'ಹಗ್ಗ' ಹಿಡಿದು ಮತ್ತೆ ಕನ್ನಡಕ್ಕೆ ಬರುತ್ತಿದ್ದಾರೆ ಬೆಸಂಟ್ ರವಿ

ನಿರ್ದೇಶಕ ಅವಿನಾಶ್ ರವಿಕುಮಾರ್ ಅಲಿಯಾಸ್ ಬೆಸಂಟ್ ರವಿ ಅವರನ್ನು ಹಗ್ಗ ಸಿನಿಮಾಗೆ ಕರತರಲು ಯಶಸ್ವಿಯಾಗಿದ್ದಾರೆ, ಈ ಹಿಂದೆ ಪುನೀತ್ ನಟನೆಯ ವೀರ ಕನ್ನಡಿಗ ಮತ್ತು ಸುದೀಪ್ ನಟನೆಯ ನಲ್ಲ ಸಿನಿಮಾಗಳಲ್ಲಿ ವಿಲ್ಲನ್ ಆಗಿ ರವಿ ಬಣ್ಣ ಹಚ್ಚಿದ್ದರು. ಸಂತು ಸ್ಟ್ರೈಟ್ ಫಾರ್ವರ್ಡ್ ರವಿ ನಟನೆಯ ಕನ್ನಡದ ಕೊನೆ ಸಿನಿಮಾವಾಗಿತ್ತು.

Published: 27th April 2020 12:25 PM  |   Last Updated: 27th April 2020 04:48 PM   |  A+A-


besant ravi

ಬೆಸಂಟ್ ರವಿ

Posted By : Shilpa D
Source : The New Indian Express

ಶಾರೂಕ್ ಖಾನ್​ ಮತ್ತು ದೀಪಿಕಾ ಪಡುಕೋಣೆ ಕಾಂಬಿನೇಷನ್​​ನಲ್ಲಿ ತೆರೆಕಂಡ ಚೆನ್ನೈ ಎಕ್ಸ್​ಪ್ರೆಸ್​ ಸಿನಿಮಾ  ವಿಲನ್​ ಆಗಿ ಮಿಂಚಿದ್ದವರಲ್ಲಿ ಪಂಚಭಾಷಾ ಕಲಾವಿದ ಬೆಸಂಟ್ ರವಿ ಕೂಡಾ ಒಬ್ಬರು. ಇವರು ಇದೀಗ ಸ್ಯಾಂಡಲ್​ವುಡ್​ನ ಹಗ್ಗ ಸಿನಿಮಾ ಮೂಲಕ ಕನ್ನಡಕ್ಕೆ ವಾಪಸ್ಸಾಗ್ತಿದ್ದಾರೆ.

ಸಿಲ್ವರ್ ಸ್ಕ್ರೀನ್ ಮೇಲೆ ತನ್ನ ನಟನಾ ಸಾಮರ್ಥ್ಯ ಮೂಲಕ ಪ್ರೇಕ್ಷಕರ ಗಮನವನ್ನು ಸೆಳೆದಂತ ಕನ್ನಡಿಗ  ರವಿ ”ಹಗ್ಗ” ಚಿತ್ರದಿಂದ ಮತ್ತೆ ಕನ್ನಡಕ್ಕೆ ಬರುತ್ತಿದ್ದಾರೆ. ಹೌದು ಮಹೇಶ್ ಬಾಬು, ಶಾರುಖ್ ಖಾನ್ , ರಿಡಿ. ಓಖಿಖ, ಪ್ರಭಾಸ್ , ಅಜಯ್ ದೇವಗನ್, ಮುಂತಾದ ಪರಭಾಷೆಯ ಸ್ಟಾರ್ ನಟರ ಜೊತೆ ಖಳನಾಯಕನಾಗಿ ಮಿಂಚಿದವರು.

ನಿರ್ದೇಶಕ ಅವಿನಾಶ್ ರವಿಕುಮಾರ್ ಅಲಿಯಾಸ್ ಬೆಸಂಟ್ ರವಿ ಅವರನ್ನು ಹಗ್ಗ ಸಿನಿಮಾಗೆ ತರಲು ಯಶಸ್ವಿಯಾಗಿದ್ದಾರೆ, ಈ ಹಿಂದೆ ಪುನೀತ್ ನಟನೆಯ ವೀರ ಕನ್ನಡಿಗ ಮತ್ತು ಸುದೀಪ್ ನಟನೆಯ ನಲ್ಲ ಸಿನಿಮಾಗಳಲ್ಲಿ ವಿಲ್ಲನ್ ಆಗಿ ರವಿ ಬಣ್ಣ ಹಚ್ಚಿದ್ದರು. ಸಂತು ಸ್ಟ್ರೈಟ್ ಫಾರ್ವರ್ಡ್ ರವಿ ನಟನೆಯ ಕನ್ನಡದ ಕೊನೆ ಸಿನಿಮಾವಾಗಿತ್ತು.

ಈ ಚಿತ್ರವನ್ನು ರಾಜ್ ಭಾರಧ್ವಾಜ್ ಮತ್ತು ವೇಣು ಭಾರಧ್ವಾಜ್ ವಸಂತ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದು, ಅವಿನಾಶ್. ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ವೇಣು ಭಾರಧ್ವಾಜ್ ನಾಯಕ ನಟನಾಗಿ, ಪ್ರಿಯಾಂಕ ಅರೋರ ನಾಯಕಿಯಾಗಿದ್ದಾರೆ.

ತಬಲನಾಣಿ, ಅವಿನಾಶ್, ಸುಧಾ ಬೆಳವಾಡಿ, ಸಂಜು ಬಸಯ್ಯ,ಅಪೂರ್ವಶ್ರೀ, ಉಮೇಶ್, ಸದಾನಂದ ಕಲಿ, ಪ್ರಿಯದರ್ಶಿನಿ, ವಂದನ, ಕಾವ್ಯ ಪ್ರಕಾಶ್, ರಂಗಣ್ಣ, ನಿಶಾಂತ್, ಸಿಂಬ, ದರ್ಶನ್,ವಿವೇಕ್, ಮುಖ್ಯ ಭೂಮಿಕೆಯಲ್ಲಿದ್ದು, ಕಥೆ, ಚಿತ್ರಕಥೆ,  ರಾಜ್ ಭಾರಧ್ವಾಜ್ ಸಂಗೀತ ನೀಡಿದ್ದಾರೆ.

 

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp