ತಮಿಳು ನಟ ಸೂರ್ಯ ಸಿನಿಮಾಗಳಿಗೆ ನಿಷೇಧದ ಎಚ್ಚರಿಕೆ! 

ತಮಿಳುನಾಡಿನ ನಟ ಸೂರ್ಯ ಸಿನಿಮಾಗಳಿಗೆ ನಿಷೇಧ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. 

Published: 25th April 2020 08:36 PM  |   Last Updated: 25th April 2020 08:36 PM   |  A+A-


Tamil actor Suriya's films face ban after he takes wife Jyothika's next directly to OTT

ತಮಿಳು ನಟ ಸೂರ್ಯ ಸಿನಿಮಾಗಳಿಗೆ ನಿಷೇಧದ ಎಚ್ಚರಿಕೆ!

Posted By : Srinivas Rao BV
Source : The New Indian Express

ಚೆನ್ನೈ: ತಮಿಳುನಾಡಿನ ನಟ ಸೂರ್ಯ ಸಿನಿಮಾಗಳಿಗೆ ನಿಷೇಧ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. 

ಮಲ್ಟಿಪ್ಲೆಕ್ಸ್, ಥಿಯೇಟರ್ ನ ಮಾಲಿಕರ ಸಂಘ ಈ ಎಚ್ಚರಿಕೆ ನೀಡಿದೆ. ಸೂರ್ಯ ಅವರ ಪತ್ನಿ ಜ್ಯೋತಿಕಾ ನಟನೆಯ ಸಿನಿಮಾ ಇದಕ್ಕೆ ಕಾರಣ. ಹೌದು, ಜ್ಯೋತಿಕಾ ನಟನೆಯ 'ಪೊಣ್ ಮಗಳ್ ವಂದಾಳ್' (ಹೆಣ್ಣು ಮಗು ಬಂದಳು) ಎಂಬ ಸಿನಿಮಾವನ್ನು ಥಿಯೇಟರ್, ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಡುಗಡೆ ಮಾಡದೇ ಓವರ್ ದಿ ಟಾಪ್ (ಒಟಿಟಿ) ವೇದಿಕೆಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿರುವುದರಿಂದ ಕೆರಳಿರುವ ಮಲ್ಟಿಪ್ಲೆಕ್ಸ್, ಥಿಯೇಟರ್ ನ ಮಾಲಿಕರ ಸಂಘ ಸೂರ್ಯ ನಟನೆಯ ಸಿನಿಮಾಗಳನ್ನು ಹಾಗೂ ಅವರ ಪ್ರೊಡಕ್ಷನ್ ಸಂಸ್ಥೆ 2ಡಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗುವ ಚಿತ್ರಗಳನ್ನು ನಿಷೇಧಿಸುವುದಾಗಿ ಎಚ್ಚರಿಸಿದೆ. 

@PrimeVideoIN ಹಕ್ಕಿಗಳನ್ನು ಪಡೆದಿದ್ದು, ಒಟಿಟಿಯಲ್ಲಿ ಪತ್ನಿ ನಟಿಸಿರುವ ಸಿನಿಮಾ ಬಿಡುಗಡೆ ಮಾಡುವುದಾಗಿ ಸೂರ್ಯ ಟ್ವೀಟ್ ಮೂಲಕ ತಿಳಿಸಿದ್ದರು. ಇದನ್ನು ವಿರೋಧಿಸಿರುವ ಮಲ್ಟಿಪ್ಲೆಕ್ಸ್, ಥಿಯೇಟರ್ ನ ಮಾಲಿಕರ ಸಂಘದ ಪ್ರಧಾನ ಕಾರ್ಯದರ್ಶಿ ಪನ್ನೀರ್ ಸೆಲ್ವಂ  ಸೂರ್ಯ ಅವರು ತಮ್ಮ ನಿರ್ಧಾರ ಬದಲಾವಣೆ ಮಾಡದೇ ಇದ್ದಲ್ಲಿ ಸೂರ್ಯ ಅವರ ಮುಂದಿನ ಸಿನಿಮಾಗಳಿಗೆ ನಿಷೇಧ ವಿಧಿಸಲಾಗುವುದು ಎಂದು ಹೇಳಿದ್ದಾರೆ. 

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp