ವಿಕ್ರಮ್ ರವಿಚಂದ್ರನ್ 'ತ್ರಿವಿಕ್ರಮ' ಆಡಿಯೋ ರೂ.50 ಲಕ್ಷಕ್ಕೆ ಮಾರಾಟ

ವಿಕ್ರಮ್ ರವಿಚಂದ್ರನ್ ಅಭಿನಯದ ತ್ರಿವಿಕ್ರಮ ಚಿತ್ರದ ಆಡಿಯೋ ಹಕ್ಕುಗಳನ್ನು 50 ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ನಾಯಕನಾಗಿರುವ ಚೊಚ್ಚಲ ಚಿತ್ರವಾಗಿರುವ ತ್ರಿವಿಕ್ರಮ ಈ ಮೂಲಕ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಸೆನ್ಶೇಷನ್ ಹುಟ್ಟಿಸಿದೆ,. . 

Published: 01st August 2020 11:06 AM  |   Last Updated: 01st August 2020 12:56 PM   |  A+A-


ತ್ರಿವಿಕ್ರಮ

Posted By : Raghavendra Adiga
Source : The New Indian Express

ವಿಕ್ರಮ್ ರವಿಚಂದ್ರನ್ ಅಭಿನಯದ ತ್ರಿವಿಕ್ರಮ ಚಿತ್ರದ ಆಡಿಯೋ ಹಕ್ಕುಗಳನ್ನು 50 ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ.  ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ನಾಯಕನಾಗಿರುವ ಚೊಚ್ಚಲ ಚಿತ್ರವಾಗಿರುವ ತ್ರಿವಿಕ್ರಮ ಈ ಮೂಲಕ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಸೆನ್ಶೇಷನ್ ಹುಟ್ಟಿಸಿದೆ. ಅರ್ಜುನ್ ಜನ್ಯಾ ಸಂಗೀತ ನೀಡಿರುವ ಮ್ಯೂಸಿಕ್ ಆಲ್ಬಮ್ ಹಕ್ಕುಗಳನ್ನು ಎ2 ಮ್ಯೂಸಿಕ್ ಖರೀದಿಸಿದೆ. ಸಹನಾ ಮೂರ್ತಿ ನಿರ್ದೇಶನದ ಈ ಚಿತ್ರಕ್ಕೆ  ವರಮಹಾಲಕ್ಷ್ಮಿ ಹಬ್ಬದಂದು ಅಧಿಕೃತ ಒಪ್ಪಿಗೆ ಮುದ್ರೆ ಬಿದ್ದಿದೆ.

ತಂಡವು ಈಗ ಸಂಗೀತ ನಿರ್ದೇಶಕರೊಂದಿಗೆ 6 ಹಾಡುಗಳ ಧ್ವನಿಮುದ್ರಣಕ್ಕೆ ತಯಾರಾಗುತ್ತಿದೆ, ಇದಕ್ಕಾಗಿ ಅವರು ಜನಪ್ರಿಯ ಗಾಯಕರಾದ ವಿಜಯ್ ಪ್ರಕಾಶ್, ಹರಿಚರಣ್, ಶ್ರೇಯಾ ಘೋಶಾಲ್, ಸಿದ್ ಶ್ರೀರಾಮ್, ಮತ್ತು ಸಂಜಿತ್ ಹೆಗ್ಡೆ ಅವರನ್ನು ಸಂಪರ್ಕಿಸಿದ್ದಾರೆ. ಬೆಂಗಳೂರು, ದಾಂಡೇಲಿ, ರಾಜಸ್ಥಾನ ಮತ್ತು ಬ್ಯಾಂಕಾಕ್‌ನ ವಿವಿಧ ಸ್ಥಳಗಳಲ್ಲಿ ಚಿತ್ರೀಕರಿಸಲಾದ ದೃಶ್ಯ ಹಾಗೂ ಹಾಡುಗಳಿದ್ದು ಸದ್ಯ ತಂಡವು ಎರಡು ಹಾಡುಗಳ ಚಿತ್ರೀಕರಣವನ್ನಷ್ಟೇ ಬಾಕಿ ಉಳಿಸಿಕೊಂಡಿದೆ. 

ತ್ರಿವಿಕ್ರಮ ಹೈ-ವೋಲ್ಟೇಜ್  ಲವ್ ಸ್ಟೋರಿ ಎಂದು ಹೇಳಲಾಗುತ್ತಿದೆ. ಗೌರಿ ಎಂಟರ್‌ಟೈನರ್ಸ್‌ನ ಬ್ಯಾನರ್ ಅಡಿಯಲ್ಲಿ ಇದನ್ನು ಸೊಮ್ಮಣ್ಣ ಮತ್ತು ಸುರೇಶ್ ನಿರ್ಮಿಸಿದ್ದಾರೆ, ಕಮರ್ಷಿಯಲ್ ಎಂಟರ್‌ಟೈನರ್ ನಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಆಕಾಂಕ್ಷಾ ಶರ್ಮಾ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿರುವ ತೆಲುಗಿನ ನಟಿ.  ರೊಮ್ಯಾಂಟಿಕ್ ಡ್ರಾಮಾದಲ್ಲಿ ಚಿಕ್ಕಣ್ಣ, ಸಾಧು ಕೋಕಿಲಾ, ಸುಚೇಂದ್ರ ಪ್ರಸಾದ್, ಶಿವಮಣಿ, ಆದಿ ಲೋಕೇಶ್, ಮತ್ತು ತೆಲುಗು ನಟ ಜಯಪ್ರಕಾಶ್ ಸೇರಿದಂತೆ ಪ್ರಮುಖರ ಅಭಿನಯವಿದೆ.  ಸಂತೋಷ್ ರೈ ಪತಾಜೆ  ಹಾಗೂ ಗುರುಪ್ರಶಾಂತ್ ರೈ ಛಾಯಾಗ್ರಹಣ ನೆರವೇರಿಸುತ್ತಿದ್ದಾರೆ. 

Stay up to date on all the latest ಸಿನಿಮಾ ಸುದ್ದಿ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp