿದ್ದಾಗ ನಿರ್ದೇಶಕ ನಿರ್ಮಾಪಕರಿಗೆ ನಾನು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ ಎಂದು ಭಾವನೆ ಮೂಡಿತ್ತು. ಆಗ ಪತ್ರಿಕೆಗಳು  ‘ಸ್ಯಾಂಡಲ್‌ವುಡ್‌ಗೆ ಸುವರ್ಣ ಸಮಯ’ ಎಂದು ಬರೆದಿದ್ದನ್ನು ಓದಿದ ನೆನಪು. ನನಗೆ ಆಗ ‘ಗೋಲ್ಡನ್ ಸ್ಟಾರ್’ ಎಂದು ಕರೆಯಲು ಪ್ರಾರಂಭಿಸಲಾಗಿತ್ತು. , ಅದು ನನ್ನ ಜೀವನದಲ್ಲಿ ವಿಶೇಷ ಕ್ಷಣ."

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com