'ರತ್ನನ್ ಪ್ರಪಂಚ'ಕ್ಕೆ ಕಾಲಿಟ್ಟ ಡಾಲಿ ಧನಂಜಯ್

ನಿರ್ಮಾಪಕ ವಿಜಯ್ ಕಿರಗಂಡೂರ್ ಅವರು ಕೆಆರ್ ಜೆ ಸ್ಟುಡಿಯೋಸ್‌ನ ಮೊದಲ ನಿರ್ಮಾಣವಾದ ರತ್ನನ್ ಪ್ರಪಂಚ ಚಿತ್ರದ ಸಿದ್ದತೆ ನಡೆಸಿದ್ದಾರೆ. ಡಾಲಿ ಧನಂಜಯ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರ ರೋಹಿತ್ ಪಡಕಿ ನಿರ್ದೇಶನದ ಕಾಮಿಡಿ ಡ್ರಾಮಾ ಆಗಿರಲಿದೆ. ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ
ಧನಂಜಯ್
ಧನಂಜಯ್

ನಿರ್ಮಾಪಕ ವಿಜಯ್ ಕಿರಗಂಡೂರ್ ಅವರು ಕೆಆರ್ ಜೆ ಸ್ಟುಡಿಯೋಸ್‌ನ ಮೊದಲ ನಿರ್ಮಾಣವಾದ ರತ್ನನ್ ಪ್ರಪಂಚ ಚಿತ್ರದ ಸಿದ್ದತೆ ನಡೆಸಿದ್ದಾರೆ. ಡಾಲಿ ಧನಂಜಯ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರ ರೋಹಿತ್ ಪಡಕಿ ನಿರ್ದೇಶನದ ಕಾಮಿಡಿ ಡ್ರಾಮಾ ಆಗಿರಲಿದೆ. ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.

ಮೂರು ವರ್ಷಗಳಿಂದ ಚಿತ್ರ ವಿತರಣೆ ಕ್ಷೇತ್ರದಲ್ಲಿರುವ ಕೆಆರ್ ಜೆ ಸ್ಟುಡಿಯೋಸ್ ಕಂಪನಿಯು ಇತ್ತೀಚೆಗೆ ತಮ್ಮದೇ ಡಿಜಿಟಲ್ ಮಾರ್ಕೆಟಿಂಗ್ ಸೊಲ್ಯೂಷನ್ ಪ್ರಾರಂಭಿಸಿದೆ. ಕೆಆರ್ ಜೆ ಕನೆಕ್ಟ್ಸ್.  ಎಂಬ ಹೆಸರಿನಲ್ಲಿ ಈ ಸಂಸ್ಥೆ ಕಾರ್ಯಾಚರಿಸಲಿದೆ. ನಟರಾದ ಯಶ್ ಮತ್ತು ರಾಧಿಕಾ ಪಂಡಿತ್ ಇದಕ್ಕೆ ಚಾಲನೆ ನೀಡಿದ್ದಾರೆ. ಈ ನಂತರ ವಿತರಣಾ ಕಂಪನಿ ಪ್ರೊಡಕ್ಷನ್ ಉದ್ಯಮದಲ್ಲಿ ತನ್ನ ಮೊದಲ ಹೆಜ್ಜೆ ಇಡುತ್ತಲಿದೆ.ರತ್ನನ್ ಪ್ರಪಂಚ ಚಿತ್ರದ . ಫಸ್ಟ್ ಲುಕ್ ಪೋಸ್ಟರ್ ವರಾಮಹಲಕ್ಷ್ಮಿಹಬ್ಬದಂದು  ಬಿಡುಗಡೆಯಾಗಿದೆ.

ರತ್ನನ್ ಪ್ರಪಂಚ  ಕಥೆಯನ್ನು ನಿರ್ದೇಶಕ ರೋಹಿತ್  ಅವರ ತಂಡದ ಸದಸ್ಯರೊಡನೆ ಕೂಡು ಬರೆದಿದ್ದಾರೆ. ಶ್ರೀಷ ಕುಡುವಳ್ಳಿ ಛಾಯಾಗ್ರಹಣ,  ಅಜನೀಶ್ ಲೋಕಾಂತ್ ಸಂಗೀತ  ಚಿತ್ರಕ್ಕೆ ಇರಲಿದೆ. ಎಡಿಟಿಂಗ್ ಡೆಸ್ಕ್ ಅನ್ನು ದೀಪು ಎಸ್ ಕುಮಾರ್ ನೋಡಿಕೊಳ್ಳಲಿದ್ದು, ಶಿವಕುಮಾರ್  ಆರ್ಟ್ ಡಿಪಾರ್ಟ್ ಮೆಂಟ್ ಅನ್ನು ನಿರ್ವಹಿಸಲಿದ್ದಾರೆ. ನಿರ್ದೇಶಕರ ಪ್ರಕಾರ, ರತ್ನನ್ ಪ್ರಪಂಚ ಚಿತ್ರದಲ್ಲಿನ ಧನಂಜಯ್ ರತ್ನನ ಪಾತ್ರ ಚಿತ್ರ್ರಂಗದ ಇತಿಹಾಸದಲ್ಲೊಂದು ಹೊಸ ಅಧ್ಯಾಯ ರಚಿಸಲಿದೆ.

"ಚಿತ್ರವು ಹಾಸ್ಯ ಮತ್ತು ಎಮೋಷನ್ ಗಳೊಂದಿಗೆ ಬೆರೆತಿರಲಿದೆ."ನಿರ್ದೇಶಕರು ಹೇಳುತ್ತಾರೆ, ಧನಂಜಯ್ ಅವರನ್ನು ಸಾಮಾನ್ಯ ವ್ಯಕ್ತಿಯಂತೆ ತೋರಿಸಲಾಗಿದ್ದು ದೆ. “ಈ ಚಿತ್ರವು ತಾಯಿ ಮತ್ತು ಮಗನ ನಡುವಿನ ಮೌಲ್ಯಗಳನ್ನು ಮತ್ತು ಅವಳ ಮಕ್ಕಳೊಂದಿಗಿನ ಸಂಬಂಧವನ್ನು ಸಹ ಪರಿಶೋಧಿಸುತ್ತದೆ. ಇವೆಲ್ಲವೂ  ಸಹ ಹಾಸ್ಯದ ಲೇಪನದೊಡನೆ ಬರುತ್ತದೆ"

ನಿರ್ಮಾಪಕ ಯೋಗಿ ಜಿ ರಾಜ್ ಅವರು ಉತ್ತಮ ಯೋಜನೆಯೊಂದು ಸಿಕ್ಕರೆ ಪ್ರೊಡಕ್ಷನ್ ಉದ್ಯಮ ಪ್ರಾರಂಭಿಸಲು ಯೋಜಿಸುತ್ತಿದ್ದು ಇದೀಗ ರತ್ನನ್ ಪ್ರಪಂಚ ಅವರಿಗೆ ಹೊಸ ದಾರಿಗೆ ಕರೆದೊಯ್ದಿದೆ.  “ಇದು ರತ್ನನ್ ಪ್ರಪಂಚ ದೊಡನೆ ಬಂದಿದೆ. . ಈ ಲಾಕ್‌ಡೌನ್ ಸಮಯದಲ್ಲಿ ಎಲ್ಲವನ್ನೂ ಅಂತಿಮಗೊಳಿಸಲಾಗಿದೆ. ಪ್ರಸ್ತುತ, ಚಿತ್ರಕ್ಕಾಗಿನ ತಯಾರಿ ನಡೆಯುತ್ತಿದ್ದು ಸೆಪ್ಟೆಂಬರ್‌ನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ನಾವು ಸಿದ್ಧರಾಗಿದ್ದಿದ್ದರೆ ಇನ್ನೂ ಮೊದಲೇ ಪ್ರಾರಂಭಿಸಬಹುದಾಗಿದೆ"  ನಿರ್ಮಾಪಕ ಕಾರ್ತಿಕ್ ಗೌಡ, ರತ್ನನ್ ಪ್ರಪಂಚ ಸಮಕಾಲೀನ ಕಥಾನಕವಾಗಿದೆ. ಜತೆಗೆ ಹೊಸ ಯುಗದ ಚಿತ್ರವಾಗಲಿದೆ ಎನ್ನುತ್ತಾರೆ.

“ಈ ಚಿತ್ರವು ಕೇಂದ್ರ ಪಾತ್ರವಾದ ರತ್ನಾಕರನ ಜೀವನ ಪಯಣವನ್ನು ಅನುಸರಿಸುತ್ತದೆ. ನಾವು ಬೆಂಗಳೂರು, ಮೈಸೂರು, ಮಲೆನಾಡು, ಗದಗ ಮೊದಲಾದ ಸ್ಥಳಗಳಲ್ಲಿ ಶೂಟಿಂಗ್ ನಡೆಸಲು ನಿರ್ಧರಿಸಿದ್ದೇವೆ. ಸಾಂಕ್ರಾಮಿಕ ರೋಗದ ತೀವ್ರತೆಯನ್ನು ಅರಿತು ಸಿ ನಾವು ಕಾಶ್ಮೀರ ಅಥವಾ ಕೇರಳ ಶೂಟಿಂಗ್ ಬಗ್ಗೆ ಮುಂದೆ ತೀರ್ಮಾನಿಸಲಿದ್ದೇವೆ." ನಿರ್ಮಾಪಕರು ಹೇಳಿದ್ದಾರೆ. ಇದಾಗಲೇ ತಾಂತ್ರಿಕ ವಿಭಾಗದ ಪ್ರಮುಖರನ್ನು ಅಂತಿಮಗೊಳಿಸಲಾಗಿದ್ದು ನಾಯಕಿ ಮತ್ತು ಉಳಿದ ಕಲಾವಿದರನ್ನು  ಇನ್ನಷ್ಟೇ ಆಯ್ಕೆ ಮಾಡಬೇಕಿದೆ, 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com