ಕಾರ್ಮಿಕ ದಿನದಂದು ರಾಬರ್ಟ್ ಚಿತ್ರ ತಂಡದಿಂದ ತೆರೆಯ ಹಿಂದಿನ ಹೀರೋಗಳಿಗೆ ವಿಶೇಷ ಗೌರವ

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ದರ್ಶನ್‌ ನಟನೆಯ 'ರಾಬರ್ಟ್‌' ಚಿತ್ರ ಈಗಾಗಲೇ ಬಿಡುಗಡೆ ಆಗಿರಬೇಕಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಿಲ್ಲ. ಹಾಗಂತ ಅಭಿಮಾನಿಗಳು ಬೇಸರ ಮಾಡಿಕೊಳ್ಳಬೇಕಾಗಿಲ್ಲ. ಅವರಿಗಾಗಿ ಒಂದಿಲ್ಲೊಂದು ಗಿಫ್ಟ್‌ ನೀಡುತ್ತಲೇ ಇದೆ ಚಿತ್ರತಂಡ.
ರಾಬರ್ಟ್ ಪೋಸ್ಟರ್
ರಾಬರ್ಟ್ ಪೋಸ್ಟರ್

ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ದರ್ಶನ್‌ ನಟನೆಯ 'ರಾಬರ್ಟ್‌' ಚಿತ್ರ ಈಗಾಗಲೇ ಬಿಡುಗಡೆ ಆಗಿರಬೇಕಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಿಲ್ಲ. ಹಾಗಂತ ಅಭಿಮಾನಿಗಳು ಬೇಸರ ಮಾಡಿಕೊಳ್ಳಬೇಕಾಗಿಲ್ಲ. ಅವರಿಗಾಗಿ ಒಂದಿಲ್ಲೊಂದು ಗಿಫ್ಟ್‌ ನೀಡುತ್ತಲೇ ಇದೆ ಚಿತ್ರತಂಡ.

ಕಾರ್ಮಿಕ ದಿನಾಚರಣೆ ಮೂಲಕ ಶ್ರಮಿಕ ವರ್ಗಕ್ಕೆ ಗೌರವ ಸಲ್ಲಿಸಲಾಗುತ್ತದೆ. ವಿವಿಧ ಸಂಸ್ಥೆಗಳು ರಜೆ ನೀಡುತ್ತವೆ. ಅದೇ ರೀತಿ ರಾಬರ್ಟ್ ಚಿತ್ರ ತಂಡ ಶ್ರಮಿಕ ವರ್ಗಕ್ಕೆ ವಿಶೇಷವಾಗಿ ಗೌರವ ಸಲ್ಲಿಸಲು ಮುಂದಾಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರತಂಡ ಆಗಾಗ ಸರ್ಪ್ರೈಸ್ ನೀಡುತ್ತಲೇ ಇದ್ದು, ಈಗಾಗಲೇ ಚಿತ್ರದ ಟೀಸರ್ ಹಾಗೂ ಮೂರು ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದೆ. ಆದರೆ ಈ ಬಾರಿ ಅಭಿಮಾನಿಗಳ ಜೊತೆಗೆ ಶ್ರಮಿಕ ವರ್ಗವನ್ನು ನೆನೆಯುವ ಮೂಲಕ ಅವರಿಗೆ ಗೌರವ ಸಲ್ಲಿಸುತ್ತಿದೆ. ಒಂದು ಚಿತ್ರ
ತಯಾರಾಗಬೇಕಾದರೆ ತೆರೆಯ ಹಿಂದಿನ ಹೀರೋಗಳು ಸಾಕಷ್ಟು ಶ್ರಮಿಸಬೇಕಾಗುತ್ತದೆ. ಇದರಲ್ಲಿ ಲೈಟ್ ಬಾಯ್ಸ್ ಸೇರಿದಂತೆ ಇತರೆ ದಿನಗೂಲಿ ನೌಕರರ ಪಾತ್ರ ಮಹತ್ವದ್ದು.

ಇದನ್ನರಿತ ಚಿತ್ರ ತಂಡ ಮೇ 1 ಅಂದರೆ ಇದೇ ಶುಕ್ರವಾರ ಕಾರ್ಮಿಕರಿಗಾಗಿಯೇ ಸಿದ್ಧಪಡಿಸಿದ ಗೀತೆಯೊಂದನ್ನು ಬಿಡುಗಡೆ ಮಾಡುತ್ತಿದೆ. ಈ ಮೂಲಕ ಕಾರ್ಮಿಕರಿಗೆ ಗೀತ ನಮನ ಸಲ್ಲಿಸುತ್ತಿದೆ. ಈಗಾಗಲೇ ಮೂರು ಹಾಡುಗಳೊಂದಿಗೆ ಅಭಿಮಾನಿಗಳು ಹಾಗೂ ಚಿತ್ರ ರಸಿಕರನ್ನು ರಂಜಿಸಿರುವ ಚಿತ್ರ ತಂಡ ಇದೀಗ ಕಾರ್ಮಿಕರನ್ನು ನೆನೆಯುತ್ತಿದೆ.

 ಪರದೆಯಲ್ಲಿ ಮ್ಯಾಜಿಕ್ ನಡೆಯಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದುಡಿದಿರುವ ಆಫ್‍ಸ್ಕ್ರೀನ್ ವಾರಿಯರ್ಸ್ ಕುರಿತು ರಾಬರ್ಟ್ ಚಿತ್ರ ತಂಡ ವಿಡಿಯೋ ಸಿದ್ಧಪಡಿಸಿದೆ. ಡಿ ಬಾಸ್ ಹಾಗೂ ರಾಬರ್ಟ್ ಕುರಿತ ಮೇಕಿಂಗ್ ವಿಡಿಯೋವನ್ನು ಕಾರ್ಮಿಕರ ದಿನ ಮೇ 1ರಂದು ಬೆಳಗ್ಗೆ 10.05ಕ್ಕೆ ಉಮಾಪತಿ ಫಿಲಂಮ್ಸ್ ಯೂಟ್ಯೂಬ್ ಚಾನಲ್‍ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com